ಭಟ್ಕಳದಲ್ಲಿ ಭಾರತ್ ವಿಕಾಸ್ ಪರಿಷತ್ ಸಹಯೋಗದಲ್ಲಿ ಬೇಸಿಗೆ ಶಿಬಿರ

ಭಟ್ಕಳ: ತಾಲೂಕಿನ ಭಾರತ ವಿಕಾಸ ಪರಿಷತ್‌, ಆರೋಗ್ಯ ಭಾರತಿ, ಅಮಿತಾಕ್ಷ ಯೋಗ ಟ್ರಷ್ಟ ಇವರ ಸಹಯೋಗದೊಂದಿಗೆ ಕಾಶಿಮಠ ಸಭಾಭವನದಲ್ಲಿ ಉಚಿತ ಆರೋಗ್ಯ ಶಿಭಿರವನ್ನು ಹಮ್ಮಿಕೊಳ್ಳಲಾಯಿತು

ಕಾರ್ಯಕ್ರಮದಲ್ಲಿ ಭಾರತ್‌ ವಿಕಾಸ ಪರೀಷತ್‌ ಅಧ್ಯಕ್ಷ ಪ್ರಕಾಶ ನಾಯ್ಕ ಮಾತನಾಡಿ ನಮ್ಮ ಸಂಸ್ಕ್ರತಿ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಾಗಿರುವುದು ನಮ್ಮ ಕರ್ತವ್ಯ ಇತ್ತಿಚೆಗೆ ನಮ್ಮ ಪರಂಪರೆಗಳನ್ನು ಯುವ ಜನತೆ ಮರೆಯುತ್ತ ಬಂದಿರುವುದು ಬಹಳ ವಿಷಾದನೀಯ ಸಂಗತಿಯಾಗಿದೆ ನಾವೆ ನಮ್ಮ ಪರಂಪರೆಯನ್ನು ಮರೆತು ಹೋದರೆ ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವವರಾದರು ಯಾರು ಕಾರಣ ಇಂದು ನಮ್ಮ ಪರಂಪರೆಯನ್ನು ಮಕ್ಕಳಿಗೆ ಪರಿಚಯಿಸುವ ನಿಟ್ಟಿನಲ್ಲಿ ಬೇಸಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು

ಆರೋಗ್ಯ ಭಾರತಿಯ ದೇವೆಂದ್ರ ಹಾಗು ತಿಮ್ಮಪ್ಪ ನಾಯ್ಕ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಶಿಭಿರದಲ್ಲಿ ಮಕ್ಕಳಿಗೆ ದೇಶದ ಪರಂಪರೆ ಆಧ್ಯಾತ್ಮ ಕಲೆ ಸಂಸ್ಕ್ರತಿ ಮುಂತಾದ ವಿಷಯಗಳ ಬಗ್ಗೆ ತಿಳಿಸಿಕೊಟ್ಟರು

ಪರಶುರಾಮ ದೇವಸ್ಥಾನದ ಅಧ್ಯಕ್ಷರಾದ ಶ್ರೀದರ ವಸಂತ ಶಾನಬಾಗ್‌ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು , ಕಿರಣ್ ಶಾನಬಾಗ್‌ ಅವರು‌ ಕಾರ್ಯಕ್ರಮದ ರೂಪುರೇಷೆಯನ್ನು ತಯಾರಿಸಿ ನಿರೂಪಣೆಯನ್ನು ನಡೆಸಿಕೊಟ್ಟರೆ , ಅರ್ಜುನ್‌ ಮಲ್ಯ ಅವರು ವಂದನಾರ್ಪಣೆಯನ್ನು ಮಾಡಿದರು

ಉದ್ಯಮಿಗಳಾದ ದಿಗಂಬರ್‌ ಅಣ್ಣಪ್ಪ ಶೇಟ್‌, ಭಟ್ಕಳ ತಾಲೂಕಿನ ವಿಶ್ವ ಹಿಂದೂ ಪರಿಷತ್‌ ಅಧ್ಯಕ್ಷರಾದ ಶಂಕರ್‌ ಶೆಟ್ಟಿ, ಭಟ್ಕಳ ಅಗ್ನಿಶಾಮಕ ದಳದ ರಮೇಶ ಕುಮಾರ್‌ ವೇದಿಕೆಯಲ್ಲಿ ಇದ್ದರು

ಈ ಸಂದರ್ಬದಲ್ಲಿ ಭಾರತ್‌ ವಿಕಾಸ ಪರಿಷತ್ತಿನ ಶ್ರೀನಿವಾಸ ನಾಯ್ಕ , ಸಂದಿಪ್‌ ಶೇಟ್‌, ನಾಗೇಶ ನಾಯ್ಕ ದೇವೆಂದ್ರ ನಾಯ್ಕ ಮುಂತಾದವರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top