ಎಂಟನೆ ದಿನಕ್ಕೆ ಕಾಲಿಟ್ಟ ಉತ್ತರ ಕನ್ನಡ ಜಿಲ್ಲೆ ಮೊಗೇರ್‌ ಸಮಾಜದ ಪ್ರತಿಭಟನೆ: ಪ್ರತಿಭಟನಾ ಸ್ಥಳಕ್ಕೆ ಬೇಟಿ ಕೊಟ್ಟ ಮಾಜಿ ಶಾಸಕ ಜೆ.ಡಿ ನಾಯ್ಕ ಹಾಗು ಉದ್ಯಮಿ ಈಶ್ವರ ನಾಯ್ಕ

ಭಟ್ಕಳ:ಮೊಗೇರ್‌ ಸಮಾಜದ ಪರಿಶಿಷ್ಟ ಜಾತಿ ಪ್ರಮಾಣ ಪತ್ರದ ಬಗ್ಗೆ ಕೋಟಾ ಶ್ರೀನಿವಾಸ ಪೂಜಾರಿಯವರು ಕೇವಲ ಹಿಂದುಳಿದ ಸಮುದಾಯಕ್ಕೆ ಮಿಸಲಾಗಿರುವವರ ಹಾಗೆ ವರ್ತಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಜೇಡಿ ನಾಯ್ಕ ಹೇಳಿದರು

ಮೊಗೇರ ಸಮುದಾಯವು ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ತಮಗೆ ನೀಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ತಾಲೂಕಾಡಳಿತದ ಮುಂದೆ ಕಳೆದ ಎಂಟು ದಿನಗಳಿಂದ ಪ್ರತಿಭಟನೆಯನ್ನು ನಡೆಸುತ್ತಿದ್ದು ದಿನದಿಂದ ದಿನಕ್ಕೆ ಇವರ ಪ್ರತಿಭಟನೆ ಉಗ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದ್ದು ಏಂಟನೆಯ ದಿನವಾದ ಮಂಗಳವಾರ ಮಾಜಿ ಶಾಸಕ ಜೇಡಿ ನಾಯ್ಕ ಹಾಗು ತಾಲೂಕಿನ ಪ್ರತಿಷ್ಟಿತ ಉದ್ಯಮಿಗಳಾದ ಈಶ್ವರ ನಾಯ್ಕ ಪ್ರತಿಭಟನಾ ಸ್ಥಳಕ್ಕೆ ಬೇಟಿ ನೀಡಿ ಪ್ರತಿಭಟನಾ ನಿರತರಿಗೆ ಬೆಂಬಲವನ್ನು ಸೂಚಿಸಿದರು

ಈ ಸಂದರ್ಬದಲ್ಲಿ ಮಾಜಿ ಶಾಸಕ ಜೇಡಿ ನಾಯ್ಕ ಮಾತನಾಡಿ ಸರಕಾರ ಮೊದಲು ಮೊಗೇರ್‌ ಸಮುದಾಯಕ್ಕೆ ಪರಿಶಿಷ್ಟ ಸೌಲತ್ತು ಕೊಡುತ್ತಿತ್ತು ಆದರೆ ಈಗ ಇಲ್ಲವಾಗಿದೆ ಮೊದಲು ಇಷ್ಟೇಲ್ಲಾ ಸಮಸ್ಯೆಗಳಾಗುತ್ತಿರಲಿಲ್ಲಾ ಪ್ರತಿಭಟನಾ ನಿರತರು ಶಾಸಕರುಗಳು ಹಾಗು ಜನಪ್ರತಿನಿದಿಗಳ ಗಮನಕ್ಕೆ ತರಬೇಕಾಗುತ್ತದೆ ಕೊಟ ಶ್ರೀನಿವಾಸ [ಪುಜಾರಿಯವರು ಕೆವಲ ಹಿಂದೂಳಿದ ವರ್ಗಕ್ಕೆ ಮಿಸಲಾದವರ ಹಾಗೆ ವರ್ತಿಸುತ್ತಿದ್ದಾರೆ ಸರಕಾರ ಯಾಕೆ ಈ ಬಗೆಯ ನೀತಿಯನ್ನು ಅನುಸರಿಸುತ್ತದೆ ಎಂಬುವುದು ತಿಳಿಯುತ್ತಿಲ್ಲಾ ನಾನು ಯಾವುದೆ ಜಾತಿಯನ್ನು ವಹಿಸುವುದಿಲ್ಲಾ ನಾನು ಸಾರ್ವಜನಿಕ ಹಿತಾಸಕ್ತಿಯನ್ನೆ ಬಯಸುತ್ತೆನೆ ಮೊಗೇರ್‌ ಸಮುದಾಯದ ಜಾತಿ ಪ್ರಮಾಣ ಪತ್ರಕ್ಕಾಗಿ ಅಧಿಕಾರಿಗಳ ಜನಪ್ರತಿನಿದಿಗಳ ಗಮನ ಸೆಳೆಯುವ ಪ್ರಯತ್ನಕ್ಕೆ ನಾನು ಜೊತೆಯಾಗಿರುತ್ತೆನೆ ಎಂದು ಹೇಳಿದರು

