ಪಾಕಿಸ್ತಾನದತ್ತ ಸಿಡಿಯಿತಾ ಭಾರತದ ಕ್ಷಿಪಣಿ..! ವಾಸ್ತವ ಏನು ?

ಇಸ್ಲಾಮಾಬಾದ್ :  ಭಾರತದ ವಿರುದ್ದ ಆರೋಪ ಮಾಡುವುಡು ಪಾಕಿಸ್ತಾನಕ್ಕೆ (Pakistan)ಹೊಸತೇನಲ್ಲ. ಹಿಂದಿನಿಂದಲೂ ಪಾಕ್ ಈ ಕೆಲಸವನ್ನು ಮಾಡುತ್ತಾ ಬಂದಿದೆ. ಈಗಲೂ ಅಂಥದ್ದೇ ಒಂದು ದೊಡ್ಡ ಆರೋಪವನ್ನು ಮಾಡಿದೆ.  ಭಾರತ ಉಡಾಯಿಸಿದ ಕ್ಷಿಪಣಿ (India Missile)ತನ್ನ ಪಂಜಾಬ್ (Punjab)ಪ್ರಾಂತ್ಯದಲ್ಲಿ ಬಿದ್ದಿದೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ. ಭಾರತದಿಂದ ತನ್ನ ವಾಯುಪ್ರದೇಶಕ್ಕೆ ಬರುತ್ತಿದೆ ಎನ್ನಲಾದ ಕ್ಷಿಪಣಿಯನ್ನು ಪಂಜಾಬ್ ಪ್ರಾಂತ್ಯದಲ್ಲಿ ಪತನಗೊಳಿಸಿರುವುದಾಗಿ ಪಾಕಿಸ್ತಾನ ಸೇನೆ ಗುರುವಾರ ಹೇಳಿಕೊಂಡಿದೆ. 

ನಾಗರಿಕ ಪ್ರದೇಶಗಳಲ್ಲಿ ಹಾನಿ : 
ಮಾರ್ಚ್ 9 ರಂದು ಸಂಜೆ 6.43 ಕ್ಕೆ ಅತಿವೇಗದ ವಸ್ತುವೊಂದು ಭಾರತದ ಪ್ರದೇಶದಿಂದ ಹೊರಟು ಪಾಕಿಸ್ತಾನದ (Pakistan) ಪ್ರದೇಶವನ್ನು ಪ್ರವೇಶಿಸಿದೆ ನೆಲಕ್ಕಪ್ಪಳಿಸಿದೆ  ಎಂದು ಪಾಕಿಸ್ತಾನಿ ಸೇನಾ ವಕ್ತಾರ ಮೇಜರ್ ಜನರಲ್ ಬಾಬರ್ ಇಫ್ತಿಕರ್ (Babar Iftikar)ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದರಿಂದ ನಾಗರಿಕ ಪ್ರದೇಶಗಳಿಗೆ ಸ್ವಲ್ಪ ಹಾನಿಯನ್ನುಂಟುಮಾಡಿದೆ  ಎಂದು ಅವರು ಹೇಳಿದ್ದಾರೆ. ಆದರೆ ಘಟನೆಯಲ್ಲಿ  ಯಾರೂ ಸಾವನ್ನಪ್ಪಲಿಲ್ಲ ಎನ್ನುವುದನ್ನು ಅವರು ಸ್ಪಷ್ಟಪಡಿಸಿದ್ದಾರೆ. 

ಭಾರತ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ :
ಈ ವಿಚಾರಕ್ಕೆ ಸಬಂಧಪಟ್ಟಂತೆ ಭಾರತದಿಂದ (India) ಇದುವರೆಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಪಂಜಾಬ್‌ನ ಖಾನೆವಾಲ್ ಜಿಲ್ಲೆಯ ಮಿಯಾನ್ ಚನ್ನು ಪ್ರದೇಶದಲ್ಲಿ ಬುಧವಾರ ರಾತ್ರಿ ಅಪರಿಚಿತ ವಸ್ತು (missile) ಬಿದ್ದಿದೆ ಎಂದು ಮೇಜರ್ ಜನರಲ್ ಇಫ್ತಿಕರ್ ಹೇಳಿದ್ದಾರೆ. ಈ ಬಗ್ಗೆ ಪಾಕ್‌ ವಾಯುಪಡೆ ಶೋಧ ಕಾರ್ಯ ಆರಂಭಿಸಿದೆ ಎಂದೂ ಅದು ತಿಳಿಸಿದೆ.  

ಕ್ಷಿಪಣಿಯ ಉಡಾವಣೆ ಪಾಕಿಸ್ತಾನ ಮತ್ತು ಭಾರತ ಎರಡರ ನಾಗರಿಕರನ್ನು ಅಪಾಯಕ್ಕೆ ಸಿಲುಕಿಸಿದೆ ಎಂದು ಪಾಕಿಸ್ತಾನ (Pakistan)ಹೇಳಿದೆ. ಘಟನೆಗೆ ಏನು ಕಾರಣ  ಏನು ಎನ್ನುವುದನ್ನು ಭಾರತ ಸ್ಪಷ್ಟಪಡಿಸಬೇಕು ಎಂದು ಅದು ಹೇಳಿದೆ.  ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪಾಕಿಸ್ತಾನಿ ಸೇನೆಯ ವಕ್ತಾರ, ಕ್ಷಿಪಣಿಯು 40,000 ಅಡಿ ಎತ್ತರದಲ್ಲಿ ಹಾದು ಹೋಗುತ್ತಿತ್ತು ಎಂದು ಹೇಳಿದ್ದಾರೆ. 

WhatsApp
Facebook
Telegram
error: Content is protected !!
Scroll to Top