ಭಟ್ಕಳ ತಾಲೂಕಿನಲ್ಲಿ ಕಾಮಗಾರಿಗಳ ಹೆಸರಿನಲ್ಲಿ ಸಾರ್ವಜನಿಕರ ಹಣ ಹಗಲು ದರೋಡೆ: ಕಣ್ಣಿದ್ದು ಕುರುಡಾದ ಪಿ ಡಬ್ಲೂಡಿ ಇಲಾಖೆ

ಕಾಂಕ್ರೇಟ್‌ ರಸ್ತೆ ನಿರ್ಮಾಣವಾಗಿ ಎರಡು ತಿಂಗಳಲ್ಲೆ ಸಂಪೂರ್ಣ ಹದಗೆಟ್ಟಿದ್ದು ಕಾಂಕ್ರೇಟ್‌ ರಸ್ತೆಗೆ ಡಾಂಬರಿಕರಣ ಮಾಡಿದ ಗುತ್ತಿಗೆದಾರ

ಸಂಬಂದಿಸಿದ ಇಲಾಖೆ ಕ್ರಮ ಕೈಗೊಳ್ಳಬೇಕು ಮಾಜಿ ಸೈನಿಕ ಎಂ ಡಿ ಪಕ್ಕಿ ಆಕ್ರೋಶ

ಭಟ್ಕಳ ತಾಲೂಕಿನಲ್ಲಿ ರಸ್ತೆ ಕಾಮಗಾರಿಯ ಹೆಸರಿನಲ್ಲಿ ಕೋಟಿ ಕೋಟಿ ದುಂದು ವೆಚ್ಚವಾಗುತ್ತಿದ್ದು ಲಕ್ಷ ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಕಾಂಕ್ರೇಟ್‌ ರಸ್ತೆ ಆರು ತಿಂಗಳಲ್ಲಿ ಸಂಪೂರ್ಣ ಕಿತ್ತುಹೋಗಿದ್ದು ಕಿತ್ತುಹೋದ ಕಾಂಕ್ರೀಟ್‌ ರಸ್ತೆಯ ಮೇಲೆ ನಿಯಮ ಬಾಹಿರವಾಗಿ ಡಾಂಬರಿಕರಣ ನಡೆಸಲಾಗಿದೆ. ಸರಕಾರದ ಹಣವನ್ನು ದುಂದು ವೆಚ್ಚ ಮಾಡಲಾಗುತ್ತಿದೆ ಈ ಬಗ್ಗೆ ಸಂಬಂದಿಸಿದ ಇಲಾಖಾ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸೈನಿಕ ಎಂ ಡಿ ಪಕ್ಕಿ ಆಕ್ರೋಶವನ್ನು ವ್ಯಕ್ತ ಪಡಿಸಿದರು ತಾಲೂಕಿನಲ್ಲಿ ಯಾವ ರೀತಿಯಲ್ಲಿ ದುಂದು ವೆಚ್ಚ, ಹಗಲು ದರೋಡೆ ನಡೆಯುತ್ತಿದೆ ಈ ಬಗ್ಗೆ ಮಾಜಿ ಸೈನಿಕರಾದ ಎಂ ಡಿ ಪಕ್ಕಿ ಏನು ಹೇಳಿದ್ದಾರೆ ಎನ್ನುವುದನ್ನು ನೋಡೊಣ ಬನ್ನಿ

