ವಿಧಾನ ಸೌದ ಕಲಾಪದಲ್ಲಿ ಮೊಗೇರ್ ಸಮುದಾಯಕ್ಕೆ ಜಾತಿ ಪ್ರಮಾಣ ಪತ್ರ ನೀಡುವ ಬಗ್ಗೆ ಪ್ರಸ್ತಾಪಿಸಿದ ಶಾಸಕ ಸುನಿಲ್ ನಾಯ್ಕ

ಪ್ರಸ್ತಾಪವನ್ನು ನಿರ್ದಾಕ್ಷಿಣ್ಯವಾಗಿ ತಳ್ಳಿಹಾಕಿದ ಬಿಜೆಪಿ ಸರಕಾರ: ಬೆಂಕಿಯಿಂದ ಬಾಣಲೆಗೆ ಎಂಬತಾಯಿತು ಮೊಗೇರ್‌ ಸಮಾಜದ ಪರಿಸ್ಥಿತಿ

ಭಟ್ಕಳ: ಮೊಗೇರ್ ಸಮುದಾಯಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನಿಡುವ ಬಗ್ಗೆ ವಿಧಾನ ಸಭಾ ಕಲಾಪದಲ್ಲಿ ಭಟ್ಕಳ ಹೊನ್ನಾವರ ಕ್ಷೇತ್ರದ ಶಾಸಕ ಸುನಿಲ್ ನಾಯ್ಕ ಪ್ರಸ್ತಾಪವನ್ನು ಮುಂದಿಟ್ಟ ಹಿನ್ನೆಲೆಯಲ್ಲಿ ಸರಕಾರದ ಪ್ರತಿನಿದಿಯಾದ ಕಾರ್ಜೋಳ ಅವರು ಶಾಸಕ ಸುನಿಲ್ ನಾಯ್ಕ ಪ್ರಸ್ತಾಪವನ್ನು ಸಾರಾಸಗಾಟಾಗಿ ತಿರಸ್ಕರಿಸಿದರು

ಇರಲಾರದೆ ಅದೆಲ್ಲೋ ಇರುವೆ ಬಿಟ್ಟುಕೊಂಡರು ಎಂಬಂತಾಗಿದೆ ನಮ್ಮ ಶಾಸಕ ಸುನಿಲ್ ನಾಯ್ಕ ಅವರ ಪರಿಸ್ಥಿತಿ ಏನೋ ಲೆಕ್ಕಾಚಾರ ಮಾಡಿ ಶಾಸಕರೆನೊ ಮೊಗೇರ್ ಸಮುದಾಯದ ಪರಿಶಿಷ್ಟ ಜಾತಿ ಪ್ರಮಾಣ ಪತ್ರಕ್ಕಾಗಿ ವಿಧಾನ ಸೌದ ಕಲಾಪದಲ್ಲಿ ಪ್ರಸ್ತಾಪವನ್ನು ಇಟ್ಟಿದ್ದಾಯಿತು ಆದರೆ ಸರಕಾರದ ಪರವಾಗಿ ಕಾರ್ಜೊಳ ಅವರು ಶಾಸಕ ಸುನಿಲ್ ನಾಯ್ಕ ಅವರ ಪ್ರಸ್ತಾಪವನ್ನು ಸಾರಾಸಗಾಟಾಗಿ ತಳ್ಳಿಹಾಕಿದ್ದಾರೆ. ಶಾಸಕರೆನೋ ಮೊಗೇರ್ ಸಮಾಜಕ್ಕೆ ಜಾತಿ ಪ್ರಮಾಣ ಪತ್ರ ನಿಡುವ ಉಮ್ಮಸ್ಸಿನಿಂದ ಪ್ರಸ್ತಾಪವನ್ನು ಮಾಡಿದರು ಆದರೆ ಶಾಸಕರ ಪ್ರಸ್ತಾಪವೆ ಮೊಗೇರ್ ಸಮಾಜಕ್ಕೆ ಮುಳುವಾಯಿತು ಎಂದರೆ ತಪ್ಪಾಗಲಿಕ್ಕಿಲ್ಲಾ .ಶಾಸಕರ ಪ್ರಸ್ತಾಪದಿಂದ ನಮ್ಮ ಮೊಗೇರ್‌ ಸಮಾಜಕ್ಕೆ ಯಾವುದೇ ಪ್ರಯೋಜನವಾಗಲಿಲ್ಲ ಎನ್ನುತ್ತಿದ್ದಾರೆ ಮೊಗೇರ್‌ ಸಮಾಜದ ಮುಖಂಡರು

ಈ ಬಗ್ಗೆ ಮೊಗೇರ್‌ ಸಮಾಜದ ಮುಖಂಡರಾದ ಎಪ್‌ ಕೆ ಮೊಗೇರ್‌ ಮಾತನಾಡಿ ನಾವು ಪರಿಶಿಷ್ಟ ಜಾತಿ ಪ್ರಮಾಣ ಹೊರಾಟ ನಡೆಸುತ್ತಿರುವುದು ಇದು ಒಂಬತ್ತು ದಿನಗಳಾಗಿದೆ ಯಾವುದೆ ಜನಪ್ರತಿನಿದಿ ಸರಕಾರ ಗಮನವನ್ನು ಹರಿಸುತ್ತಿಲ್ಲಾ ಶಾಸಕ ಸುನಿಲ್‌ ನಾಯ್ಕ ಪ್ರಸ್ತಾಪದಿಂದ ನಮಗೆ ನಷ್ಟವಾಗಿದೆಯೆ ಹೊರತು ಲಾಭವಾಗಿಲ್ಲಾ ನಮ್ಮ ಶಾಂತ ರೀತಿಯ ಹೊರಾಟವನ್ನು ನಿರ್ಲಕ್ಷ ಮಾಡ ಬೇಡಿ ನಮ್ಮ ಹೊರಾಟ ಉಗ್ರ ಸ್ವರುಪ ಪಡೆಯುವ ಮೊದಲು ಎಚ್ಚೆತ್ತುಕೊಳ್ಳಿ ಎಂದು ಹೇಳಿದರು ಒಟ್ಟಾರೆ ಶಾಸಕ ಸುನಿಲ್‌ ನಾಯ್ಕ ಅವರ ವಿಧಾನ ಸೌದದ ಪ್ರಸ್ಥಾಪದ ನಂತರ ಇಂದು ಮೊಗೇರ್‌ ಸಮಾಜದ ಸ್ಥಿತಿ ಬೆಂಕಿಯಿಂದ ಬಾಣಲೆಗೆ ಎಂಬ ಪರಿಸ್ಥಿತಿ ನಿರ್ಮಾಣ ವಾಗಿದೆ

ಇಷ್ಟೆಲ್ಲಾ ವಿದ್ಯಮಾನಗಳು ಘಟಿಸಿದರು ಮೊಗೇರ್‌ ಸಮುದಾಯ ಹೊರಾಟವನ್ನು ಮುಂದುವರಿಸಿದ್ದು ಮುಂದೆ ಇವರ ಈ ಹೋರಾಟ ಸರಕಾರವನ್ನು ಎಲ್ಲಿಗೆ ತಂದು ನಿಲ್ಲಿಸುತ್ತದೆ ಈ ಸಮಾಜಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ದೊರೆತೀತೆ ಎಂದು ಕಾದು ನೋಡಬೇಕಾಗಿದೆ

WhatsApp
Facebook
Telegram
error: Content is protected !!
Scroll to Top