ಹಿಜಾಬ್‌ ವಿರುದ್ದ ತೀರ್ಪನ್ನಿತ್ತ ಹೈಕೊರ್ಟ: ಭಟ್ಕಳ ತಾಲೂಕಿನಲ್ಲಿ ಹೈ ಕೊರ್ಟ ತೀರ್ಪಿನ ವಿರುದ್ದ ಆಕ್ರೋಶ:

ಭಟ್ಕಳ ತಾಲೂಕಿನಲ್ಲಿ ನಿಷೇದಾಜ್ಞೇ ಜಾರಿಯಲ್ಲಿದ್ದರು ಅಂಗಡಿ ಮುಂಗಟ್ಟು ಬಲವಂತ ಬಂದ್‌ ಮಾಡಿಸಲು ಹೋಗಿ ಕೇಸ್‌ ಹಾಕಿಸಿಕೊಂಡ ಆಸಾಮಿಗಳು:ಬುಧವಾರದ ಬಂದ್‌ ಕರೆ ವಿಪಲ

ಭಟ್ಕಳ: ಹಿಜಾಬ್‌ ಸಂಬಂದಪಟ್ಟಂತೆ ಹೈಕೊರ್ಟ ಶಾಲಾ ಕಾಲೇಜಿನಲ್ಲಿ ಸಮವಸ್ತ್ರ ಕಡ್ಡಾಯ ಶಾಲಾ ಕಾಲೇಜಿನಲ್ಲಿ ಹೀಜಾಬಿಗೆ ಅವಕಾಶವಿಲ್ಲಾ ಎಂಬ ತೀರ್ಪು ಹೊರಬಿದ್ದಿದೆ ಇದಕ್ಕೆ ಸಂಬಂದಿಸಿದಂತೆ ಭಟ್ಕಳ ತಾಲೂಕಿನಾಧ್ಯಂತ ಮುಸ್ಲಿಂ ಜನಾಂಗದ ಕೆಲವು ಮುಖಂಡರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದು ನಿನ್ನೆ ಮಂಗಳವಾರ ಕೆಲವು ಮುಸ್ಲಿಂ ಮುಖಂಡರು ತಾಲೂಕಿನಲ್ಲಿ ಬಲವಂತವಾಗಿ ಅಂಗಡಿ ಮಳಿಗೆ ಬಂದ ಮಾಡಿಸಲು ಮುಂದಾದ ಹಿನ್ನೆಲೆಯಲ್ಲಿ ಪೋಲಿಸ್‌ ಇಲಾಖೆ ದೂರನ್ನು ದಾಖಲಿಸಿಕೊಂಡಿದೆ

ಮಂಗಳವಾರ ಹಿಜಾಬ್ ವಿರುದ್ದ ಹೈಕೊರ್ಟ ತೀರ್ಪನ್ನು ಪ್ರಕಟಿಸಿದ್ದು ಇದರಿಂದ ಆಕ್ರೋಶಿತರಾದ ಕೆಲವು ಮುಸ್ಲೀಂ ಮುಖಂಡರು ಭಟ್ಕಳ ತಾಲೂಕಿನಲ್ಲಿ ನಿಷೇದಾಜ್ಞೇ ಜಾರಿ ಇದ್ದರು ಅಂಗಡಿ ಮಳಿಗೆಯನ್ನು ಬಲವಂತವಾಗಿ ಮುಚ್ಚಿಸಲು ಪ್ರಯತ್ನವನ್ನು ನಡೆಸಿದ್ದರು ಇದನ್ನು ಕೆಲವು ವರ್ತಕರು ಡಿ ವೈ ಎಸ್‌ ಪಿ ಬೆಳ್ಳಿಯಪ್ಪ ಅವರ ಗಮನಕ್ಕೆ ತಂದಿರುತ್ತಾರೆ ಕಾರಣ ಅವರು ಸ್ಥಳಕ್ಕೆ ಬೇಟಿಕೊಟ್ಟು ಬಲವಂತವಾಗಿ ಬಂದ್‌ ಮಾಡಿಸಲು ಮುಂದಾದ ಮುಸ್ಲಿಂ ಮುಖಂಡರುನ್ನು ತರಾಟೆಗೆ ತೆಗೆದುಕೊಂಡರು ಈ ಸಂದರ್ಬದಲ್ಲಿ ಮುಸ್ಲಿಂ ಮುಖಂಡರು ಪೋಲಿಸರ ನಡುವೆ ಮಾತಿನ ಚಕಮಕಿ ನಡೆಯಿತು

