ಪರಿಶಿಷ್ಟ ಜಾತಿ ಪ್ರಮಾಣ ಪತ್ರಕ್ಕಾಗಿ ಹೊರಾಟಕ್ಕಿಳಿದು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ ಉತ್ತರ ಕನ್ನಡ ಮೊಗೇರ್ ಸಮಾಜ

ಪ್ರತಿಭಟನೆ ಸಂದರ್ಬದಲ್ಲಿ ವಿಷ ಸೇವನೆಗೆ ಮುಂದಾದ ಉಮೇಶ ಮೊಗೇರ್:ಜಾತಿ ಪ್ರಮಾಣ ಪತ್ರ ಸಿಗುವವರೆಗು ನಮ್ಮ‌ ಹೋರಾಟ ನಿಲ್ಲದು ಮಾಜಿ ಶಾಸಕ ಮಂಕಾಳ ವೈದ್ಯ ಆಕ್ರೋಶ

ಭಟ್ಕಳ:ಉತ್ತರ ಕನ್ನಡ ಮೊಗೇರ್ ಸಮುದಾಯಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ನೀಡಬೇಕು ಎಂಬ ಬೇಡಿಕೆಯನ್ನು ದಶಗಳಿಂದ ನಮ್ಮ ಸಮಾಜ ಹೋರಾಟ ನಡೆಸಿಕೊಂಡು ಬರುತ್ತಿದೆ ಆದರೆ ಸರಕಾರ ಯಾವುದೆ ಕ್ರಮಕ್ಕೆ ಮುಂದಾಗಿಲ್ಲಾ ಇದನ್ನು ನಾವು ಖಂಡಿಸಿ ಉಗ್ರ ಪ್ರತಿಭಟನೆಗೆ ಮುಂದಾಗಿದ್ದೆವೆ ನನ್ನ ಸಮಾಜಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಸಿಗುವವರೆಗೂ ಈ ಹೋರಾಟ ನಿರಂತರವಾಗಿ ನಡೆಯುತ್ತದೆ ಎಂದು ಮಾಜಿ ಶಾಸಕ ಮಂಕಾಳ ವೈದ್ಯ ಅವರು ಹೇಳಿದರು.

ಹಲವಾರು ವರ್ಷಗಳಿಂದ ಮೊಗೇರ್ ಸಮುದಾಯ ಪರಿಶಿಷ್ಟ ಜಾತಿ ಪ್ರಮಾಣ ಪತ್ರಕ್ಕಾಗಿ ಆಗ್ರಹಿಸುತ್ತಲೆ ಬರುತ್ತಿದೆ . ಕರ್ನಾಟ ಸರಕಾರ ಮೊಗೇರ್ ಸಮುದಾಯದವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ನೀಡುವಂತೆ ಸುತ್ತೊಲೆ ಹೊರಡಿಸಿರುತ್ತದೆ. ಆದರೆ ಜಿಲ್ಲಾಡಳಿತ ಈ ಬಗ್ಗೆ ಯಾವುದೆ ಕ್ರಮಕೈಕೊಳ್ಳದೆ ಜಾತಿ ಪ್ರಮಾಣ ಪತ್ರದ ಬಗ್ಗೆ ಮೊಗೇರ್ ಸಮುದಾಯದಲ್ಲಿ ಗೊಂದಲಮಯ ಪರಿಸ್ತಿತಿ ನಿರ್ಮಾಣವಾಗಿದೆ ಸರಕಾರ ದಿನಾಂಕ 31/05/2018 ರಂದು ಸುತ್ತೋಲೆಯನ್ನು ಹಿಂತೆಗೆದುಕೊಂಡಿರುವುದನ್ನು ಪರಿಗಣಿಸಿ ದಿನಾಂಕ 04/11/2019 ರ ಹೊಸ ಆದೇಶದಂತೆ ತಾಲೂಕಿನ ತಹಶಿಲ್ದಾರರಿಗೆ ಸೂಕ್ತ ನಿರ್ದೇಶನವನ್ನು ನೀಡಿ ಮೊಗೇರ್‌ ಜಾತಿಯವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಒದಗಿಸಬೇಕು ಪ್ರಮುಖವಾಗಿ ಕೆಂದ್ರ ಸರಕಾರದ ಪರಿಶಿಷ್ಟ ಜಾತಿಯ ಪಟ್ಟಿಯನ್ನು ಹೊರತುಪಡಿಸಿ ಇನ್ನುಳಿದ ವರ್ಗ ಅಥವಾ ಆರ್ಥಿಕ ವಾಗಿ ಹಿಂದೂಳಿದ ವರ್ಗಗಳ ಪಟ್ಟಿಯಿಂದ ಮೊಗೇರ್‌ ಜಾತಿಯನ್ನು ಕೈಬೀಡುವುದು , ಬಾಕಿ ಇರುವ ಸಿಂದೂತ್ವ ಪ್ರಮಾಣ ಪತ್ರವನ್ನು ಕೂಡಲೆ ವಿತರಿಸುವುದು , ಸುಳ್ಳು ಜಾತಿ ಪ್ರಮಾಣ ಪತ್ರ ಎಂದು ನಮ್ಮ ಸಮಾಜದ ಜನರ ವಿರುದ್ದ ಹೂಡಿದ ದೂರುಗಳನ್ನು ಕೂಡಲೆ ಕೈ ಬೀಡುವುದು ಎಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಎಡಿಸಿ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು ಎಲ್ಲಿಯವರೆಗೆ ನಮ್ಮ ಬೇಡಿಕೆ ಇಡೆರುವುದಿಲ್ಲವೋ ಅಲ್ಲಿಯ ವರೆಗೂ ನಮ್ಮ ಪ್ರತಿಭಟನೆ ರಸ್ತಾರೊಕೊ ಮುಂತಾದವುಗಳು ನಡೆಯುತ್ತಲೆ ಇರುತ್ತದೆ ಎಂಬ ಎಚ್ಚರಿಕೆಯನ್ನು ನೀಡಲಾಯಿತು

