ಪುರಾಣ ಪುಣ್ಯಪ್ರಸಿದ್ದ ಸ್ಥಳವಾದ ಹೊಗೆವಡ್ಡಿ ಶ್ರೀವಿರಾಂಜನೆಯ ದೇವಸ್ಥಾನದ ಜಾತ್ರಾ ಮಹೋತ್ಸ

ಜಾತ್ರಾ ಮಹೋತ್ಸವದ ಪ್ರಯುಕ್ತ ದಿವಂಗತ ದಿನೇಶ ನಾಯ್ಕ ಯಾನೆ ದಿನು ಹಂಟರ್‌ ಸ್ಮರಣಾರ್ಥ ಉಧ್ಯಮಿ ಈಶ್ವರ ನ್ಯಾಯ್ಕ ಅವರಿಂದ ಸಾರ್ವಜನಿಕ ಅನ್ನಸಂತರ್ಪಣೆ

ಭಟ್ಕಳ: ಪುರಾಣ ಪುಣ್ಯ ಸ್ಥಳವಾದ ವಿಜಯನಗರ ಸಾಮ್ರಾಜ್ಯದ ಪಾಳೆಗಾರ ಕೆಳದಿ ಸಂಸ್ಥಾನದ ಮಹಾಮಂತ್ರಿ ಉಗ್ರಾಣಿ ಮನೆ ಕಾಸರಗೋಡು ತಿಮ್ಮಣ್ಣ ನಾಯ್ಕರ ಕೋಟೆ ಶ್ರೀ ವೀರಾಂಜನೆಯ ದೇವಸ್ಥಾನ ಜಾತ್ರಾ ಮಹೋತ್ಸವ ವಿಜ್ರಂಬಣೆಯಿಂದ ನಡೆದಿದ್ದು ಜಾತ್ರಾ ಮಹೋತ್ಸವದ ಪ್ರಯುಕ್ತ ದಿವಂಗತ ದಿನೇಶ ನಾಯ್ಕ ಯಾನೆ ದಿನು ಹಂಟರ್‌ ಸ್ಮರಣಾರ್ಥ ಉಧ್ಯಮಿ ಈಶ್ವರ ನಾಯ್ಕ ಅವರಿಂದ ಮಹಾ ಅನ್ನಸಂತರ್ಪಣೆ ನಡೆಸಲಾಯಿತು

ಜಾತ್ರಾ ಮಹೋತ್ಸವದಲ್ಲಿ ಪಲ್ಲಕ್ಕಿ ಉತ್ಸವ ದೇವರಿಗೆ ಬಲಿ ಪೂಜಾ ಹೀಗೆ ಅನೇಕ ಪೂಜಾ ಕೈಂಕರ್ಯವನ್ನು ಕೈಗೊಳ್ಳಲಾಯಿತು ಜಾತ್ರಾ ಮಹೋತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೋಂಡಿದ್ದರು ಈ ಸಂದರ್ಬದಲ್ಲಿ ದಿನು ಹಂಟರ್‌ ಸ್ಮರಣಾರ್ಥ ಅನ್ನದಾನ ಸೇವೆಯನ್ನು ನಡೆಸಿಕೊಟ್ಟ ಉದ್ಯಮಿಗಳು ಸಮಾಜ ಸೇವಕರು ಆದ ಈಶ್ವರ ನಾಯ್ಕ ಅವರಿಗೆ ಸನ್ಮಾನಿಸಲಾಯಿತು ಸನ್ಮಾನ ಸ್ವಿಕರಿಸಿ ಮಾತನಾಡಿದ ಅವರು ದಿನೇಶ ನಾಯ್ಕ ಅವರ ಸ್ಮರಣಾರ್ಥ ಅನ್ನಧಾನ ಮಹೋತ್ಸವ ನಡೆಸಲು ನನಗೆ ಅವಕಾಶ ದೊರೆತಿರುವುದು ನನ್ನ ಪುಣ್ಯದ ಫಲ ಅವರು ನಮ್ಮನ್ನು ಅಗಲಿ ಹೋಗಿರುವುದು ನಮಗೆ ತುಂಬಲಾರದ ನಷ್ಟ ಎಂದೆ ಹೇಳ ಬಹುದು ದಿನೇಶ ನಾಯ್ಕ ನನಗೆ ಸಹೋದರನಂತೆ ಇದ್ದರು ಅವರ ಗಲಿಕೆಯನ್ನು ನಮಗೆ ಸಹಿಸಲು ಸಾಧ್ಯವಾಗುತ್ತಿಲ್ಲಾ ಅವರ ಆತ್ಮಕ್ಕೆ ಆ ಭಗಂತ ಚಿರ ಶಾಂತಿಯನ್ನು ಕರುಣಿಸಲಿ ಎಂದು ಹೇಳಿದರು

ದೇವಸ್ಥಾನ ಪೂಜಾ ಕೈಂಕರ್ಯದ ನಂತರ ದಿನೇಶ ನಾಯ್ಕ ಯಾನೆ ದಿನು ಹಂಟರ್‌ ಅವರ ಭಾವ ಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಮೌನಾಚರಣೆಯನ್ನು ಆಚರಿಸಲಾಯಿತು ಈ ಸಂದರ್ಬದಲ್ಲಿ ಸಿಗಂದೂರಿನ ರವಿ ನಾಯ್ಕ ಮಾತನಾಡಿ ಇಂದು ದಿನೇಶ ನಾಯ್ಕ ಅವರ ಅಗಲಿಕೆ ತುಂಬ ನೋವನ್ನು ತಂದಿದೆ ಅವರ ಸ್ಮರಣಾರ್ಥ ಈಶ್ವರ ನಾಯ್ಕ ಅನ್ನ ಸಂತರ್ಪಣೆಯನ್ನು ನಡೆಸಿಕೊಟ್ಟಿದ್ದಾರೆ ನಾವು ಇವರ ಈ ಕಾರ್ಯವನ್ನು ಶ್ಲಾಘಿಸುತ್ತೆವೆ ಎಂದು ಹೇಳಿದರು

ಕಾರ್ಯಕ್ರಮದಲ್ಲಿ ಸರ್ಪನಕಟ್ಟೆ ವಾಸುಕಿ ಸಂಸ್ಥಾನದ ಹನುಮಂತ ನಾಯ್ಕ ಅವರನ್ನು ಈಶ್ವರ ನಾಯ್ಕ ಅವರು ಸನ್ಮಾನಿಸಿದರು . ದೇವಸ್ಥಾನದ ಜಾತ್ರಾ ಮಹೋತ್ಸವ ಅನ್ನಸಂತರ್ಪಣಾ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೋಂಡು ದೇವರ ಕ್ರಪೆಗೆ ಪಾತ್ರರಾದರು

WhatsApp
Facebook
Telegram
error: Content is protected !!
Scroll to Top