ಸಾಮಾಜಿಕ ಜಾಲತಾಣಗಳಲ್ಲಿ ಸೆಕ್ಸ್‌ ಟ್ರ್ಯಾಪ್‌..! ದಂಧೆಗಳ ತಾಣವಾದ ಸೋಷಿಯಲ್‌ ಮೀಡಿಯಾ..!

ಮೋಹಿನಿಯರ ಹೆಸರಲ್ಲಿ ಖಾತೆ ತೆರೆದು ಯುವಕರನ್ನು ಬಲೆಗೆ ಬೀಳಿಸಿಕೊಳ್ಳುತ್ತಾರೆ. ನಂತರ ವಾಟ್ಸಾಪ್‌ ನಂಬರ್‌ ಪಡೆದು ವಿಡಿಯೋ ಕಾಲ್‌ ಮಾಡಿ ನಗ್ನ ವಿಡಿಯೋ ಚಿತ್ರೀಕರಣ ಮಾಡಿಕೊಳ್ಳುತ್ತಾರೆ. ನಂತರ ಇದನ್ನೇ ಬಂಡವಾಳವಾಗಿಟ್ಟುಕೊಂಡು ಹಣಕ್ಕಾಗಿ ಬ್ಲಾಕ್‌ಮೇಲ್‌ ಮಾಡುತ್ತಿದ್ದು, ಎಷ್ಟೋ ಮಂದಿ ಮಾನಕ್ಕೆ ಅಂಜಿ ಹಣ ನೀಡಿ ತಪ್ಪಿಸಿಕೊಂಡಿದ್ದಾರೆ. ಇನ್ನೂ ಕೆಲವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳೂ ನಡೆದಿವೆ. ಫೇಸ್ಬುಕ್‌, ಇನ್‌ಸ್ಟಾ ಗ್ರಾಂ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳ ಹಾವಳಿ ಹೆಚ್ಚಿದ್ದು, ಮೋಹಕ ಯುವತಿಯರು ಕಾಮದಾಟಕ್ಕೆ ಬಹಿರಂಗ ಆಹ್ವಾನ ನೀಡುತ್ತಿದ್ದಾರೆ.

 ತುಮಕೂರು: ಸಾಮಾಜಿಕ ಜಾಲತಾಣ ಬಳಕೆದಾರರ ಸಂಖ್ಯೆ ಹೆಚ್ಚಳವಾಗುತ್ತಿರುವ ನಡುವೆ ಜಾಲ ತಾಣಗಳಲ್ಲಿ ನಕಲಿ  ಖಾತೆಗಳ ಹಾವಳಿ ದುಪ್ಪಟ್ಟಾಗಿದ್ದು, ಯುವ ಜನರನ್ನು ಟಾರ್ಗೆಟ್‌ ಮಾಡಿರುವ ಸೆಕ್ಸ್‌ ಟ್ರ್ಯಾಪ್‌ ಪ್ರಕರಣಗಳು ಹೆಚ್ಚುತ್ತಿವೆ.

ಅಗಣ್ಯ ಬಳಕೆದಾರರನ್ನು ಹೊಂದಿರುವ ಫೇಸ್ಬುಕ್‌, ಇನ್‌ಸ್ಟಾ ಗ್ರಾಂ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳ ಹಾವಳಿ ಹೆಚ್ಚಿದ್ದು, ಮೋಹಕ ಯುವತಿಯರು  ಕಾಮದಾಟಕ್ಕೆ ಬಹಿರಂಗ ಆಹ್ವಾನ ನೀಡುತ್ತಿದ್ದಾರೆ.

ಮೊದಲಿಗೆ ಮೋಹಿನಿಯರ ಹೆಸರಲ್ಲಿ ಖಾತೆ ತೆರೆದು ಯುವಕರನ್ನು ಬಲೆಗೆ ಬೀಳಿಸಿಕೊಳ್ಳುತ್ತಾರೆ. ನಂತರ ವಾಟ್ಸಾಪ್‌ ನಂಬರ್‌ ಪಡೆದು ವಿಡಿಯೋ ಕಾಲ್‌ ಮಾಡಿ ನಗ್ನ ವಿಡಿಯೋ ಚಿತ್ರೀಕರಣ ಮಾಡಿಕೊಳ್ಳುತ್ತಾರೆ. ನಂತರ ಇದನ್ನೇ ಬಂಡವಾಳವಾಗಿಟ್ಟುಕೊಂಡು ಹಣಕ್ಕಾಗಿ ಬ್ಲಾಕ್‌ಮೇಲ್‌ ಮಾಡುತ್ತಿದ್ದು, ಎಷ್ಟೋ ಮಂದಿ ಮಾನಕ್ಕೆ ಅಂಜಿ ಹಣ ನೀಡಿ ತಪ್ಪಿಸಿಕೊಂಡಿದ್ದಾರೆ. ಇನ್ನೂ ಕೆಲವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳೂ ನಡೆದಿವೆ

