ಹೆಂಡ್ತಿ ಹೆಣ್ಣಲ್ಲ ಗಂಡು, ಆಕೆಗೆ ಶಿಶ್ನವಿದೆ ಎಂದು ಕೋರ್ಟ್​ ಮೆಟ್ಟಿಲೇರಿದ ಗಂಡ..!

ಜಗತ್ತಿನಲ್ಲಿ ಏನೇನೋ ವಿಚಿತ್ರಗಳು ನಡೆಯುತ್ತಲೇ ಇರುತ್ತವೆ. ಅಚ್ಚರಿ ಮೂಡಿಸೋ ಸಂಗತಿಗಳು, ವಿಚಿತ್ರ ಅನಿಸೋ ವಿಚಾರಗಳು, ಹೀಗೂ ಇದ್ಯಾ ಎಂದು ಜನರನ್ನು ದಂಗುಬಡಿಸುತ್ತವೆ. ಆದರೆ ಕೆಲವೊಂದು ವಿಚಾರಗಳು ಬಿಡಿಸಿದಷ್ಟು ರಹಸ್ಯಕರವಾಗಿ ಕಾಣುವಂತಿರುತ್ತವೆ. ಅದು ನೈಸರ್ಗಿಕವಾಗಿ (Natural) ಆಗಿರುತ್ತೆ ಅಷ್ಟೇ, ಅದಕ್ಕೆ ಕಾರಣವಿಲ್ಲ, ಕಾರಣ ಹೇಳೋರು ಇಲ್ಲ. ಇಲ್ಲೊಂದು ಕಡೆ ಗಂಡ ವಿಚಿತ್ರ ಸಮಸ್ಯೆಯೊಂದನ್ನು ಹೇಳಿಕೊಂಡು ಕೋರ್ಟ್​ ಮೆಟ್ಟಿಲೇರಿದ್ದಾನೆ. ತನ್ನ ಹೆಂಡ್ತಿಗೆ ಯೋನಿಯೇ ಇಲ್ಲ ಎನ್ನುವುದು ಈತನ ದೂರು. ಹೆಣ್ಣಾದ ಮೇಲೆ ಯೋನಿ ಇಲ್ಲದಿರುತ್ತದೆಯೇ ಎನ್ನಬೇಡಿ, ಇವನಂತೂ ಆರೋಪ ಮಾಡಿ ಕೋರ್ಟ್ (Court) ಮೆಟ್ಟಿಲು ಹತ್ತಿಯೇಬಿಟ್ಟಿದ್ದಾನೆ.

ತನ್ನ ಪತ್ನಿ ಪುರುಷ ಜನನಾಂಗವನ್ನು (Penis) ಹೊಂದಿರುವುದರಿಂದ ಈ ಮೂಲಕ ತನಗೆ ವಂಚನೆ ಮಾಡಿದ್ದಕ್ಕಾಗಿ ಕ್ರಿಮಿನಲ್ (Criminal) ಮೊಕದ್ದಮೆ ಹೂಡಬೇಕು ಎಂಬ ಗಂಡನ ಮನವಿಯನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ (Supreme Court) ಸಮ್ಮತಿಸಿದೆ.

ಪತಿಯ ಆರೋಪದ ಬಗ್ಗೆ ಪತ್ನಿ ಹೇಳಿದ್ದೇನು?