ಕೆಂದ್ರ ಹಾಗು ರಾಜ್ಯ ಸರಕಾರಗಳು ಹಳ್ಳಿಯಿಂದ ದಿಲ್ಲಿಯವರೆಗೂ ಅಭಿವೃದ್ದಿ ಕಾಣಬೇಕು ಯಾವಾಗಲು ದೇಶ ಅಭಿವೃದ್ದಿಯ ಪಥದಲ್ಲಿ ಸಾಗಬೇಕು ಎಂಬ ಮೂಲ ಮಂತ್ರವನ್ನು ಮುಂದಿಟ್ಟುಕೊಂಡು ಕೋಟಿ ಕೋಟಿ ಅನುದಾನಗಳನ್ನು ಮಂಜುರು ಮಾಡುತ್ತಿದೆ ಆದರೆ ಕೆಲವು ಜನ ಪ್ರತಿನಿದಿಗಳು ಹಾಗು ಗುತ್ತಿಗೆದಾರರು ಸರಕಾರಿ ಅಧಿಕಾರಿಗಳು ಸರಕಾರ ಅನುದಾನ ಬಿಡುಗಡೆ ಮಾಡುವುದೆ ತಮಗಾಗಿ ಎನ್ನುವಂತೆ, ಸರಕಾರ ಬಿಡುಗಡೆ ಮಾಡಿದ ಅನುದಾನವನ್ನು ನುಂಗಿ ನೀರು ಕುಡಿದು ಬಿಡುತ್ತಾರೆ. ಜನ ಸಾಮಾನ್ಯ ತನ್ನ ವತಿಯಿಂದ ದೇಶದ ಬೊಕ್ಕಸಕ್ಕೆ ಕಿಂಚಿತ್ತಾದರು ಕೊಡುಗೆ ಇರಲಿ ಎಂಬ ದ್ರಷ್ಟೀಯಲ್ಲಿ ಕಷ್ಟಪಟ್ಟು ತೆರಿಗೆಯನ್ನು ಕಟ್ಟುತ್ತಾನೆ ಆದರೆ ಕೆಲವು ಪಟ್ಟಬದ್ರ ಹಿತಾಸಕ್ತಿಗಳು ಮಾತ್ರ ಸರಕಾರದಿಂದ ಬಿಡುಗಡೆಯಾದ ಕೊಟ್ಯಾಂತರ ಅನುದಾನಗಳನ್ನು ತಮ್ಮ ಸ್ವಹಿತಾಸಕ್ತಿಗಳಿಗೆ ಉಪಯೋಗಿಸಿಕೊಳ್ಳುತ್ತದೆ. ಕಾಮಗಾರಿ ಹೆಸರಲ್ಲಿ ಅವ್ಯವಹಾರ ನಡೆಸಿ ಹಗಲು ದರೋಡೆಯನ್ನು ನಡೆಸುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ತಾಲೂಕಿನಲ್ಲಿ ಯಾವ ರೀತಿಯಲ್ಲಿ ರಸ್ತೆ ಕಾಮಗಾರಿ ಹೆಸರಲ್ಲಿ ಲಕ್ಷಾಂತರ ಕೊಟ್ಯಾಂತರ ಹಣ ಪೋಲಾಗುತ್ತಿದೆ ಎಂಬುವುದಕ್ಕೆ ತಾಲೂಕಿನ ಶಿರಾಲಿಯಲ್ಲಿ ಶಾಸಕರ ಮನೆ ಮುಂಬಾಗದ ಕಾಂಕ್ರೇಟ್‌ ರಸ್ತೆಯೇ ನಿದರ್ಶನ ಎಂದು ಹೇಳಬಹುದು. ಈ ಕಾಂಕ್ರೇಟ್‌ ರಸ್ತೆ ಭಟ್ಕಳ ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಶಾಸಕ ಸುನಿಲ್‌ ನಾಯ್ಕ ಅವರ ಶಿರಾಲಿಯ ನಿವಾಸದ ಮುಂಭಾಗದಲ್ಲೆ ಇದ್ದು ಲಕ್ಷಗಟ್ಟಲೆ ವೆಚ್ಚದಲ್ಲಿ ನಿರ್ಮಾಣವಾದ ಈ ಕಾಂಕ್ರೇಟ್‌ ರಸ್ತೆ ನಿರ್ಮಾಣವಾಗಿ ಮೂರು ನಾಲ್ಕು ತಿಂಗಳಲ್ಲೆ ಈ ರಸ್ತೆ ಸಂಪೂರ್ಣವಾಗಿ ಕಿತ್ತುಹೊಗಿದೆ. ಅಭಿವೃದ್ದಿಯ ಹೆಸರಲ್ಲಿ ಸರಕಾರ ಮಂಜುರು ಮಾಡಿದ್ದ ಲಕ್ಷಾಂತರ ಮೌಲ್ಯದ ಅನುದಾನ ಹೊಳೆಯಲ್ಲಿ ಹುಣಸೆ ಹಣ್ಣು ಕಿವುಚಿದ ಹಾಗೆ ಆಗಿದೆ.