ಸುರಕ್ಷಿತವಾಗದ ಜಾಲತಾಣಗಳು: ದಿನದ 24 ಗಂಟೆಯೂ ಜಾಲತಾಣಗಳಲ್ಲೇ ಕಾಲ ಕಳೆಯುವ ಯುವ ಜನತೆ, ತರಹೇವಾರಿ ಸಂಕಷ್ಟಗಳಲ್ಲಿ ಸಿಲುಕುತ್ತಿರುವ ಪ್ರಕರಣಗಳು ನಡೆಯುತ್ತಲೇ ಇವೆ. ಹೀಗಿರುವಾಗ ಜಾಲತಾಣಗಳ ಬಳಕೆ ಅನ್‌ಸೇಫ್‌ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದ್ದು, ಯುವ ಜನರು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿದೆ.

ಒಟ್ಟಾರೆ ನಕಲಿ ಖಾತೆಗಳ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆ ಹೆಚ್ಚು ಫೇಸ್ಬುಕ್‌, ಇನ್‌ಸ್ಟಾ ಗ್ರಾಂ ಬಳಸುವ, ಯುವಕ ಯುವತಿಯರು ಇಂತಹ ಕೆಟ್ಟ ಜಾಲಗಳಿಗೆ ಬಲಿಯಾಗದೆ ಸ್ವಯಂ ಜಾಗೃತರಾಗುವುದು ಅತ್ಯಗತ್ಯವಾಗಿದೆ.

ಲಕ್ಷ ಕಳೆದುಕೊಂಡ ಯುವಕ

ಇತ್ತೀಚೆಗಷ್ಟೇ ಗುಬ್ಬಿ ತಾಲೂಕಿನ ಯುವಕನೊಬ್ಬ ಇನ್‌ಸ್ಟಾ ಗ್ರಾಂನಲ್ಲಿ ‘ಮನಿಪ್ಲಾಂಟ್‌ ಸಿಎಸ್‌ಪಿ’ ಎಂಬ ಜಾಹೀರಾತನ್ನು ನೋಡಿ ತನ್ನ ಮೊಬೈಲ್‌ ಸಂಖ್ಯೆ ವಿವರ ನೀಡಿದ್ದಾನೆ. ನಂತರ ಅನಾಮಿಕ ವ್ಯಕ್ತಿಯೊಬ್ಬ ಕರೆ ಮಾಡಿ ಕಾಮನ್‌ ಸರ್ವೀಸ್ ಸೆಂಟರ್‌ ಮಾಡಿಕೊಡುವುದಾಗಿ ಹೇಳಿ ಆಧಾರ್‌ ಮತ್ತಿತರ ವಿವರ ಪಡೆದಿದ್ದಾರೆ. ಆನಂತರ ರೆಜಿಸ್ಪ್ರೇಷನ್‌ ಹಣ ಎಂದು 10 ಸಾವಿರ ಹಣ ಪಡೆದಿದ್ದಾರೆ. ನಂತರ ಮತ್ತೊಮ್ಮೆ ಕರೆ ಮಾಡಿ ಓಡಿ ಖಾತೆ ತೆರೆಯಬೇಕು, ನಿಮ್ಮ ಖಾತೆಗೆ 5 ಲಕ್ಷ ಹಣ ಬರುತ್ತದೆ ಎಂದು ಹೇಳಿ ಮೊದಲಿಗೆ 50 ಸಾವಿರ, ನಂತರ 64 ಸಾವಿರ ಸೇರಿ ಒಟ್ಟು 1,24,100 ಹಣವನ್ನು ಅವರ ಖಾತೆಗೆ ಹಾಕಿಸಿಕೊಂಡು, ಮತ್ತೆ ಕರೆ ಮಾಡಿದಾಗ ಪ್ರತಿಕ್ರಿಯಿಸದೆ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡು ಯುವಕನಿಗೆ ವಂಚಿಸಿದ್ದಾರೆ

WhatsApp
Facebook
Telegram
error: Content is protected !!
Scroll to Top