ಭಟ್ಕಳ ಮುರ್ಡೆಶ್ವರ ಬೀನಾ ವೈದ್ಯ ವಿಧ್ಯಾ ಸಂಸ್ಥೆಯಲ್ಲಿ ಏಪ್ರೀಲ್‌ 4 ರಿಂದ ಬೇಸಿಗೆ ಶಿಬಿರ ಪ್ರಾರಂಭ


ಭಟ್ಕಳ: ತಾಲೂಕಿನ ಮುರ್ಡೇಶ್ವರ ಪ್ರತಿಷ್ಟೀತ ವಿಧ್ಯಾಸಂಸತೆಯಾದ ಬೀನಾ ವೈಧ್ಯ ಶಿಕ್ಷಣ ಸಂಸ್ಥೆಯಲ್ಲಿ ಏಪ್ರೀಲ್‌ ತಿಂಗಳ ಬೇಸಿಗೆ ಶಿಬಿರವನ್ನು ನಡೆಸಲಾಗುವುದು ಎಂದು ವಿಧ್ಯಾ ಸಂಸ್ಥೆಯ ಮ್ಯಾನೆಜಿಂಗ್‌ ಡೈರೆಕ್ಟರ್‌ ಪುಷ್ಪಲತಾ ವೈದ್ಯ ಅವರು ತಿಳಿಸಿದ್ದಾರೆ

ತಿಂಗಳ ಪರೀಕ್ಷೆಗಳು ಮುಗಿದು ಎಪ್ರೀಲ್‌ನ ಬೇಸಿಗೆ ಶಿಬಿರಗಳ ಹುಡುಕಾಟವನ್ನು ಪಾಲಕರು ಆರಂಭಿಸಿದ್ದಾರೆ. ಎಪ್ರೀಲ್‌ನಲ್ಲಿ ನಡೆಯುವ ಶಿಬಿರಗಳ ಬಗ್ಗೆ ಪಾಲಕರು, ಎಲ್ಲಿ ಶಿಬಿರಗಳು ನಡೆಯುತ್ತವೆ, ಯಾವ ತರಬೇತಿಗಳನ್ನು ಶಿಬಿರದಲ್ಲಿ ನೀಡಲಾಗುತ್ತದೆ ಎಂಬ ಕುತೂಹಲ ಮತ್ತು ಆಯ್ಕೆಯಲ್ಲಿರುವ ಪಾಲಕರಿಗೊಂದು ಉತ್ತಮ ಆಯ್ಕೆ ಮುರ್ಡೇಶ್ವರದ “ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಬೇಸಿಗೆ ಶಿಬಿರ”.
ದಿನಾಂಕ: ೦೪/೦೪/೨೦೨೨ ರಿಂದ ೧೫/೦೪/೨೦೨೨ ತನಕ ನಡೆಯುವ ನಲಿಯೋಣ ಬಾ ಮಕ್ಕಳ ಬೇಸಿಗೆ ಶಿಬಿರವು ೫ ರಿಂದ ೧೪ ನೇ ವಯಸ್ಸಿನ ಮಕ್ಕಳಿಗಾಗಿ ಶಿಬಿರವು ಬೀನಾ ವೈದ್ಯ ಶಾಲೆಯಲ್ಲಿ ನಡೆಯುತ್ತಿದೆ. ಮಕ್ಕಳು ಶಿಬಿರದಲ್ಲಿ ಎಲ್ಲರೊಂದಿಗೆ ಬೆರೆಯುತ್ತಾ, ನಲಿಯುತ್ತಾ ಕಲಿಯುವ ಕಲಿಕೆಯು ನವ ಉತ್ಸಾಹವನ್ನು, ಆತ್ಮಸ್ಥೈರ್ಯವನ್ನು ಚಿಣ್ಣರಲ್ಲಿ ತುಂಬುತ್ತದೆ.
ತರಗತಿಯ ಕೋಣೆಯಲ್ಲಿ ಕಲಿತ ಶಿಕ್ಷಣ ಪರೀಕ್ಷೆಗೆ ಸೀಮಿತವಾಗಿರುತ್ತದೆ. ಆದರೆ ಇಂತಹ ಶಿಬಿರದಲ್ಲಿ ದೊರೆಯುವ ಶಿಕ್ಷಣ ಜೀವನಕ್ಕೆ ಅನುಕೂಲವಾಗಿರುತ್ತದೆ. ಶಿಕ್ಷಣದ ಜೊತೆ ಜೀವನ ಕೌಶಲ್ಯಗಳನ್ನು ಮತ್ತು ಮೌಲ್ಯಗಳನ್ನು ಬೆಳೆಸುತ್ತದೆ….
ಶಿಬಿರದಲ್ಲಿ, ಭಾಷಾಕೌಶಲ್ಯ, ನೃತ್ಯ, ಸಂಗೀತಾ, ಕರಾಟೆ, ಚಿತ್ರಕಲೆ, ಯಕ್ಷಗಾನ, ಯೋಗ, ಆರ್ಟ್ & ಕ್ರಾಫ್ಟ್, ಮೆಂಟಲ್ ಅರ್ಥಮೆಟಿಕ್, ಪಬ್ಲಿಕ್ ಸ್ಪೀಕಿಂಗ್, ಸ್ಪೋಕನ್ ಇಂಗ್ಲೀಷ್, ಸ್ಪೆಲ್ ಬೀ, ಸ್ಟೋರಿ ಟೆಲ್ಲಿಂಗ್, ರಂಗೋಲಿ, ಕುಕ್ಕಿಂಗ್, ವೆಜಿಟೇಬಲ್ ಕಾರ್ವಿಂಗ್, ಕ್ರೀಡೆ ಹೀಗೆ ವಿವಿಧ ರೀತಿಯ ಆಟಗಳ ಜೊತೆಗೆ ಇನ್ನೂ ಅನೇಕ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಹೆಚ್ಚಿನ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಲು ಬೀನಾ ವೈದ್ಯ ಶಿಕ್ಷಣ ಸಂಸ್ಥೆಯು ಮನವಿ ಮಾಡಿದೆ.

WhatsApp
Facebook
Telegram
error: Content is protected !!
Scroll to Top