ಈ ಕಾಂಕ್ರೇಟ್‌ ರಸ್ತೆಯ ಕಥೆ ಹೇಳಬೇಕು ಎಂದರೆ , ತಾಲೂಕಿನ ಶಿರಾಲಿಯಲ್ಲಿ ಭಟ್ಕಳ ಹೊನ್ನಾವರ ಕ್ಷೇತ್ರದ ಶಾಸಕರಾದ ಸುನಿಲ್‌ ನಾಯ್ಕ ಅವರ ಮನೆಯ ಮುಂದೆ ನಿರ್ಮಾಣವಾದ ಶಿರಾಲಿ ಕೋಟೆ ಬಾಗಿಲಿಗೆ ಹೊಗುವ ಕಾಂಕ್ರೇಟ್‌ ರಸ್ತೆಯನ್ನು ಸರಕಾರದ ಲಕ್ಷಾಂತರ ಅನುಧಾನದಲ್ಲಿ ನಿರ್ಮಾಣ ಮಾಡಲಾಗಿತ್ತು ರಸ್ತೆಯೆನೋ ಅಭಿವೃದ್ದಿಯ ಹೆಸರಲ್ಲಿ ನಿರ್ಮಾಣವಾಯಿತು ಆದರೆ ರಸ್ತೆ ನಿರ್ಮಾಣವಾಗಿ ಮೂರು ನಾಲ್ಕು ತಿಂಗಳುಗಳಲ್ಲೆ ಸಂಪೂರ್ಣ ಕಿತ್ತುಹೊಗಿದೆ ಈ ಬಗ್ಗೆ ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ‌ ಸಾರ್ವಜನಿಕರ ಆಕ್ರೋಶದ ಕಾರಣ ಕಾಮಗಾರಿ ಮಾಡಿದ ಗುತ್ತಿಗೆದಾರ ರಸ್ತೆಯ ದುರಸ್ಸಿಯ ಹೆಸರಲ್ಲಿ ಕಾಂಕ್ರೇಟ್‌ ರಸ್ತೆಯ ಮೇಲೆಯೆ ಡಾಂಬರಿಕರಣ ನಡೆಸಿದ್ದಾನೆ ಇದೆಂತಾ ಕಾಮಗಾರಿ ಸ್ವಾಮಿ ಕಾಮಗಾರಿ ನಡೆಸಿ ಮೂರು ನಾಲ್ಕು ತಿಂಗಳಲ್ಲೆ ರಸ್ತೆ ಸಂಪೂರ್ಣ ಕಿತ್ತುಹೊಗುತ್ತದೆ ಎಂದರೆ ಇದು ಎಷ್ಟರಮಟ್ಟಿಗೆ ಕಳಪೆಯಾಗಿ ನಿರ್ಮಾಣವಾಗಿರಬಹುದು ನೀವೆ ಉಹಿಸಿ ತಪ್ಪಿನ ಮೇಲೆ ತಪ್ಪು ಎಂಬಂತೆ ಈ ಗುತ್ತಿಗೆದಾರ ಕಾಂಕ್ರೇಟ್‌ ರಸ್ತೆಯ ಮೇಲೆ ಡಾಂಬರಿಕರಣ ಮಾಡುತ್ತಾನೆ ಹಾಗಾದರೆ ಇಲ್ಲಿ ಪಿ ಡಬ್ಲೂಡಿ ಇಲಾಖೆ ಮಾಡುತ್ತಿರುವುದಾದದರು ಏನು ಇಲಾಖೆಯ ಇಂಜಿನಿಯರಗೆ ಸಾಮಾನ್ಯ ಜನರಿಗಿರುವ ಸಾಮಾನ್ಯ ಜ಼್ಛಾನವು ಇಲ್ಲವಾ? ಯಾರಾದರು ಕಾಂಕ್ರೆಟ್‌ ರಸ್ತೆಯ ಮೇಲೆ ಡಾಂಬರಿಕರಣ ನಡೆಸುತ್ತಾರಾ ಇದೆಂತ ಕಾಮಗಾರಿ ಸ್ವಾಮಿ ಎನ್ನುವುದು ಸ್ಥಳಿಯ ಸಾರ್ವಜನಿಕರ ಪ್ರಶ್ನೇಯಾಗಿದೆ

