ಪರಿಶಿಷ್ಟರಲ್ಲದವರಿಗೆ ಜಾತಿ ಪ್ರಮಾಣ ಪತ್ರ ನೀಡಿದರೆ ನೈಜ ಪರಿಶಿಷ್ಟರಿಗೆ ಅನ್ಯಾಯ

ಪರಿಶಿಷ್ಟರಿಂದ ಭಟ್ಕಳ ಸಹಾಯಕ ಆಯುಕ್ತರಿಗೆ ಮನವಿ

ಭಟ್ಕಳ ಜಿಲ್ಲೆಯಲ್ಲಿ ಮೊಗೇರ್ ಸಮಾಜದವರು ತಮಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವಂತೆ ಪ್ರತಿಭಟನೆ ನಡೆಸುತ್ತಿದ್ದು ಒಂದು ವೇಳೆ ಇವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ನಿಡಿದ್ದೆ ಆದಲ್ಲಿ ನಮಂತ ನೈಜ ಪರಿಶಿಷ್ಟರಿಗೆ ದ್ರೋಹ ಬಗೆದಂತೆ ಆಗುತ್ತದೆ ಎಂದು ದಲಿತ ಸಂಘಟನೆ ಹಾಗು ಪರಿಶಿಷ್ಟ ಸಮಾಜದವರು ತಾಲೂಕ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಹಲವಾರು ದಿನಗಳಿಂದ ಉತ್ತರ ಕನ್ನಡ ಜಿಲ್ಲೆಯ ಮೊಗೇರ್ ಸಮಾಜದವರು ತಮಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ನೀಡಬೇಕು ಎಂದು ಭಟ್ಕಳ ತಾಲೂಕಾಡಳಿತದ ಮುಂದೆ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು ಈ ಹಿನ್ನೆಲೆಯಲ್ಲಿ ಭಟ್ಕಳ ಹೊನ್ನಾವರ ಕ್ಷೇತ್ರದ ಶಾಸಕ ಸುನಿಲ್ ನಾಯ್ಕ ಮೊಗೇರ್ ಸಮಾಜಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವುದ ಕುರಿತು ಬುದುವಾರ ವಿಧಾನ ಸೌದ ಕಲಾಪದಲ್ಲಿ ಪ್ರಸ್ತಾಪವನ್ನು ಮಾಡಿದರು ಆದರೆ ಕರ್ನಾಟಕ ಸರಕಾರ ಇವರ ಪ್ರಸ್ತಾಪವನ್ನು ಸಾರಾಸಗಾಟಾಗಿ ತಳ್ಳಿಹಾಕಿತ್ತು ಇದರಿಂದ ಮೊಗೇರ್ ಸಮುದಾಯ ಮೊದಲೆ ರೊಚ್ಚಿಗೆದ್ದಿತ್ತು ಹೀಗಿರುವಾಗ ತಾಲೂಕಿನಲ್ಲಿ ದಲಿತ ಸಂಘಟನೆ ಮೊಗೇರ್ ಸಮುದಾಯಕ್ಕೆ ಯಾವುದೇ ಕಾರಣಕ್ಕೂ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಬಾರದು ಎಂದು ತಾಲೂಕಿನಲ್ಲಿ ಪ್ರತಿಭಟನಾ ಮೇರವಣಿಗೆ ನಡೆಸಿ ಸಹಾಯಕ ಆಯುಕ್ತರಿಗೆ ಮನವಿಯನ್ನು ಸಲ್ಲಿಸಿದರು

ದಲಿತ ಸಂಘಟನೆ ಗುರುವಾರ ಸಂಜೆ ತಾಲೂಕಿನ ದಂಡಿನ ದುರ್ಗಾ ಪರಮೇಶ್ವರಿ ದೇವಸ್ಥಾನದಿಂದ ಹೊರಟು ಶಂಶುದ್ದೀನ್ ಸರ್ಕಲ್ ಮುಖಾಂತರ ಬಂದು ಸಹಾಯಕ ಆಯುಕ್ತರ ಕಛೇರಿಗೆ ತೆರಳಿ ಮನವಿಯನ್ನು ಸಲ್ಲಿಸಿತ್ತು ದಲಿತ ಸಂಘಟನೆ ಸಹಾಯಕ ಆಯುಕ್ತರ ಕಛೇರಿ ಆವರಣ ತಲುಪಿದ ಸಂದರ್ಬದಲ್ಲಿ ಒಂಬತ್ತು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ಮೊಗೇರ್ ಸಮುದಾಯ ಕೊಪದಿಂದ ದಲಿತ ಸಂಘಟನೆಯ ಮೆರವಣಿಗೆ ಮೇಲೆ ಓಮ್ಮಿಂದೊಮ್ಮೆ ಏರಿಹೊಗುವ ಎಲ್ಲಾ ಲಕ್ಷಣ ಕಂಡು ಬಂದಿತ್ತು ಪರಿಸ್ಥಿತಿ ಉದ್ವಿಗ್ನತೆಯ ಕಡೆ ಸಾಗಿತ್ತು ಆದರೆ ಪೋಲಿಸ್ ಇಲಾಖೆಯ ಮುಂಜಾಗ್ರತಾ ಕ್ರಮದ ಕಾರಣ ಮುಂದಾಗ ಬೇಕಿದ್ದ ದೊಡ್ಡ ಅವಘಡ ಕುದಲೆಳೆಯ ಅಂತರದಲ್ಲಿ ತಪ್ಪಿಹೊಯಿತು ಎಂದರೆ ತಪ್ಪಾಗಲಿಕ್ಕಿಲ್ಲಾ

ಒಟ್ಟಾರೆ ಈ ಪರಿಶಿಷ್ಟ ಜಾತಿ ಪ್ರಮಾಣ ಪತ್ರದ ಕಾರಣ ಎರಡು ಸಮಾಜದ ಮದ್ಯ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದೆ ತಾಲೂಕಿನಲ್ಲಿ ಇಷ್ಟೇಲ್ಲಾ‌ ಉದ್ವಿಗ್ನತೆ ಉಂಟಾದರು ಕೂಡ ಜಿಲ್ಲಾಡಳಿತ ಮಾತ್ರ ತನಗೂ ಇದಕ್ಕೂ ಬಂದವೇ ಇಲ್ಲವೇನೊ ಎಂಬಂತೆ ಕಣ್ಮುಚ್ಚಿ ಕುಳಿತಿದೆ ಜಿಲ್ಲಾಡಳಿತದ ಈ ನಡೆ ಹೀಗೆ ಮುಂದುವರಿದಿದ್ದೆ ಆದಲ್ಲಿ ತಾಲೂಕಿನಲ್ಲಿ ಈ ಎರಡು ಸಮಾಜದ ಮದ್ಯ ಹೊತ್ತಿರುವ ಬೆಂಕಿ ಹೆಚ್ಚಾಗಿ ಎನಾದರು ಅವಘಡಗಳು ಸಂಭವಿಸುವುದರಲ್ಲಿ ಯಾವುದೆ ಅನುಮಾನಗಳಿಲ್ಲಾ.

WhatsApp
Facebook
Telegram
error: Content is protected !!
Scroll to Top