ಬೀನಾ ವೈದ್ಯ ಶಾಲೆಯಲ್ಲಿ “ಕಿಡ್ಸ್ ವಿತ್ ಪೆರೆಂಟ್ಸ್” ವಿನೂತನ ಕಾರ್ಯಕ್ರಮ

ಭಟ್ಕಳ ಮುರ್ಡೇಶ್ವರ ಬೀನಾ ವೈದ್ಯ ಶಾಲೆಯಲ್ಲಿ “ಕಿಡ್ಸ್ ವಿತ್ ಪೆರೆಂಟ್ಸ್” ಎನ್ನುವ ವಿನೂತನ ಕಾರ್ಯಕ್ರಮವನ್ನು ನರ್ಸರಿ, ಎಲ್‌ಕೆಜಿ, ಯುಕೆಜಿ ಮಕ್ಕಳಿಗಾಗಿ ನಡೆಸಲಾಯಿತು.

ಕಾರ್ಯಕ್ರಮವನ್ನು ಸಂಸ್ಥೆಯ ಅಧ್ಯಕ್ಷರಾದ ಮಂಕಾಳ ಎಸ್. ವೈದ್ಯರವರು ಉದ್ಘಾಟಿಸಿ, ಬಾಲ್ಯದ ವ್ಯವಸ್ಥೆಗಳು ಮತ್ತು ಕುಟುಂಬಗಳು ಮಕ್ಕಳ ಆರೋಗ್ಯಕರ ಬೌದ್ಧಿಕ, ದೈಹಿಕ ಮತ್ತು ಸಾಮಾಜಿಕ-ಭಾವನಾತ್ಮಕ ಬೆಳವಣಿಗೆಯನ್ನು ಉತ್ತೇಜಿಸಲು ಕೇಂದ್ರವಾಗಿದೆ ಎಂದರು…

ಶಾಲಾ ಆಢಳಿತ ನಿರ್ದೇಶಕಿ ಪುಷ್ಪಲತಾ ವೈದ್ಯ ಮಾತನಾಡುತ್ತಾ ಶಾಲೆಗಳು, ಕುಟುಂಬಗಳು ಮತ್ತು ಸಮುದಾಯ ಗುಂಪುಗಳು ಕಲಿಕೆಯನ್ನು ಬೆಂಬಲಿಸಲು ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ಮಕ್ಕಳ ಕಲಿಕೆಯು ಪರಿಪೂರ್ಣವಾಗಿ ಸಮರ್ಥವಾದ ಕಲಿಕೆಯ ವಾತಾವರಣ ನಿರ್ಮಾಣವಾಗುತ್ತದೆ. ವಿದ್ಯಾರ್ಥಿಯು ಕಲಿಕೆಯಲ್ಲಿ ಮುಂಚೂಣಿ ಪಡೆಯಲು ಸಾಧ್ಯವಾಗುತ್ತದೆ. ಪ್ರಾಂಶುಪಾಲರಾದ ವಿ.ಟಿ. ನಾಯ್ಕ ಮಾತನಾಡಿ.. ಪೋಷಕರು ಮಗುವಿನ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗಳ ಬಗ್ಗೆ ಕಾಳಜಿವಹಿಸಿದರೆ ಅದು ಮಕ್ಕಳ ಸಾಧನೆಗೆ ಪೂರಕವಾಗುತ್ತದೆ ಎಂದರು….


ಬೀನಾ ವೈದ್ಯ ಪೂರ್ವ ಪ್ರಾಥಮಿಕ ಶಿಕ್ಷಕಿಯರು ಮತ್ತು ಪೋಷಕರು ಭಾಗವಹಿಸಿದ್ದರು. ಪೋಷಕರು ತಮ್ಮ ಮಕ್ಕಳೊಂದಿಗೆ ವಿವಿಧ ರೀತಿಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಆಡುವ ದೃಶ್ಯ ಮನಮೋಹಕವಾಗಿ ಮೂಡಿಬಂದಿತು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕೊರ್ಡಿನೇಟರ್ ಶ್ರೀ ಕೃಷ್ಣಮೂರ್ತಿ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀಮತಿ ಹಂಸಾ ಪಟ್ಗಾರ ಸ್ವಾಗತಿಸಿದರು. ಎಲ್ವೇರ ಎಲ್ಲರನ್ನು ವಂದಿಸಿದರು.

WhatsApp
Facebook
Telegram
error: Content is protected !!
Scroll to Top