ಎರಡನೆಯ ದಿನಕ್ಕೆ ಕಾಲಿಟ್ಟ ಉತ್ತರ ಕನ್ನಡ ಜಿಲ್ಲಾ ಮೊಗೇರ ಸಮಾಜದ ಪ್ರತಿಭಟನೆ

ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆಯದೆ ಹೋರಾಟ ನಿಲ್ಲಿಸಲಾರೆವು ಇದು ನನ್ನ ಸಮಾಜದ ಹಕ್ಕಿಗಾಗಿ ನಡೆಸುತ್ತಿರು ಹೊರಾಟ ಮಂಕಾಳ ವೈದ್ಯ ಹೇಳಿಕೆ

ಭಟ್ಕಳ: ನನ್ನ ಸಮಾಜ ತುಂಬ ಹಿಂದೂಳಿದ ಸಮಾಜವಾಗಿದ್ದು ನಾವು ನಮ್ಮ ಹಕ್ಕಿಗಾಗಿ ಹೋರಾಟ ನಡೆಸುತ್ತಿದ್ದೆವೆ ನಮಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ದೊರೆಯದೆ ನಾವು ನಮ್ಮ ಹೊರಾಟ ನಿಲ್ಲಿಸಲಾರೆವು ಸರಕಾರ ನಮ್ಮ ಹೊರಾಟಕ್ಕೆ ಸ್ಪಂದಿಸುತ್ತದೆ ಎಂಬ ಬರವಸೆ ನನಗಿದೆ ನಮ್ಮ ಹೊರಾಟ ಉಗ್ರ ಸ್ವರೂಪ ಪಡೆಯುವ ಮೊದಲು ಬಿಜೆಪಿ ಸರಕಾರ ಎಚ್ಚೆತ್ತುಕೊಂಡು ನಮ್ಮ ಮೊಗೇರ್‌ ಸಮಾಜಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಕೊಡುವಲ್ಲಿ ಕ್ರಮ ಕೈಗೊಳ್ಳುವಂತಾಗಲಿ ಎಂದು ಮಾಜಿ ಶಾಸಕ ಮಂಕಾಳ ವೈದ್ಯ ಹೇಳಿದರು

ಉತ್ತರ ಕನ್ನಡ ಜಿಲ್ಲಿಯಲ್ಲಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರಕ್ಕಾಗಿ ನಡೆಯುತ್ತಿರುವ ಮೊಗೇರ್‌ ಸಮಾಜದ ಹೋರಾಟ ಏರಡನೆ ದಿನಕ್ಕೆ ಕಾಲಿಟ್ಟಿದ್ದು ಪ್ರತಿಭಟನೆ ದಿನದಿಂದ ದಿನಕ್ಕೆ ತನ್ನ ಕಾವನ್ನು ಹೆಚ್ಚಿಸಿಕೊಳ್ಳುತ್ತಿದೆ ಈ ಸಂದರ್ಬದಲ್ಲಿ ಮಂಕಾಳ ವೈದ್ಯ ಮಾತನಾಡಿ ನಮ್ಮ ಮೊಗೇರ್‌ ಸಮಾಜ ಹಲವಾರು ವರ್ಷಗಳಿಂದ ತಾಳ್ಮೆಯಿಂದ ಕಾಯುತ್ತಾಬಂದಿದೆ ಆದರೆ ಸರಕಾರ ಯಾವುದೆ ಬರವಸೆ ಅಥವ ಕ್ರಮಕ್ಕೆ ಮುಂದಾಗಿಲ್ಲಾ ನ್ಯಾಯಾಯಲಯ ನಮ್ಮ ಸಮಜಕ್ಕೆ ಜಾತಿ ಪ್ರಮಾಣ ಪತ್ರ ನೀಡುವುದಕ್ಕೆ ಆದೇಶ ನೀಡಿದರು ವಿಳಂಬ ನೀತಿಯನ್ನು ಅನುಸರಿಸುತ್ತಿದೆ ಈ ಕಾರಣ ನಾವು ಹೊರಾಟದ ಹಾದಿಯನ್ನು ಹಿಡಿದಿದ್ದೆವೆ ನಮ್ಮ ಹೊರಾಟದ ಬಗ್ಗೆ ಮಾಧ್ಯಮದವರು ಸರಕಾರದ ಗಮನವನ್ನು ಸೆಳೆದಿದ್ದಾರೆ ನಮ್ಮ ಹೊರಾಟ ಸರಕಾದ ಗಮನಕ್ಕೆ ಬಂದಿದೆ ಆದಷ್ಟು ಬೇಗ ಸರಕಾರ ಸೂಕ್ತ ಕ್ರಮವನ್ನು ಕೈಗೊಳ್ಳ ಬೇಕು ಇಲ್ಲದಿದ್ದಲ್ಲಿ ನಮ್ಮ ಹೋರಾಟ ಉಗ್ರ ಸ್ವರೂಪವನ್ನು ಒಡೆದುಕೊಳ್ಳುತ್ತದೆ ಎಂದು ಎಚ್ಚರಿಸಿದರು

ಎರಡನೆ ದಿನವಾದ ಇಂದು ಮೀನುಗಾರ ಪೆಡೆರೆಷನ್‌ ಜಿಲ್ಲಾ ಅಧ್ಯಕ್ಷ ರಾಜು ತಾಂಡೆಲ್‌ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮೊಗೇರ್‌ ಸಮಾಜದವರಿಗೆ ದೈರ್ಯವನ್ನು ತುಂಬಿ ಮಾತನಾಡಿ ಈ ಹೋರಾಟ ಸಮಾಜದ ಹಕ್ಕಿಗಾಗಿ ನಡೆಸುವ ಹೋರಾಟವಾಗಿದೆ ನಾನು ಈ ಹೋರಾಟಕ್ಕೆ ಸಂಪೂರ್ಣ ಬೆಂಬಲವನ್ನು ನೀಡುತ್ತೆನೆ ನೀವು ಎಲ್ಲಿಯ ವರೆಗೆ ಈ ಹೋರಾಟ ನಡೆಸುತ್ತಿರೋ ಅಲ್ಲಿಯ ವರೆಗಿನ ಎಲ್ಲಾ ಖರ್ಚುವೆಚ್ಚಗಳನ್ನು ನಾನು ಭರಿಸುತ್ತೆನೆ ನಮ್ಮ ಈ ಹೋರಾಟ ನಮ್ಮ ಬೇಡಿಕೆ ಇಡೆರುವವರೇಗೂ ನಡೆಯುತ್ತದೆ ಎಂದು ಹೇಳಿದರು

ಈ ಸಂದರ್ಬದಲ್ಲಿ ಮೋಗೇರ್‌ ಸಮಾಜದ ಮುಖಂಡರು ಅನುಯಾಯಿಗಳು ಸದಸ್ಯರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top