ಈ ಬಗ್ಗೆ ಮಾಜಿ ಸೈನಿಕ ಎಂ ಡಿ ಪಕ್ಕಿ ಅವರು ನಮ್ಮ ಕರಾವಳಿ ಸಮಾಚಾರದೊಂದಿಗೆ ಮಾತನಾಡಿ ಕಾಮಗಾರಿ ಹೇಸರಿನಲ್ಲಿ ಲಕ್ಷಾಂತರ ಹಣ ದುಂದು ವೆಚ್ಚವಾಗುತ್ತಿದೆ ಕಾಂಕ್ರೇಟ್‌ ರಸ್ತೆ ನಿರ್ಮಾಣವಾಗಿ ಕೆಲವೆ ತಿಂಗಳಲ್ಲಿ ಸಂಪೂರ್ಣ ಕಿತ್ತುಹೊಗಿದೆ ಈಗ ಸರಕಾರದ ಲಕ್ಷಾಂತರ ಅನುಧಾನದಲ್ಲಿ ನಿರ್ಮಾಣವಾದ ಕಾಂಕ್ರೇಟ್‌ ರಸ್ತೆ ಕಿತ್ತುಹೊಗಿದೆ ಈ ರಸ್ತೆಯ ಮೇಲೆ ಈಗ ಡಾಂಬರಿಕರಣ ನಡೆಸಲಾಗುತ್ತಿದೆ ಮೊದಲೆ ಕೊರೊನಾ ಹಾಗು ಇನ್ನಿತರ ಕಾರಣದಿಂದ ಸಾರ್ವಜನಿಕರು ಸಂಕಷ್ಟದಲ್ಲಿದ್ದಾರೆ ಕಾಮಗಾರಿ ಹೆಸರಲ್ಲಿ ದುಂದು ವೆಚ್ಚ ನಡೆಸಲಾಗುತ್ತಿದೆ ಈ ಬಗ್ಗೆ ಸಂಬಂದಿಸಿದ ಇಲಾಖೆ ಕೂಡಲೆ ಕ್ರಮ ಕೈಗೊಳ್ಳ ಬೇಕು ಎಂದು ಹೇಳಿದರು

ಇಲ್ಲಿ ಮುಖ್ಯವಾಗಿ ಈ ಇಲಾಖಾ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸೇರಿಕೊಂಡು ಶಾಸಕ ಸುನಿಲ್‌ ನಾಯ್ಕ ಅವರ ಮನೆಯ ಮುಂದೆಯೆ ಇಂತಹ ಕಳಪೆ ಕಾಮಗಾರಿಯನ್ನು ನಡೆಸಿದ್ದಾರೆ ಎಂದರೆ ನೀವೆ ಯೋಚಿಸಿ ಇವರಿಗೆ ಎಷ್ಟು ಹುಂಬ ದೈರ್ಯ ಇರಬಹುದು ಎಂದು ಇವರು ಹೀಗೆ ತಾಲೂಕಿನಾಧ್ಯಂತ ಇಂತಹ ಕಳಪೆ ಕಾಮಗಾರಿ ಎಷ್ಟು ನಡೆಸಿರಬಹುದು ಎಂದು

