ಅಗ್ನಿಶಾಮಕ ದಳ ತಂಡಕ್ಕೆ “ಮಾಧ್ಯಮ ಕಪ್”

ಭಟ್ಕಳ: ನಗರದ ಸರಕಾರಿ ಕ್ರೀಡಾಂಗಣದಲ್ಲಿ  ರವಿವಾರದಂದು ಮೀಡಿಯಾ ಕಪ್ 2022 ಕ್ರಿಕೇಟ್ ಪೈನಲ್  ಪಂದ್ಯಾವಳಿಯಲ್ಲಿ  ಅಗ್ನಿಶಾಮಕ ದಳ ತಂಡವು ಹೆಸ್ಕಾಂ ತಂಡವನ್ನು 5 ರನ್ನುಗಳಿಂದ ಸೋಲಿಸಿ “ಮಾಧ್ಯಮ ಕಪ್” ನ್ನು ತನ್ನದಾಗಿಸಿಕೊಂಡಿದೆ. 

 ಶನಿವಾರ ಮತ್ತು ರವಿವಾರದಂದು  ನಗರದ ಸರಕಾರಿ ಕ್ರೀಡಾಂಗಣದಲ್ಲಿ  ಭಟ್ಕಳ ಮಾಧ್ಯಮ ಮಿತ್ರರು  ವಿವಿಧ ಇಲಾಖೆಗಳ ನೌಕರರಿಗೆ  ಎರ್ಪಡಿಸಿದ ಪಂದ್ಯಾಟದ ಪೈನಲ್ ಪಂದ್ಯದಲ್ಲಿ   ಅಗ್ನಿಶಾಮಕ ದಳ ತಂಡ  ಮೊದಲು ಟಾಸ್ ಗೆದ್ದು 8 ಓವರುಗಳಲ್ಲಿ 5 ಹುದ್ದರಿ ಕಳೆದುಕೊಂಡು  79 ರನ್ ಗಳಿಸಿತು. ಅಗ್ನಿಶಾಮಕ ತಂಡದ ಶ್ರೀಕಾಂತ ರವರು ಅತ್ಯಧಿಕ 42 ರನ್ ಗಳಿಸಿದರು. ಭಟ್ಕಳ ಹೆಸ್ಕಾಂ ತಂಡದವರು 8 ಓವರುಗಳಲ್ಲಿ 5 ಹುದ್ದರಿಗಳನ್ನು ಕಳೆದುಕೊಂಡು ಕೇವಲ 75 ರನ್ನು ಗಳಿಸಿ ಸೋಲನ್ನು ಒಪ್ಪಿಕೊಂಡರು.  ಹೆಸ್ಕಾಂ ತಂಡದ ಉಸ್ಮಾನ 24, ಶ್ರೀಧರ  19 ರನ್ ಗಳಿಸಿದರು.. ಪೈನಲ್ ಪಂದ್ಯದ ಬಹುಮಾನ  ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ  ಉಪಸ್ಥಿತರಿದ್ದ ಇಂಡೆನ್. ಗ್ಯಾಸ್ ಏಜನ್ಸಿಯ ಮಾಲಕಿ ಶಿವಾನಿ ಶಾಂತಾರಾಮ ರನ್ನರ್ ತಂಡವಾದ ಹೆಸ್ಕಾಂ ತಂಡದವರಿಗೆ ಬಹುಮಾನ ವಿತರಿಸಿದರು. ಪ್ರಥಮ ಬಹುಮಾನವನ್ನು ಜೆ.ಡಿ.ಎಸ್. ಮುಖಂಡ ಇನಾಯತುಲ್ಲಾ ಶಾಬಂದ್ರಿ ಅಗ್ನಿಶಾಮಕ ತಂಡದವರಿಗೆ ನೀಡಿದರು.  ಪಂದ್ಯಾವಳಿಯ  ಉತ್ತಮ ಬ್ಯಾಟ್ಸಮನ್ ಆಗಿ ಅಗ್ನಿಶಾಮಕ ಠಾಣೆಯ  ಆಟಗಾರ ನಾಗರಾಜ್  ಆಯ್ಕೆಗೊಂಡರು. ಉತ್ತಮ ಎಸೆತಗಾರರಾಗಿ ಹೆಸ್ಕಾಂ ತಂಡದ ಶ್ರೀಧರ   ಆಯ್ಕೆಯಾದರು.ಪೈನಲ್ ಪಂದ್ಯದ ಉತ್ತಮ ಆಟಗಾರರಾಗಿ ಅಗ್ನಿಶಾಮಕ ಠಾಣೆಯ ಶ್ರೀಕಾಂತ ಆಯ್ಕೆಯಾಗದರು.ಪದ್ಯಾವಳಿಯ ಅತ್ಯುತ್ತಮ ಆಟಗಾರನಾಗಿ ಅಗ್ನಿಶಾಮಕ ತಂಡದ ಶ್ರೀಕಾಂತ ಆಯ್ಕೆಯಾದರು.    ಸಾಹಿಲ್ ಆನ್ಲೈನ್ ಸಂಪಾದಕ ಇನಾಯತುಲ್ಲಾ ಗವಾಯಿ,ಜೆ.ಸಿ.ಐ. ಅಧ್ಯಕ್ಷ ಪಾಂಡುರಂಗ ನಾಯ್ಕ, ಕರಾವಳಿ ನ್ಯೂಸ್ ನ ಸಂಪಾದಕ ನಸೀಮುಲ್ಲಾ ಘನಿ,ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಜರ್ನಲಿಸ್ಟ ಯೂನಿಯನ್ ನ ಅಧ್ಯಕ್ಷ ಮನಮೋಹನ ನಾಯ್ಕ ವಹಿಸಿದ್ದರು. ಪತ್ರಕರ್ತರಾದ ಕುಮಾರ ನಾಯ್ಕ ಹಾಗೂ ಮುಬಾಶಿರ್ ಹಲ್ಲಾರೆ ಕಾರ್ಯಕ್ರಮ ನಿರ್ವಹಿಸಿದರು.ಪತ್ರಕರ್ತರಾದ ಪ್ರಸನ್ನ ಭಟ್ ಹಾಗೂ ಉದಯ ನಾಯ್ಕ,ಮಂಜು ನಾಯ್ಕ  ಸಹಕರಿಸಿದರು. ಗುರುರಾಜ್  ನಾಯ್ಕ ಹಾಗೂ ವೆಂಕಟೇಶ ಮೊಗೇರ ಪಂದ್ಯಾವಳಿಯಲ್ಲಿ  ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದರು. 

WhatsApp
Facebook
Telegram
error: Content is protected !!
Scroll to Top