ಪೋಲಿಸ್‌ ಮಾಹಿತಿಯ ಪ್ರಕಾರ ಬಲವಂತವಾಗಿ ಅಂಗಡಿ ಮುಂಗಟ್ಟು ಬಂದ್‌ ಮಾಡಿಸಲು ಮುಂದಾದ ನಾಲ್ವರು ಮುಸಿಂ ಮುಖಂಡರಾದ ಶಾರೀಕ್‌ ಅನೀಸ್‌ ಪನ್‌ ಸೋಪ್ತಕರ್‌. ತೈಮೂರ್‌ ಹಸನ್‌ ಗವಾಯಿ ಶಾಹುಲ್‌ ಹಮೀದ್‌ ಗವಾಯಿ , ಅಜೀಮ್‌ ಅಹಮ್ಮದ್‌ ಮೊಹಮ್ಮದ್‌ ಆರಿಪ್‌ , ಮೋಹಿದ್ದೀನ್‌ ಅಬೀರ್‌ ಅಬುಮೋಹಮ್ಮದ್‌ ಎಂಬ ನಾಲ್ವರ ಮೇಲೆ ಪ್ರಕರಣ ದಾಖಲಾಗಿದ್ದು ಈ ಮುಖಂಡರು ಈಗ ಪೇಚಿಗೆ ಸಿಲುಕಿರುದು ತಿಳಿದು ಬಂದಿದೆ ಈ ಹೀಜಾಬ್‌ ತೀರ್ಪೀನ ಬಗ್ಗೆ ತಂಜಿಮ್‌ ಆಕ್ರೋಶ ವ್ಯಕ್ತಪಡಿಸಿದ್ದು ತಾವು ಸುಪ್ರೀಮ್‌ ಕೊರ್ಟಗೆ ಮೆಲ್ಮನವಿ ಹೊಗುತ್ತಿರುವುದಾಗಿ ಸುದ್ದಿಗೋಪ್ಟಿಯಲ್ಲಿ ತಿಳಿಸಿದರು ಹಾಗು ಬುದುವಾರ ತಮ್ಮ ಕಛೇರಿಯನ್ನು ಬಂದ್‌ ಮಾಡುತ್ತಿರುವುದಾಗಿ ಈ ತೀರ್ಪಿನಿಂದ ಯಾರಿಗೆ ನೋವಾಗಿರುತ್ತದೆಯೋ ಅವರು ತಮ್ಮ ಅಂಗಡಿ ಮುಗ್ಗಟ್ಟನ್ನು ಬಂದಿಡಬಹುದು ಎಂದು ಹೇಳುವುದರ ಮೂಲಕ ಭಟ್ಕಳ ತಾಲೂಕಿನಲ್ಲಿ ಮುಸ್ಲೀಂ ವರ್ತಕರಿಗೆ ಪರೋಕ್ಷವಾಗಿ ಬಂದ್‌ ಕರೆಯನ್ನು ನೀಡಿದ್ದರು . ಅದರಂತೆ ಬುದುವಾರವಾದ ಇಂದು ಮುಸ್ಲೀಂ ವರ್ತಕರ ಅಂಗಡಿಗಳು ಬಂದ ಮಾಡಲ್ಪಟ್ಟಿದೆ

ಭಟ್ಕಳದಲ್ಲಿ ತಾಲೂಕ ಸಹಾಯಕ ಆಯುಕ್ತರಾದ ಮಮತಾ ದೇವಿ ಅವರು ನಗರವನ್ನು ಅವಲೋಕಿಸಿ ಮಾಧ್ಯಮದವರೊಂದಿಗೆ ಮಾತನಾಡಿ ಭಟ್ಕಳ ಈಗ ಶಾಂತವಾಗಿದೆ ಯಾವುದೆ ತೊಂದರೆಗಳು ಇಲ್ಲಾ ನಿನ್ನೆ ಬಲವಂತವಾಗಿ ಅಂಗಡಿ ಮುಗ್ಗಟ್ಟು ಬಂದ ಮಾಡಿಸಲು ಪ್ರಯತ್ನಿಸಿದವರ ಮೇಲೆ ಪೋಲಿಸ್‌ ಇಲಾಖೆ ಪ್ರಕರಣ ದಾಖಲಿಸಿದೆ ತಾಲೂಕಿನಾಧ್ಯಂತ ಬೀಗಿ ಪೋಲಿಸ್‌ ಬಂದೋಬಸ್ತ ಏರ್ಪಡಿಸಲಾಗಿದೆ ನಾವು ಎಂತಹ ಸ್ಥಿತಿಯನ್ನು ಎದುರಿಸಲು ಸಮರ್ಥವಾಗಿದ್ದೆವೆ ಎಂದು ಹೇಳಿದರು .

ಭಟ್ಕಳದಲ್ಲಿ ಪರೋಕ್ಷವಾಗಿ ತಂಜಿಮ್‌ ಕೊಟ್ಟ ಬಂದ್‌ ಕರೆಯು ಸಂಪೂರ್ಣವಾಗಿ ವಿಫಲವಾಗಿದೆ ಎಂದೆ ಹೇಳಬಹುದು ಒಟ್ಟಾರೆ ಹೀಜಾಬ್‌ ತೀರ್ಪಿನ ಕಾರಣ ಭಟ್ಕಳ ಬೂದಿ ಮುಚ್ಚಿದ ಕೆಂಡದಂತಿದ್ದು ತಾಲೂಕಿನಾಧ್ಯಂತ ಪೋಲಿಸ್‌ ಸರ್ಪಗಾವಲನ್ನು ಹಾಕಲಾಗಿದ್ದು ನಾಳೆ ಅಂದರೆ ಗುರುವಾರ ಮುಸ್ಲೀಂ ಮುಖಂಡರು ಕರ್ನಾಟಕ ಬಂದಗೆ ಕರೆ ನೀಡಿದ್ದಾರೆ ಎಂಬ ಮಾಹಿತಿಗಳು ಕೇಳಿಬರುತ್ತಿದ್ದು ನಾಳೆ ಭಟ್ಕಳದಲ್ಲಿ ಪರಿಸ್ಥಿತಿ ಏನಾಗಲಿದೆ ಎಂದು ಕಾದು ನೋಡ ಬೇಕಾಗಿದೆ

WhatsApp
Facebook
Telegram
error: Content is protected !!
Scroll to Top