ಈ ಕಾಂಕ್ರೇಟ್‌ ರಸ್ತೆಯ ಕಾಮಗಾರಿ ಅವಾಂತರದ ಬಗ್ಗೆ ಪಿ ಡಬ್ಲೂ ಡಿ ಇಳಜಿನಿಯರ್‌ ಅವರನ್ನು ಹೇಳಿದರೆ ಇದು ನನ್ನ ಅವದಿಯಲ್ಲಿ ನಡೆದ ಕಾಮಗಾರಿಯಲ್ಲಾ ಮೊದಲಿದ್ದ ಇಂಜಿನಿಯರ್‌ ವರ್ಗಾವಣೆಯಾಗಿದೆ ಅವರಲ್ಲೆ ಈ ಬಗ್ಗೆ ಮಾತನಾಡಿ ಎಂಬ ಉತ್ತರವನ್ನು ಕೊಡುತ್ತಾರೆ ಸರಿ ಬಿಡಿ ಅವರಲ್ಲೆ ಮಾತನಾಡೊಣ ಎಂದು ಮೊದಲಿದ್ದ ಇಂಜಿನಿಯರ್‌ ಸಂತೋಷ ಅವರಿಗೆ ಕರೆ ಮಾಡಿದರೆ ಹೌದು ನಾವು ಕಾಂಕ್ರೇಟ್‌ ರಸ್ತೆಯ ಮೇಲೆ ಡಾಂಬರಿಕರಣ ನಡೆಸುತ್ತೆವೆ ಕಾರಣ ಅದು ಸಂಪೂರ್ಣ ಕಿತ್ತುಹೊಗಿದೆ ಮೇಂಟೆನೆನ್ಸ ಮಾಡಬೇಕು ಅದಕ್ಕೆ ನಾವು ಕಾಂಕ್ರೇಟ್‌ ರಸ್ತೆಯ ಮೇಲೆ ಡಾಂಬರಿಕರಣ ಮಾಡುತ್ತೆವೆ ಎಂಬ ಬೇಜವಬ್ದಾರಿತನದ ಮಾತನಾಡುತ್ತಾರೆ. ಏನು ಸ್ವಾಮಿ ರಸ್ತೆ ನಿರ್ಮಾಣವಾಗಿ ಮೂರು ನಾಲ್ಕು ತಿಂಗಳಲ್ಲೆ ಸಂಪೂರ್ಣ ಕಿತ್ತುಹೋಗಿದೆಯಲ್ಲಾ ಎಂದರೆ ಹೌದು ನಾವು ಕಾಮಗಾರಿ ನಡೆಸಿದ ಸಂದರ್ಬದಲ್ಲಿ ಸ್ಥಳಿಯ ಸಾರ್ವಜನಿಕರು ರಸ್ತೆಯಲ್ಲಿ ತಿರುಗಾಡ ಬೇಡಿ ಎಂದು ಹೇಳಿದರು ಕೇಳಲಿಲ್ಲಾ ಇವತ್ತು ರಸ್ತೆ ಹಾಳಾಗಲಿಕ್ಕೆ ಸಾರ್ವಜನಿಕರೆ ಕಾರಣ ಎಂದು ತಪ್ಪನ್ನು ಸ್ಥಳಿಯ ಸಾರ್ವಜನಿಕರ ಮೇಲೆ ಎತ್ತಿ ಹಾಕುವ ಕೆಲಸವನ್ನು ಮಾಡುತ್ತಾರೆ ಕಾಂಕ್ರೇಟ್‌ ರಸ್ತೆಯ ಮೇಲೆ ನೀವು ಹೇಗೆ ಡಾಂಬರಿಕರಣ ನಡೆಸುತ್ತಿರು ಇದು ಕಾಂಕ್ರೇಟ್‌ ರಸ್ತೆಯೋ ಡಾಂಬರ್‌ ರಸ್ತೆಯೋ ಎಂದು ಕೇಳಿದರೆ ರಸ್ತೆ ಹಾಳಾಗಿದೆ ದುರಸ್ಥಿ ಮಾಡಬೇಕೋ ಬೇಡವೋ ಎಂಬ ಪ್ರಶ್ನೇಯನ್ನು ನಮ್ಮನೆ ಕೇಳುತ್ತಾರೆ ಹೆಚ್ಚಿನ ಮಾಹಿತಿಗಾಗಿ ಪುನಃ ಸಂಪರ್ಕಕ್ಕೆ ಪ್ರಯತ್ನಿಸಿದರೆ ಇಂಜಿನಿಯ ಕರೆ ಕಟ್‌ ಮಾಡುವ ಕೆಲಸವನ್ನು ಮಾಡುತ್ತಾರೆ ಇದು ನಮ್ಮ ಇಲಾಖಾ ಅಧಿಕಾರಿಗಳ ಕರ್ತವ್ಯ ನಿಷ್ಟತೆಯನ್ನು ನಮಗೆ ತೋರಿಸುತ್ತದೆ

