ಭಟ್ಕಳ ತಾಲೂಕಿನಲ್ಲಿ ಹಿಜಾಬ್‌ ತೀರ್ಪಿನ ಕಾರಣ ಕೆಲವು ಅಂಗಡಿ ಮುಂಗಟ್ಟು ಬಲವಂತ ಬಂದ್‌ : ಸ್ಥಳದಲ್ಲೆ ಬೀಡು ಬಿಟ್ಟ ಡಿ ವೈ ಎಸ್‌ ಪಿ ಬೆಳ್ಳಿಯಪ್ಪ

ಭಟ್ಕಳ : ಹಿಜಾಬ್‌ ಸಂಬಂದಿಸಿದಂತೆ ಹೈಕೊರ್ಟ ಮಂಗಳವಾರವಾದ ಇಂದು ಶಾಲಾ ಕಾಳೆಜಿನಲ್ಲಿ ಹಿಜಾಬಿಗೆ ಅವಕಾಶವಿಲ್ಲಾ ಎಂದು ವಿಧ್ಯಾರ್ಥಿಗಳು ಸಮವಸ್ತ್ರವನ್ನು ಖಡ್ಡಾಯವಾಗಿ ದರಿಸಬೇಕು ಎಂಬ ತಿರ್ಪಿನ ಹಿನ್ನೆಲೆಯಲ್ಲಿ ಭಟ್ಕಳ ತಾಲೂಕಿನಲ್ಲಿ ಕೆಲವು ಅಂಗಡಿ ಮುಗ್ಗಟ್ಟುಗಳು ಸ್ವಯೋ ಪ್ರೇರಿತವಾಗಿ ಬಂದ್‌ ಆದರೆ ಕೆಲವು ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸುವ ಪ್ರಯತ್ನಗಳು ನಡೆಯಿತು ಈ ಸಂಬಂದ ಸ್ಥಳಕ್ಕೆ ಡಿ ವೈ ಎಸ್‌ ಪಿ ಬೇಳ್ಳಿಯಪ್ಪ ಅವರು ಅಧಿಕಾರಿಗಳೊಂದಿಗೆ ಬೇಟಿಕೊಟ್ಟು ಉಂಟಾದ ಗೊಂದಲವನ್ನು ಉಪಶಮನ ಗೋಳಿಸಿದರು

ರಾಜ್ಯದಾಧ್ಯಂತ ಹಿಜಾಬ್‌ ವಿವವಾದ ಬುದಿಮುಚ್ಚಿದ ಕೆಂಡದಂತೆ ಪರಿವರ್ತನೆಯಾಗಿದೆ ಕೆಲವು ದಿನಗಳಿಂದ ಶಾಲಾ ಕಾಲೆಜಿನಲ್ಲಿ ಹಿಜಾಬ್‌ ಸಂಬಂದ ಪ್ರತಿಭಟನೆಗಳು ತಲೆ ಎತ್ತಿದ್ದವು ಪ್ರತಿಯೊಬ್ಬರು ಹೈಕೊರ್ಟ ತಿರ್ಪಿಗಾಗಿ ಜಾತಕ ಪಕ್ಷಯಂತೆ ಕಾಯುತ್ತ ಕುಳಿತಿದ್ದರು ಮಂಗಳವಾರವಾದ ಇಂದು ಈ ಹಿಜಾಬ್‌ ವಿವಾದಕ್ಕೆ ಹೈಕೊರ್ಟ ತೆರೆ ಏಳೆದಿದೆ ಶಾಲಾ ಕಾಳೆಜಿನಲ್ಲಿ ಸಮವಸ್ತ್ರ ಕಡ್ಡಾಯವಾಗಿ ಪಾಲಿಸ ಬೇಕು ಶಿಕ್ಷಣ ಸಂಸ್ಥೆಯಲ್ಲಿ ಹಿಜಾಬ್ಗೆ ಅವಕಾಶ ಇಲ್ಲಾ ಎಂಬ ತಿರ್ಪನ್ನು ಹೈಕೊರ್ಟ ನೀಡಿದೆ ಈ ಹಿನ್ನೆಲೆಯಲ್ಲಿ ಭಟ್ಕಳ ತಾಲೂಕಿನಲ್ಲಿ ಬೆಳಿಗ್ಗೆ ಇಂದಲೆ ಬೀಗಿ ಪೋಲಿಸ್ ಬಂದೊಬಸ್ತ ಏರ್ಪಡಿಸಲಾಗಿತ್ತು

ತಾಲೂಕಿನಲ್ಲಿ ಹಿಜಾಬ್ ತರ್ಪಿನ ಸಂಬಂದ ಕೆಲವು ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತವಾಗಿ ಬಂದ್ ಮಾಡಲ್ಪಟ್ಟರೆ ಮುಚ್ಚದ ಅಂಗಡಿ ಮುಗ್ಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸುವ ಪ್ರಯತ್ನ ನಡೆಸಲಾಯಿತು ಈ ಬಗ್ಗೆ ಸುದ್ದಿ ತಿಳಿದ ಡಿ ವೈ ಎಸ್ ಪಿ ಬೆಳ್ಳಿಯಪ್ಪ ಅವರು ತಮ್ಮ ಅಧಿಕಾರಿ ವರ್ಗದವರೊಂದಿಗೆ ಬೇಟಿ ಕೊಟ್ಟು ತಾಲೂಕಿನಲ್ಲಿ ಉಂಟಾಗ ಬೇಕಿದ್ದ ಗೊಂದಲಗಳನ್ನು ಶಮನ ಗೊಳಿಸಿ ಪರಿಸ್ಥಿತಿ ತಿಳಿಗೊಳಿಸಿ ಬಲವಂತವಾಗಿ ಮುಚ್ಚಿಸಲಾಗಿದ್ದ ಅಂಗಡಿ ಮಳಿಗೆಯನ್ನು ತೆರೆಯಿಸಿ ವ್ಯಾಪಾರ ವಹಿವಾಟಿಗೆ ಅವಕಾಶ ಮಾಡಿಕೊಟ್ಟರು

ಒಟ್ಟಾರೆ ಭಟ್ಕಳ ತಾಲೂಕಿನಾಧ್ಯಂತ ಹಿಜಾಬ್ ಸಂಬಂದ ಪೊಲಿಸ್ ಇಲಾಖೆಯ ವತಿಯಿಂದ ಬೀಗಿ ಪೋಲಿಸ್ ಬಂದೋಬಸ್ತ ನಿಡಲಾಗಿತ್ತು

WhatsApp
Facebook
Telegram
error: Content is protected !!
Scroll to Top