ಪ್ರಾರಂಬದಲ್ಲಿ ಸುಮಾರು ೧೦,೦೦೦ ಕ್ಕೂ ಅಧಿಕ ಸಂಖ್ಯೆಯ ಹೋರಾಟಗಾರೊಂದಿಗೆ ವೆಂಕಟಾಪುರದಿಂದ ಹೊರಟ ಪ್ರತಿಭಟನಾರ್ಯಾಲಿ ಭಟ್ಕಳ ಶಂಶುದ್ದಿನ್‌ ಸರ್ಕಲ್‌ ಮಾರ್ಗವಾಗಿ ಸಹಾಯಕ ಆಯುಕ್ತರ ಕಛೇರಿಯನ್ನು ತಲುಪಿ ಜಾತಿ ಪ್ರಮಾಣ ಪತ್ರ ನೀಡುವ ಬಗ್ಗೆ ಘೋಷಣೆಯನ್ನು ಕೂಗಲಾಯಿತು ಮುಖ್ಯವಾಗಿ ಮೆರವಣಿಗೆ ತಾಲೂಕಿನ ಶಂಶುದ್ದೀನ್‌ ಸರ್ಕಲ್‌ ತಲುಪುತಿದ್ದಂತೆ ತಾಲೂಕಿನ ಗಾಂದಿನಗರ ನಿವಾಸಿ ಉಮೇಶ ಮೊಗೇರ್‌ ಎಂಬಾತ ಶಂಶುದೀನ್‌ ಸರ್ಕಲ್‌ ಏರಿ ವಿಷ ಸೇವಿಸಲು ಯತ್ನಿಸಿದ್ದಾನೆ ಆದರೆ ಜೋತೆಯಲ್ಲಿದ್ದ ಇಬ್ಬರು ಯುವಕರ ಮುಂಜಾಗ್ರತಾ ಕ್ರಮದ ಕಾರಣ ಮುಂದೆ ನಡೆಯಬೇಕಿದ್ದ ಅವಘಗಡ ಕೂದಲೆಳೆಯ ಅಂತರದಲ್ಲಿ ತಪ್ಪಿದಂತಾಗಿದೆ