ತಾಲೂಕಿನಲ್ಲಿ ಈ ಗುತ್ತಿಗೆದಾರರು ಇಲಾಖಾ ಅಧಿಕಾರಿಗಳು ರಸ್ತೆ ಕಾಮಗಾರಿಯ ಹೆಸರಲ್ಲಿ ಲಕ್ಷಗಟ್ಟಲೆ ಕೋಟಿಗಟ್ಟಲೆ ಹಣ ನುಂಗಿ ನೀರು ಕುಡಿಯುತ್ತಿದ್ದರೆ ಕೆಲವು ಸ್ವ ಹಿತಾಸಕ್ತಿಗಳು ಇವರನ್ನು ಸಮರ್ಥಿಸಿಕೊಂಡು ತಾಲೂಕಿನಲ್ಲಿ ಸುರಿದ ಅತಿವೃಷ್ಟಿಯ ಕಾರಣ ರಸ್ತೆ ಕಿತ್ತುಹೊಗಿದೆ ಯಾರೆನು ಮಾಡಲು ಸಾಧ್ಯ ಎಂದು ಮಾಡಿದ ಭ್ರಷ್ಟಾಚಾರವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ ಈ ಬಗ್ಗೆ ಸಾರ್ವಜನಿಕರು ತಾಲೂಕಿನ ಎಲ್ಲಾ ಕಾಂಕ್ರೇಟ್ ರಸ್ತೆಗಳು ಹೀಗೆ ಸಂಪೂರ್ಣ ಕಿತ್ತು ಹೊಗಿದೆಯೆ ಅಲ್ಲಿಯು ಕೂಡಾ ಡಾಂಬರಿಕರಣ ನಡೆಸುತ್ತಿರಾ ಎಂದು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ

ಪ್ರಧಾನ ಮಂತ್ರಿಗಳು ದೇಶದಲ್ಲಿ ಅಭಿವೃದ್ದಿಗಾಗಿ ದೇಶದಾಧ್ಯಂತ ಅಭಿವೃದ್ದಿಯ ಮಹಾಪರ್ವವನ್ನೆ ಹುಟ್ಟುಹಾಕಿದ್ದಾರೆ ಆದರೆ ಇಂಥಾ ಅಧಿಕಾರಿಗಳು ಹಾಗು ಇಂತಹ ಹೊಟ್ಟೆ ಬಾಕ ಗುತ್ತಿಗೆದಾರರ ಇಂತಹ ಕ್ರತ್ಯಗಳಿಂದಲೆ ನಮ್ಮ ದೇಶದ ಅಭಿವೃದ್ದೀ ಕುಂಟುತ್ತಾ ಸಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲಾ ಎಲ್ಲಿಯವರೆಗೆ ನಮ್ಮ‌ ದೇಶದ ಪ್ರಜೇಗಳು ಎಚ್ಚೆತ್ತುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಸಾಕ್ಷಾತ ಆ ಭಗವಂತ ಧರೆಗಿಳಿದರು ಕೂಡಾ ಏನು ಮಾಡಲು ಸಾಧ್ಯವಾಗದು ಎನ್ನುವುದು ಪ್ರಜ್ಞಾವಂತರ ಮಾತಾಗಿದೆ

WhatsApp
Facebook
Telegram
error: Content is protected !!
Scroll to Top