ತಾಲೂಕಿನ ಉದ್ಯಮಿಗಳಾದ ಈಶ್ವರ ನಾಯ್ಕ ಮಾತನಾಡಿ ಅನೇಕ ವರ್ಷಗಳಿಂದ ಮೊಗೇರ್‌ ಸಮಾಜ ಇತರ ಸಮಾಜದೊಂದಿಗೆ ಅನ್ಯೋನ್ಯವಾಗಿರುತ್ತದೆ ಈ ಸಮಾಜ ಹಿಂದಿನಿಂದಲೂ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದಿರುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ ಆದರೆ ಕೆಲವು ವರ್ಷಗಳಿಂದ ಈ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಸರಕಾರ ಈ ಹಿಂದೆ ಸೌಲಬ್ಯ ಕೊಟ್ಟು ಈಗ ಸರಕಾರವೆ ಕಿತ್ತುಕೊಳ್ಳುತ್ತಿದೆ ಯಾವುದೆ ಸಮಾಜಕ್ಕೂ ದಕ್ಕೆಯಾಗುವ ಕೆಲಸವಾಗ ಬಾರದು ಮೊಗೇರ್‌ ಸಮುದಾಯ ತಮಗೆ ಮೊದಲು ಕೊಟ್ಟ ಸೌಲಬ್ಯವನ್ನೆ ಕೊಡಿ ಎಂದು ಕೇಳುತ್ತಿದ್ದಾರೆ ಇದು ನ್ಯಾಯಯುತ ಬೇಡಿಕೆಯಾಗಿದೆ ನಾವು ಮೊಗೇರ್‌ ಸಮುದಾಯದ ಜೋತೆಯಲ್ಲಿದ್ದೆವೆ ಎಂದು ಹೇಳಿದರು

ಈ ಸಂದರ್ಬದಲ್ಲಿ ಪ್ರತಿಭಟನಾ ನಿರತ ಮೊಗೇರ್‌ ಸಮುದಾಯದ ಮಹಿಳೆಯೊಬ್ಬರು ಮಾತನಾಡಿ ನಮ್ಮ ಸಮುದಾಯದ ಎಂಟು ದಿನಗಳಿಂದ ಪ್ರತಿಭಟನೆಯನ್ನು ನಡೆಸುತ್ತಾ ಬಂದಿದೆ ಪ್ರತಿಭಟನೆಯಲ್ಲಿ ಮಹಿಳೆಯರು ಮಕ್ಕಳು ವಯೋವೃದ್ದರು ಭಾಗವಹಿಸಿದ್ದಾರೆ ನಮ್ಮ ಸಮಾಜಕ್ಕೆ ಸಂವಿದಾನಾತ್ಮಕವಾಗಿ ಬಂದ ಹಕ್ಕನ್ನು ರಾಜ್ಯ ಸರಕಾರ ಹಾಗು ಭ್ರಷ್ಟ ಅಧಿಕಾರಿಗಳು ಕಾಲಿನ ಕಸದಂತೆ ನೋಡುತ್ತಿದ್ದಾರೆ ಆದರೆ ಇದೆ ಸರಕಾರ ಒಬ್ಬ ಸಾಮಾನ್ಯ ಪ್ರಜೆ ತಪ್ಪುಗಳನ್ನು ಮಾಡಿದರೆ ಬಿಡುತ್ತದೆಯೋ ನಮ್ಮ ಮೊಗೇರ್‌ ಸಮಾಜ ಮೊದಲಿನಿಂದಲೂ ಶಾಂತ ರೀತಿಯಲ್ಲಿ ಪ್ರತಿಭಟನೆ ಪ್ರತಿಭಟನೆ ನಡೆಸುತ್ತಾ ಬರುತ್ತಿತ್ತು ಆದರೆ ಇನ್ನು ಮುಂದೆ ನಮ್ಮ ಮೊಗೇರ್‌ ಸಮಾಜದ ಉಗ್ರ ರೂಪವನ್ನು ನೋಡ ಬೇಕಾಗುತ್ತದೆ ಎಂದು ಆಕ್ರೋಶವನ್ನು ವ್ಯಕ್ತ ಪಡಿಸಿದರು

ಒಟ್ಟಾರೆ ಮೊಗೇರ್‌ ಸಮಾಜದ ಪ್ರತಿಭಟನೆ ದಿನದಿಂದ ದಿನಕ್ಕೆ ಉಗ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದ್ದು ಈ ಸಮಾಜದ ಪ್ರತಿಭಟನೆ ಸರಕಾರದ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಿತು ಎಂಬುವುದನ್ನು ಕಾದು ನೋಡಬೇಕಾಗಿದೆ

WhatsApp
Facebook
Telegram
error: Content is protected !!
Scroll to Top