ಪ್ರತಿಭಟನಾ ಮೇರವಣಿಗೆಯಲ್ಲಿ ಮಾಜಿ ಶಾಸಕ ಮಂಕಾಳ ವೈದ್ಯ ಅವರು ವೆಂಕಟಾಪುರದಿಂದಲೆ ಬಾಗವಹಿಸಿ ಸಹಾಯಕ ಆಯುಕ್ತರ ಕಛೇರಿಯನ್ನು ತಲುಪಿ ತಮ್ಮ ಸಮಾಜ ಬಾಂದವರೊಂದಿಗೆ ಬೇರೆತು ಮಧ್ಯಾಹ್ನದ ಬೋಜನವನ್ನು ಸೇವಿಸಿದ್ದಲ್ಲದೆ ತನ್ನ ಸಮಾಜಕ್ಕಾಗುತ್ತಿರುವ ಅನ್ಯಾಯದ ವಿರುದ್ದ ಹೊರಾಟ ನಡೆಸುತ್ತಿರುವುದು ಪ್ರಶಂಸನೀಯ ಎಂದರೆ ತಪ್ಪಾಗಲಿಕ್ಕಿಲ್ಲಾ

ಈ ಸಂದರ್ಬದಲ್ಲಿ ಅವರು ಮಾತನಾಡಿ ನನ್ನ ಸಮಾಜ ಬಾಂದವರು ಪರಿಶಿಷ್ಟ ಜಾತಿ ಪ್ರಮಾಣ ಪತ್ರಕ್ಕಾಗಿ ಅಲೆಯದ ಸರಕಾರಿ ಕಛೇರಿಗಳಿಲ್ಲಾ ಇದು ನಮಗೆ ತುಂಬ ದುಖಃವನ್ನು ತಂದಿದೆ ಇದೆ ಕಾರಣದಿಂದ ದಶಕಗಳಿಂದ ನಮ್ಮ ಸಮಾಜ ಹೈಕೊರ್ಟ ಸುಪ್ರೀಮ್‌ ಕೊರ್ಟ ವಿಧಾನ ಸೌದ ಜಿಲ್ಲಾಧಿಕಾರಿ ಕಛೇರಿಗಳಲ್ಲಿ ಹೊರಾಟ ನಡೆಸುತ್ತಲೆ ಬಂದಿದೆ ಈ ವರೆಗೂ ಸರಕಾರವಾಗಲಿ ಜನಪ್ರತಿನಿದಿಗಳಾಗಲಿ ಎಚ್ಚೆತ್ತುಕೊಂಡಿಲ್ಲಾ ಈ ಕಾರಣದಿಂದಲೆ ನನ್ನ ಸಮಾಜ ಇಂದು ಬೀದಿಗಿಳಿದು ಹೊರಾಟಕ್ಕೆ ಮುಂದಾಗಿದೆ ನಮ್ಮ ಈ ಹೋರಾಟ ಕೆವಲ ಒಂದು ದಿನಕ್ಕೆ ಸೀಮಿತವಾಗಿರುವುದಿಲ್ಲಾ ಎಲ್ಲಿಯವರೆಗೆ ನಮಗೆ ಜಾತಿ ಪ್ರಮಾಣ ಪತ್ರ ಸೀಗುವುದಿಲ್ಲವೋ ಅಲ್ಲಿಯವರೆಗೂ ನಮ್ಮ ಹೋರಾಟ ಚಾಲ್ತಿಯಲ್ಲಿರುತ್ತದೆ ಹೊರಾಟ ಈಗಷ್ಟೆ ಪ್ರಾರಂಬವಾಗಿದೆ ನಮ್ಮ ಹೋರಾಟದ ಕಾವು ಈಗಾಗಲೆ ಸರಕಾರದ ಗಮನಕ್ಕೆ ಬಂದಿದೆ ಎಂದುಕೊಳ್ಳುತ್ತೆನೆ ಸರಕಾರ ಎಚ್ಚೆತ್ತುಕೊಳ್ಳದಿದ್ದಲ್ಲಿ ಈ ಹೋರಾಟ ಇನ್ನಷ್ಟು ಹೆಚ್ಚಾಗಲಿದೆ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರು

ಒಟ್ಟಾರೆ ಇಂದು ಭಟ್ಕಳದಲ್ಲಿ ಮೊಗೇರ್‌ ಸಮಾಜದವರು ನಡೆಸಿರುವ ಹೋರಾಟ ಯಶಸ್ವಿಯಾಗಿದ್ದು ಇವರ ಈ ಹೊರಾಟ ಎಲ್ಲಿಯವರೆಗೆ ನಡೆಯುತ್ತದೆ ಸರಕಾರ ಇವರ ಬೇಡಿಕೆ ಇಡೆರಿಸಿತೆ ಎಂದು ಕಾದು ನೋಡಬೇಕಾಗಿದೆ

WhatsApp
Facebook
Telegram
error: Content is protected !!
Scroll to Top