ಹೊನ್ನಾವರ: ಪಂಜಾಬ್ ಮತ್ತು ದೆಹಲಿ ನ್ಯಾಯಾಲಯಗಳ ಆವರಣದಲ್ಲಿ ಬಾಂಬ್ ವಿದ್ವಂಸಕ ಕೃತ್ಯ ನಡೆದ ಹಿನ್ನಲೆಯಲ್ಲಿ ಮುಂಜಾಗೃತ ಕ್ರಮವಾಗಿ ಜಿಲ್ಲಾ ಬಾಂಬ್ ಪತ್ತೆ ದಳದ ತಂಡವು ಸರ್ಕಾರದ ಆದೇಶದ ಪ್ರಕಾರ ಹೊನ್ನಾವರದ ನ್ಯಾಯಾಲಯ ಸಂಕೀರ್ಣವನ್ನು ತರಬೇತಿ ಪಡೆದ ಶ್ವಾನ ಬೆಳ್ಳಿಯೊಂದಿಗೆ ಗುರುವಾರ ಭೇಟಿ ನೀಡಿ ಶೋಧನಾ ಕಾರ್ಯ ನಡೆಸಿತು.
ತಂಡದಲ್ಲಿದ್ದ ತರಬೇತಿ ಪಡೆದ ಶ್ವಾನ ಬೆಳ್ಳಿಯೊಂದಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನ್ಯಾಯಾಲಯ ಕಟ್ಟಡದ ವಿವಿಧ ಕೋಣೆಗಳನ್ನು ಪರೀಕ್ಷಿಸಿದರು.
ಬಾಂಬ್ ಪತ್ತೆದಳದ ಸಂಜಯ ಭೋವಿ ನೇತೃತ್ವದ ತಂಡದ ಸಿಬ್ಬಂದಿಗಳು ಪರಿಶೀಲನಾ ಕಾರ್ಯ ನೆರವೇರಿಸಿದರು.