ಬೀನಾ ವೈದ್ಯ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಬೀಳ್ಕೋಡುಗೆ ಸಮಾರಂಭ.

ಭಟ್ಕಳ: ಬೀನಾ ವೈದ್ಯ ಶಿಕ್ಷಣ ಸಂಸ್ಥೆಯಲ್ಲಿ ಹತ್ತನೇಯ ತರಗತಿಯ ಸ್ಟೇಟ್ ವಿಭಾಗ ICSE ವಿಭಾಗ ಮತ್ತು ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗಾಗಿ ಬೀಳ್ಕೊಡುಗೆಯ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು .

ಕಾರ್ಯಕ್ರಮದ ಅಧ್ಯಕ್ಷತೆಯನ್ನು ‘ ಬೀನಾ ವೈದ್ಯ ‘ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ಮಂಕಾಳ್ ಎಸ್ . ವೈದ್ಯರವರು ವಹಿಸಿ ಮಾತನಾಡುತ್ತಾ ಮಕ್ಕಳ ಮುಂದಿನ ಭವಿಷ್ಯದ ಕುರಿತು ಹಾರೈಸುತ್ತಾ ತಂದೆ – ತಾಯಿಗಳು ಕಷ್ಟಪಟ್ಟು ಶಿಕ್ಷಣ ನೀಡುವ ಉದ್ದೇಶವೆನೆಂದರೇ ಮುಂದಿನ ದಿನಗಳಲ್ಲಿ ಉತ್ತಮ ಪ್ರಜೆಯಾಗಿ ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡಬೇಕೆಂಬ ಆಕಾಂಕ್ಷಿಯಿಂದ ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವವನ್ನು ತಾವೇ ರೂಪಿಸಿಕೊಳ್ಳಬೇಕೆಂಬ ಹಿತನುಡಿಗಳನ್ನು ಆಡಿದರು ನಿಮ್ಮ ಮುಂದಿನ ಶಿಕ್ಷಣಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ನಾನು ಮಾಡಿಕೊಟ್ಟಿದ್ದೇವೆ , ಮುಂದೆಯೂ ಮಾಡಿಕೊಡುತ್ತೇನೆ ಎಂಬ ಭರವಸೆಯನ್ನು ಮಾತನಾಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀಯುತ ನಾಗೇಶ್ ಭಟ್ಟ ರವರು ಮಾತನಾಡುತ್ತಾ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಹೋದಾಗ ಹೇಗೆಲ್ಲ ತಯಾರಿ ನಡೆಸಬೇಕು ಗುರಿ ಸಾಧಿಸುವ ಛಲ ಹೇಗಿರಬೇಕು ಎನ್ನುವುದನ್ನು ಇನ್‌ಫೋಸಿಸ್ ‘ ಸ್ಥಾಪಕರಾದ ನಾರಾಯಣ್ ಮೂರ್ತಿಯವರ ಉದಾಹರಣೆಯೊಂದಿಗೆ ಮಕ್ಕಳಿಗೆ ಮನವರಿಕೆ ಮಾಡಿದರು .

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ‘ ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಆಡಳಿತ ನಿರ್ದೇಶಕಿಯಾದ ಶ್ರೀಮತಿ ಪುಷ್ಪಲತಾ ವೈದ್ಯರವರು ಮಾತನಾಡುತ್ತಾ ವಿದ್ಯಾರ್ಥಿಗಳು ಕನಸು ಕಾಣುವುದು  ಮುಖ್ಯವಲ್ಲ , ಕನಸನ್ನು ಸಫಲವಾಗಿಸುವುದು ಮುಖ್ಯ ಎನ್ನುವುದನ್ನು ನೀತಿ ಕಥೆಯ ಮೂಲಕ ಮಕ್ಕಳಿಗೆ ಕಿವಿಮಾತು ಹೇಳಿದರು . ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಕೋರಿದರು .

ಈ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ಹಾಗೂ ಸಂಸ್ಥೆಯಲ್ಲಿಯೇ ಶಿಕ್ಷಕಿಯರಾಗಿ ಸೇವೆ ಸಲ್ಲಿಸುತ್ತಿರುವ ಉಮೈಮ ಮನ್ನಾ ಹಾಗೂ ಐರಾ ಇಷ್ಟಾ ರವರು ಮಾತನಾಡಿದರು . ಸಂಸ್ಥೆಯ ಪ್ರಿಂಶುಪಾಲರಾದ ವಿಠಲ್ ನಾಯ್ಕ ರವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು . ವಿದ್ಯಾರ್ಥಿಗಳು ತಮ್ಮ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು . ವಿದ್ಯಾರ್ಥಿಗಳಿಗಾಗಿ ಕೆಲವು ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು  ಪ್ರಾಂಶುಪಾಲರಾದ ವಿಠಲ್ ನಾಯ್ಕ ರವರು ಎಲ್ಲರನ್ನು ಸ್ವಾಗತಿಸಿದರು . ವಿದ್ಯಾರ್ಥಿಗಳು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು .

WhatsApp
Facebook
Telegram
error: Content is protected !!
Scroll to Top