ವಿಜಯಪುರ ಜಿಲ್ಲೆಯಲ್ಲಿ 3.5 ತೀವ್ರತೆಯ ಭೂಕಂಪ: ಭಾರೀ ಶಬ್ಧಕ್ಕೆ ಬೆಚ್ಚಿಬಿದ್ದ ಜನತೆ

ಜಿಲ್ಲೆಯಲ್ಲಿ ಮತ್ತೇ ಭೂಕಂಪನದ ಅನುಭವ ಉಂಟಾಗಿದೆ. ಬಸವನಬಾಗೇವಾಡಿ ತಾಲ್ಲೂಕಿನ ಉಕ್ಕಲಿ ಗ್ರಾಮದಲ್ಲಿ 10 ಕಿಮೀ ಆಳದಲ್ಲಿ 3.5 ತೀವ್ರತೆಯ ಭೂಕಂಪ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (ಕೆಎಸ್‌ಎನ್‌ಡಿಎಂಸಿ)ದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯಪುರ: ಜಿಲ್ಲೆಯಲ್ಲಿ ಮತ್ತೇ ಭೂಕಂಪನದ ಅನುಭವ ಉಂಟಾಗಿದೆ. ಬಸವನಬಾಗೇವಾಡಿ ತಾಲ್ಲೂಕಿನ ಉಕ್ಕಲಿ ಗ್ರಾಮದಲ್ಲಿ 10 ಕಿಮೀ ಆಳದಲ್ಲಿ 3.5 ತೀವ್ರತೆಯ ಭೂಕಂಪ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (ಕೆಎಸ್‌ಎನ್‌ಡಿಎಂಸಿ)ದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯಪುರ ನಗರ ಸೇರಿದಂತೆ‌ ಸುತ್ತಮುತ್ತಲ ಗ್ರಾಮಗಳಲ್ಲಿ ಭೂಕಂಪನವಾಗಿದೆ. ಬೆಳಗ್ಗೆ 11.22ಕ್ಕೆ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಕಂಪನದ ಅನುಭವದಿಂದ ಜನರು ಆತಂಕಗೊಂಡಿದ್ದಾರೆ.

ಭೂಕಂಪನದಿಂದ ಯಾವುದೇ ಹಾನಿಗಳು ವರದಿಯಾಗಿಲ್ಲ. ಭೂಕಂಪದ ಬಗ್ಗೆ ಜಿಲ್ಲಾಡಳಿತ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.

ಜಿಲ್ಲೆಯಲ್ಲಿ ಕಳೆದ ಒಂದೂವರೆ ವರ್ಷಗಳಲ್ಲಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕನಿಷ್ಠ 15 ಭೂಕಂಪಗಳು ವರದಿಯಾಗಿವೆ. ಭೂಮಿಯಿಂದ ಆಗಾಗೆ ಬರುತ್ತಿರುವ ಶಬ್ಧಕ್ಕೆ ಜನರು ಬೆಚ್ಚಿಬಿದ್ದಿದ್ದಾರೆ. ಈ ಸಂಬಂಧ ವಿಜಯಪುರ ಜಿಲ್ಲೆಗೆ ಈಗಾಗಲೇ ವಿಜ್ಞಾನಿಗಳ ತಂಡ ಭೇಟಿ ನೀಡಿತ್ತು, ಸ್ಥಳ ಪರಿಶೀಲನೆಗೆ ಮುಂದಾಗಿದ್ದರು. ಸ್ಥಳ ಪರಿಶೀಲನೆ ಬಳಿಕ ವಿಜ್ಞಾನಿಗಳ ತಂಡ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದೆ. ವರದಿಯಲ್ಲಿ ಜಿಲ್ಲೆಯಲ್ಲಿ ಇತ್ತೀಚಿನ ಭೌಗೋಳಿಕ ಬದಲಾವಣೆಗಳ ಬಗ್ಗೆ ವಿವರವಾದ ಅಧ್ಯಯನವನ್ನು ನಡೆಸುವಂತೆ ಸರ್ಕಾರವನ್ನು ಒತ್ತಾಯಿಸಿದೆ.

ವಿಜಯಪುರದಲ್ಲಿ ಪದೇಪದೇ ಭೂಮಿ ಕಂಪಿಸುತ್ತಿರುವುದರಿಂದ ಜನರಲ್ಲಿ ಆತಂಕವೂ ಹೆಚ್ಚಾಗಿದೆ. ಕೆಲ ಬಾರಿ ರಿಕ್ಟರ್ ಮಾಪನದಲ್ಲಿ ದಾಖಲಾದರೆ, ಕೆಲ ಬಾರಿ ಮಾಪನದಲ್ಲಿ ದಾಖಲಾಗಿಲ್ಲ. ಇಲ್ಲಿಯವರೆಗೂ ಹಲವಾರು ಬಾರಿ ವಿಜಯಪುರದಲ್ಲಿ ಭೂಮಿ ಕಂಪಿಸಿದೆ. ಆದರೆ, ಇದುವರೆಗೂ ಯಾರಿಗೂ ಅಪಾಯಗಳಾಗಿಲ್ಲ. ಮನೆಯ ಕಿಟಕಿ ಗಾಜುಗಳು ಒಡೆದು, ಪಾತ್ರೆಗಳು ನೆಲಕ್ಕುರುಳಿದ ಘಟನೆಗಳು ನಡೆದಿವೆ.

WhatsApp
Facebook
Telegram
error: Content is protected !!
Scroll to Top