ಶಾಲೆ-ಕಾಲೇಜುಗಳಲ್ಲಿ ಹಿಜಾಬ್​ ಧರಿಸಲು ಅವಕಾಶವಿಲ್ಲ, ಸರ್ಕಾರದ ವಸ್ತ್ರ ಸಂಹಿತೆಯನ್ನು ಪ್ರಶ್ನೆ ಮಾಡುವಂತಿಲ್ಲ ಹೈಕೋರ್ಟ್ ನಿಂದ ತೀರ್ಪು ಪ್ರಕಟನೆ..!

ಬೆಂಗಳೂರು: ವಿಶ್ವ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದ್ದ ಹಿಜಾಬ್ (Hijaba) ವಿವಾದಕ್ಕೆ ಕೊನೆಗೂ ತೆರೆ ಬಿದ್ದಿದೆ. ಇಂದು (ಮಾರ್ಚ್​ 15) ಕರ್ನಾಟಕ ಹೈಕೋರ್ಟ್​ನ (Karnataka High Court) ಪೂರ್ಣ ಪೀಠ ಮಹತ್ವದ ತೀರ್ಪು ನೀಡಿದೆ. ಪ್ರತಿ ಪುಟಕ್ಕೂ ಸಹಿ ಹಾಕಿ ಹೇಳಿಕೆ ನೀಡಿದ ಮುಖ್ಯ ನ್ಯಾಯಮೂರ್ತಿ ಸಿಜೆ ರಿತುರಾಜ್ ಅವಸ್ತಿ, ಕೆಲವು ಪ್ರಶ್ನೆಗಳನ್ನು ರಚಿಸಿದ್ದೇವೆ. ಅವುಗಳಿಗೆ ಉತ್ತರವನ್ನೂ ನೀಡಿದ್ದೇವೆ. ಹಿಜಾಬ್ ಇಸ್ಲಾಂ ಧರ್ಮದ ಅತ್ಯಗತ್ಯ ಭಾಗವಲ್ಲ. ಸಮವಸ್ತ್ರ ನಿಗದಿಪಡಿಸುವುದು ಸೂಕ್ತವಾದ ನಿರ್ಬಂಧನೆ. ಸರ್ಕಾರದ ಆದೇಶ ಕಾನೂನುಬದ್ದವಾಗಿದೆ ಎಂದರು.

ಉಡುಪಿಯಿಂದ ಶುರುವಾಗಿದ್ದ ಹಿಜಾಬ್ ಗಲಾಟೆ ಇಡೀ ವಿಶ್ವಕ್ಕೆ ವ್ಯಾಪಿಸಿತ್ತು. ಮುಸ್ಲಿಂ ಸಮುದಾಯದ ಕೆಲ ವಿದ್ಯಾರ್ಥಿನಿಯರು ಹಿಜಾಬ್ ನಮ್ಮ ಹಕ್ಕು,  ನಾವು ಧರಿಸಿಯೇ ಶಾಲೆ- ಕಾಲೇಜಿಗೆ ಬರುತ್ತೇವೆ ಎಂದು ಪ್ರತಿಭಟನೆ ನಡೆಸಿದ್ದರು. ಜೊತೆಗೆ ಹಿಜಾಬ್ ಧರಿಸುವವರೆಗೆ ಕೇಸರಿ ಶಾಲು ಧರಿಸುತ್ತೇವೆ ಅಂತ ಹಲವು ಹಿಂದೂ ವಿದ್ಯಾರ್ಥಿಗಳು ಪಟ್ಟು ಬಿದ್ದಿದ್ದರು.

ಸಿಜೆ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್, ನ್ಯಾ.ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್​ರವರ ಪೂರ್ಣ ಪೀಠ ತೀರ್ಮಾನ ಕೈಗೊಂಡಿದ್ದು, ಸಮವಸ್ತ್ರ ನಿಗದಿಪಡಿಸುವ ಅಧಿಕಾರ ಶಾಲೆಗಳಿಗಿದೆ. ರಾಜ್ಯ ಸರ್ಕಾರದ ಆದೇಶ ಕಾನೂನುಬದ್ಧವಾಗಿದೆ. ಉಡುಪಿ ಕಾಲೇಜಿಗೆ ನಿರ್ದೇಶನ ಹೇರುವ ಅಗತ್ಯವಿಲ್ಲ ಅಂತ ಕೋರ್ಟ್​ ತಿಳಿಸಿದೆ.

ಹೈಕೋರ್ಟ್ ತೀರ್ಪಿನ ಬಗ್ಗೆ ಸಿಎಂ ಬೊಮ್ಮಾಯಿ ಹೇಳಿದ್ದೇನು ಗೊತ್ತಾ.


ಈಗತಾನೇ ಮಾಧ್ಯಮಗಳಿಂದ ಹೈಕೋರ್ಟ್​ನ ಸಮವಸ್ತ್ರದ ತೀರ್ಪಿನ ಮಾಹಿತಿ ಬಂದಿದೆ. ಸಮವಸ್ತ್ರವನ್ನ ಎತ್ತಿ ಹಿಡಿದಿದೆ. ಮಕ್ಕಳ ಶಿಕ್ಷಣದ ಪ್ರಜ್ಞೆ ಇದೆ. ಮಕ್ಕಳಿಗೆ ಶಿಕ್ಷಣಕ್ಕಿಂತ ಬೇರೆ ಯಾವುದು ಇಲ್ಲ. ಇದನ್ನ ಮಕ್ಕಳು ಪಾಲಿಸಬೇಕು. ಇದನ್ನ ಅನುಷ್ಠಾನಕ್ಕೆ ತರುವ ಸಂದರ್ಭದಲ್ಲಿ ಎಲ್ಲರು ಸಹಕರಿಸಬೇಕು. ಶಾಂತಿ ಸುವ್ಯವಸ್ಥೆ ಬಹಳ ಮುಖ್ಯ. ನಾನು ಎಲ್ಲಾ ಸಮುದಾಯದ ನಾಯಕರಿಗೆ ಶಿಕ್ಷಕರಿಗೆ ಪೋಷಕರಿಗೆ ಮಕ್ಕಳಿಗೆ ಮನವಿ ಮಾಡುತ್ತೇನೆ.

ಎಲ್ಲರೂ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಸಹಕರಿಸಬೇಕು. ಎಲ್ಲಾ ಪರೀಕ್ಷೆಗಳಿಗೂ ಭಾಗವಹಿಸಬೇಕು. ಶಿಕ್ಷಣ ಬಹಳ ಮುಖ್ಯ. ಕಾನೂನು ಸುವ್ಯವಸ್ಥೆಗೆ ನಿಯೋಜನೆ ಮಾಡಿದ್ದೇವೆ. ಹೈಕೋರ್ಟ್ ತೀರ್ಪನ್ನ ಎಲ್ಲರೂ ಪಾಲಿಸಬೇಕು ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

WhatsApp
Facebook
Telegram
error: Content is protected !!
Scroll to Top