ಭಟ್ಕಳ ವಿಧ್ಯಾಂಜಲಿ ಪಬ್ಲಿಕ್ ಸ್ಕೂಲಿನಲ್ಲಿ ಚಿಣ್ಣರ ಮೇಳ

ಸುದರ್ಶನ್ ನಾಯ್ಕ ಸಾರಥ್ಯದಲ್ಲಿ ಚಿಣ್ಣರ ಮೇಳ

ಭಟ್ಕಳ ಕಲಾ ಕ್ಷೇತ್ರಕ್ಕೆ ನಮ್ಮ ಭಟ್ಕಳ ತಾಲೂಕು ಬರಡು ಭೂಮಿ ಎಂದರೆ ತಪ್ಪಾಗಲಿಕ್ಕಿಲ್ಲಾ ಹೀಗಿರುವಾಗ‌ ಸುದರ್ಶನ್ ನಾಯ್ಕ ಅವರ ಈ ಕಲಾ ಸೇವೆ ಆದರ್ಶಮಯ ಎಂದು ಶಾಸಕ ಸುನಿಲ್ ನಾಯ್ಕ  ವಿಧ್ಯಾಂಜಲಿ ಪಬ್ಲಿಕ್ ಸ್ಕೂಲಿನಲ್ಲಿ ನಡೆದ ಚಿಣ್ಣರ ಮೇಳದಲ್ಲಿ ಹೇಳಿದರು

ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದ ಅವರು ಮಕ್ಕಳ ಮುಂದಿನ ಭವಿಷ್ಯ ಪಾಲಕರ ಕೈಯಲ್ಲಿಯೆ ಇರುತ್ತದೆ ಪಾಲಕರು ಮಕ್ಕಳ ಅಭಿರುಚಿಯನ್ನು ಆಸಕ್ತಿಯನ್ನು ಗುರುತಿಸಿ ಮಕ್ಕಳಿಗೆ ಪ್ರೇರಣೆಯನ್ನು ನೀಡಬೇಕು  ಪಾಲಕರು ಮಕ್ಕಳ ಮೇಲೆ ತಾವುದೇ ಒತ್ತಡವನ್ನು ಹಾಕದೆ ಅವರ ‌ಆಸಕ್ತಿಯ ಕ್ಷೇತ್ರ ಅವರೆ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಬೇಕು ಎಂದು ಹೇಳಿದರು.

ಇದೆ ಸಂದರ್ಬದಲ್ಲಿ ಬಿಜೆಪಿ  ನಾಯಕಿಯರಲ್ಲೊಬ್ಬರು ಹಾಗು ಕಟ್ಟಡ ಕಾರ್ಮಿಕ ಮಂಡಳಿ ರಾಜ್ಯ ಪ್ರತಿನಿದಿ ಶಿವಾನಿ ಶಾಂತರಾಮ್  ಮಾತನಾಡಿ  ಇಂದಿನ‌ ಮಕ್ಕಳೆ ದೇಶದ ಮುಂದಿನ ಭವಿಷ್ಯವಾಗಿದ್ದಾರೆ ಪಾಲಕರಾದವರು ತಮ್ಮ ಮಕ್ಕಳ ಮೇಲೆ ಯಾವತ್ತು ಒತ್ತಡಗಳನ್ನು ಹಾಕಬಾರದು ಮಕ್ಕಳಿಗೆ ಸ್ವತಂತ್ರವಾಗಿ ತಮ್ಮ‌ ಭವಿಷ್ಯದ ದಾರಿಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಬೇಕು ಎಂದು ಹೇಳಿದರು

ಈ ಸಂದರ್ಬದಲ್ಲಿ ಡಿಂಗ್ರಿ ನಿನಾಸಂ ಅವರು ಶಾಸಕ ಸುನಿಲ್ ನಾಯ್ಕ ಅವರಲ್ಲಿ ರಂಗ ಭೂಮಿಯ ನಾಟಕ, ನೃತ್ಯ , ಚಿತ್ರಕಲೆ ಕ್ಷೇತ್ರದ ಬಗ್ಗೆ ಶಾಲೆಗಳಲ್ಲಿ ಬೊದಿಸುವಂತಾಗ ಬೇಕು ಈ ಬಗ್ಗೆ ವಿದಾನ‌ಸಭಾ ಕಲಾಪದಲ್ಲಿ ಶಾಸಕರು ಪ್ರಸ್ತಾಪವನ್ನು ಮಾಡಬೇಕು ಎಂದು ವಿನಂತಿಸಿಕೊಂಡರು

ಕಾರ್ಯಕ್ರಮದಲ್ಲಿ ಖ್ಯಾತ ವೈದ್ಯರಾದ ಆರ್ ವಿ ಸರಾಪ್ ಅಧ್ಯಕ್ಷತೆಯನ್ನು ವಹಿಸಿದ್ದರು ಹಾಗು ಶಿಕ್ಷಕರಾದ ಪ್ರಕಾಶ್ ಶಿರಾಲಿ ಅವರು ಕಾರ್ಯಕ್ರಮಕ್ಕೆ ಗಣ್ಯಾತಿಗಣ್ಯರನ್ನು ಸ್ವಾಗತಿಸಿದರೆ ಲತಾ ನಾಯ್ಕ ಬೆಂಗಳೂರು ಇವರು ನಿರುಪಣೆ ಮಾಡಿದರು

ಕಾರ್ಯಕ್ರಮದಲ್ಲಿ ಕಲಾವಿದರಾದ ಶ್ರೀಮತಿ ಸಂದ್ಯಾ ಅರಕೇರೆ, ರಾಜೇಶ ಕುಂದರ್ ಶಿವಮೊಗ್ಗ, ವರದರಾಜ ಶಿವಮೊಗ್ಗ, ಯೋಗರಾಜ್ ಗುರುರಾಜ ಶ್ವೇತಾ ನಾಯ್ಕ ಮನೊಹರ್ ಆಚಾರ್ಯ , ಗೋವಿಂದ ದೇವಾಡಿಗ , ಸಂತೋಷ ಗೋಪಾಲ ಬೆಂಗಳೂರು , ಸುನಿಲ್ ಮಿಶ್ರಾಹಾಗು ಇನ್ನಿತರ ಕಲಾವಿದರು ಹಾಜರಿದ್ದು‌ ಪ್ರೋತ್ಸಾಹಿಸಿದರು.

ವೇದಿಕೆಯಲ್ಲಿ ಅಂತರಾಷ್ಟ್ರೀಯ ಕಲಾವಿದರಾದ ಬಾಬು ರಾವ್ ನಿಡೋಣಿ ಬೆಳಗಾವಿ ಶಿರಾಲಿ ದುರ್ಗಾಪರಮೇಶ್ವರಿ ದೇವಸ್ಥಾನ್ ಧರ್ಮಧರ್ಶಿ ನಾರಾಯಣ ದೈಮನೆ, ಭಟ್ಕಳ ಸರಕಾರಿ ನೌಕರ ಸಂಘದ ಅಧ್ಯಕ್ಷ ಮೊಹನ ನಾಯ್ಕ ಮುಂತಾದವರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top