ಆರಂಭದಲ್ಲಿ ಅರ್ಜಿಯನ್ನು ಪರಿಗಣಿಸಲು ಕೋರ್ಟ್ ಸಮ್ಮತಿಸಿರಲಿಲ್ಲ. ನ್ಯಾಯಾಧೀಶರಾದ ಸಂಜಯ್ ಕಿಶನ್ ಕೌಲ್ ಮತ್ತು ಎಂಎಂ ಸುಂದ್ರೇಶ್ ಅವರ ಪೀಠವು, ಪುರುಷನು ತನ್ನ ಹೆಂಡತಿಗೆ ಶಿಶ್ನ ಮತ್ತು ಅಪೂರ್ಣ ಕನ್ಯಾಪೊರೆ ಇದೆ ಎಂದು ವೈದ್ಯಕೀಯ ವರದಿಯನ್ನು ಬಹಿರಂಗಪಡಿಸಿದ ನಂತರ ಪತ್ನಿಯಿಂದ ಪ್ರತಿಕ್ರಿಯೆ ಕೇಳಿದರು. ಅಪೂರ್ಣ ಕನ್ಯಾಪೊರೆಯು ಜನ್ಮಜಾತ ಅಸ್ವಸ್ಥತೆಯಾಗಿದ್ದು, ತೆರೆಯದೆ ಇರುವ ಕನ್ಯಾಪೊರೆಯು ಯೋನಿಯನ್ನು ಸಂಪೂರ್ಣವಾಗಿ ತಡೆಯುತ್ತದೆ ಎನ್ನಲಾಗಿದೆ.

ಇದು ಕ್ರಿಮಿನಲ್ ಅಪರಾಧವೇ?

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420 (ವಂಚನೆ) ಅಡಿಯಲ್ಲಿ ಇದನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣನೆ ಮಾಡಲಾಗುವುದು. ಏಕೆಂದರೆ ಹೆಂಡತಿ “ಪುರುಷ” ಆಗಿದ್ದಾಳೆ ಎಂದು ಗಂಡನನ್ನು ಪ್ರತಿನಿಧಿಸಿದ ಹಿರಿಯ ವಕೀಲ ಎನ್‌ಕೆ ಮೋದಿ ಪೀಠಕ್ಕೆ ತಿಳಿಸಿದರು.

ಜನನಾಂಗಗಳ ಬಗ್ಗೆ ತಿಳಿದಿದ್ದರೂ ಮೋಸ ಮಾಡಿದಳೇ

“ಅವಳು ಒಬ್ಬ ಗಂಡಸು. ಇದು ಖಂಡಿತವಾಗಿಯೂ ಮೋಸವಾಗಿದೆ. ದಯವಿಟ್ಟು ವೈದ್ಯಕೀಯ ದಾಖಲೆಗಳನ್ನು ನೋಡಿ. ಇದು ಕೆಲವು ಜನ್ಮಜಾತ ಅಸ್ವಸ್ಥತೆಯ ಪ್ರಕರಣವಲ್ಲ. ನನ್ನ ಕಕ್ಷಿದಾರನಿಗೆ ಗಂಡು ಮದುವೆಯಾಗಿ ವಂಚನೆ ಮಾಡಿರುವ ಪ್ರಕರಣ ಇದಾಗಿದೆ. ಆಕೆಗೆ ತನ್ನ ಜನನಾಂಗಗಳ ಬಗ್ಗೆ ಖಚಿತವಾಗಿ ತಿಳಿದಿತ್ತು,” ಎಂದು ಮೋದಿ ಒತ್ತಿ ಹೇಳಿದರು.

ಅಪೂರ್ಣ ಕನ್ಯಾಪೊರೆ

ವಂಚನೆ ಆರೋಪದ ಅರಿವು ಪಡೆದು ಪತ್ನಿಗೆ ಸಮನ್ಸ್ ಜಾರಿ ಮಾಡಿದ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಆದೇಶವನ್ನು ರದ್ದುಗೊಳಿಸಿದ ಜೂನ್ 2021 ರಲ್ಲಿ ಮಧ್ಯಪ್ರದೇಶ ಹೈಕೋರ್ಟ್ ತೀರ್ಪಿನ ವಿರುದ್ಧ ಹಿರಿಯ ವಕೀಲರು ವಾದ ಮಂಡಿಸಿದ್ದರು. ಅಪೂರ್ಣ ಕನ್ಯಾಪೊರೆ ಇರುವ ಕಾರಣ ಪತ್ನಿ ಮಹಿಳೆ ಎಂದು ಹೇಳಲು ಸಾಧ್ಯವಿಲ್ಲ ಎಂದು ತೋರಿಸಲು ಸಾಕಷ್ಟು ವೈದ್ಯಕೀಯ ಸಾಕ್ಷ್ಯಗಳಿವೆ ಎಂದು ಮೋದಿ ದೂರಿದ್ದಾರೆ.

ಶಿಶ್ನವಿದ್ದರೆ ಹೆಣ್ಣಾಗೋದು ಹೇಗೆ?

ಈ ಹಂತದಲ್ಲಿ, ನ್ಯಾಯಾಲಯವು “ಒಂದು ಅಪೂರ್ಣ ಕನ್ಯಾಪೊರೆ ಇದೆ ಎಂಬ ಕಾರಣಕ್ಕೆ ಲಿಂಗವು ಸ್ತ್ರೀ ಅಲ್ಲ ಎಂದು ನೀವು ಹೇಳಬಹುದೇ? ಆಕೆಯ ಅಂಡಾಶಯಗಳು ಸಹಜವಾಗಿವೆ ಎಂದು ವೈದ್ಯಕೀಯ ವರದಿ ಹೇಳುತ್ತದೆ ಎಂದಿದ್ದಾರೆ. ಇದಕ್ಕೆ ಉತ್ತರಿಸಿದ ಮೋದಿ “ಹೆಂಡತಿಗೆ ಕೇವಲ ಅಪೂರ್ಣ ಕನ್ಯಾಪೊರೆ ಇರುವುದಲ್ಲ. ಆದರೆ ಶಿಶ್ನವೂ ಇದೆ. ಆಸ್ಪತ್ರೆಯೊಂದರ ವೈದ್ಯಕೀಯ ವರದಿ ಸ್ಪಷ್ಟವಾಗಿ ಹೇಳುತ್ತದೆ. ಶಿಶ್ನ ಇರುವಾಗ ಅವಳು ಹೆಣ್ಣಾಗುವುದು ಹೇಗೆ? ಎಂದು ಪ್ರಶ್ನಿಸಿದ್ದಾರೆ.

ಪೀಠವು ಪತ್ನಿ, ಆಕೆಯ ತಂದೆ ಮತ್ತು ಮಧ್ಯಪ್ರದೇಶ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದ್ದು, ಆರು ವಾರಗಳಲ್ಲಿ ಉತ್ತರ ನೀಡುವಂತೆ ಸೂಚಿಸಿದೆ. ಮೇ 2019 ರಲ್ಲಿ, ಗ್ವಾಲಿಯರ್ ಮ್ಯಾಜಿಸ್ಟ್ರೇಟ್ ಅವರು ವ್ಯಕ್ತಿ ಸಲ್ಲಿಸಿದ ದೂರಿನ ಮೇರೆಗೆ ಪತ್ನಿಯ ವಿರುದ್ಧ ವಂಚನೆ ಆರೋಪದ ಬಗ್ಗೆ ಗಮನಹರಿಸಿದ್ದರು.

2016 ರಲ್ಲಿ ಅವರ ಮದುವೆಯ ನಂತರ, ಹೆಂಡತಿಗೆ ಪುರುಷ ಜನನಾಂಗವಿದೆ. ಮದುವೆಯನ್ನು ಜವಾಬ್ದಾರು ಪೂರೈಸಲು ದೈಹಿಕವಾಗಿ ಅಸಮರ್ಥಳಾಗಿದ್ದಾಳೆ ಎಂದು ಅವರು ಆರೋಪಿಸಿದರು. ಆ ವ್ಯಕ್ತಿ 2017ರ ಆಗಸ್ಟ್‌ನಲ್ಲಿ ಪತ್ನಿ ಮತ್ತು ಆಕೆಯ ತಂದೆಯ ವಿರುದ್ಧ ಎಫ್‌ಐಆರ್‌ ದಾಖಲಿಸಲು ಮ್ಯಾಜಿಸ್ಟ್ರೇಟ್‌ರನ್ನು ಸಂಪರ್ಕಿಸಿದ್ದರು.

WhatsApp
Facebook
Telegram
error: Content is protected !!
Scroll to Top