ಭಟ್ಕಳ ತಾಲೂಕಿನಲ್ಲಿ ಅರಣ್ಯವಾಸಿಗಳನ್ನು ಉಳಿಸಿ ಬ್ರಹತ್ ಜಾಥಾ: ಅರಣ್ಯವಾಸಿಗಳಿಗೆ ಆತ್ಮಸ್ತೈರ್ಯ ತುಂಬಿದ ರವೀಂದ್ರ ನಾಯ್ಕ

ಭಟ್ಕಳ: ಅರಣ್ಯ ಅತಿಕ್ರಣದಾರನಿಗೆ ಅನ್ಯಾಯವಾದರೆ ನಾವು ಸಹಿಸಲಾರೆವು ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತದೆ ಅತಿಕ್ರಮಣದಾರರಿಗೆ ಅನ್ಯಾಯವಾದಲ್ಲಿ ನಾವು ಉಗ್ರ ಹೋರಾಟವನ್ನು ನಡೆಸುತ್ತೆವೆ ಎಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರ ವೇದಿಕೆಯ ಜಿಲ್ಲಾ ಅಧ್ಯಕ್ಷರಾದ ರವೀಂದ್ರ ನಾಯ್ಕ ಹೇಳಿದರು

ತಾಲೂಕಿನ‌ ಪ್ರವಾಸಿ ಮಂದಿರದಿಂದ ಸಾವಿರಾರು ಅರಣ್ಯ ಹೊರಾಟಗಾರರು ಬ್ರಹತ್ ಪ್ರತಿಭಟನೆಯೊಂದಿಗೆ ತಾಲೂಕ ಕ್ರೀಡಾಂಗಣ ಪಕ್ಕದಲ್ಲಿರುವ ಬಿಲಾಲ್ ಸಭಾಂಗಣಕ್ಕೆ ತೆರಳಿ ಸಭಾ ಕಾರ್ಯಕ್ರಮವನ್ನು ನಡೆಸಲಾಯಿತು ಕಾರ್ಯಕ್ರಮದಲ್ಲಿ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರ ವೇದಿಕೆಯ ಜಿಲ್ಲಾ ಅಧ್ಯಕ್ಷರಾದ ರವೀಂದ್ರ ನಾಯ್ಕ ರವರು ಮಾತನಾಡಿ ನಾನು ಕಳೆದ 30 ವರ್ಷ ದಿಂದ ಅರಣ್ಯ ಅತಿಕ್ರಮಣದಾರರ ಪರವಾಗಿ ಹೋರಾಟ ಮಾಡುತ್ತಾ ಬಂದಿದ್ದೇನೆ. ಆದರೆ ನಾನು ಅರಣ್ಯ ಅತಿಕ್ರಮಣ ಮಾಡಿಕೊಂಡಿಲ್ಲ. ನಮ್ಮ ಕುಟುಂಬದ ಸದಸ್ಯರು ನಮ್ಮ ಅಪ್ಪ, ಅಮ್ಮ, ಅಣ್ಣ,ಅಕ್ಕಿ ತಂಗಿ ಯಾರು ಅರಣ್ಯ ಅತಿಕ್ರಮಣ ಮಾಡಿಕೊಂಡಿಲ್ಲ.

ಜಿಲ್ಲೆಯ ಎಲ್ಲಾ ಅತಿಕ್ರಮಣ ದಾರರು ನನ್ನ ಕುಟುಂಬ ಇದ್ದಂತೆ ಅದಕ್ಕಾಗಿ ನಾನು ಎಲ್ಲಾ ಅರಣ್ಯ ಅತಿಕ್ರಮಣ ದಾರರ ಪರವಾಗಿ ಹೋರಾಟ ಮಾಡಿಕೊಂಡು ಬಂದಿದೆನೆ ಮುಂದಿನ ದಿನಗಳಲ್ಲಿ ಹೋರಾಟ ಮಾಡುತ್ತೇನೆ ಎಂದು ತಿಳಿಸಿರುತ್ತಾರೆ. ಆದರೆ ಸಿರಸಿಯಲ್ಲಿ ಒಬ್ಬ ಅರಣ್ಯ ಅಧಿಕಾರಿ ನಾನು ಹಾಗೂ ನನ್ನ ಕುಟುಂಬದ ಅರಣ್ಯ ಅತಿಕ್ರಮಣ ಜಾಗದ ಕುರಿತು ಮಾಹಿತಿ ಸಂಗ್ರಹಿಸಿಸಲು ಪ್ರಾರಂಭಿಸಿದರು. ಆದರೆ ಅವರಿಗೆ ನನ್ನ ಅತಿಕ್ರಮಣದ ಮಾಹಿತಿ ಸಿಗಲೇ ಇಲ್ಲ. ಏಕೆಂದರೆ ನಾನು ಅರಣ್ಯ ಭೂಮಿಯನ್ನು ಅತಿಕ್ರಮಣ ಮಾಡಿಯೇ ಇಲ್ಲ. ಆದರೆ ನನ್ನ ಜನರ ಸಲುವಾಗಿ ಹೋರಾಟ ಮಾಡುತ್ತಿದ್ದೇನೆ.

ನಿಮ್ಮ ಪರವಾಗಿ ಸುಪ್ರೀಂ ಕೋರ್ಟಿನಲ್ಲಿ ನಾನು ಪಾರ್ಟಿ ಆಗಿ ಸೇರಿದ್ದೇನೆ. ಸರಕಾರ ನಿಮ್ಮ ಕೈಬಿಟ್ಟರೂ ನಾವು ನಿಮ್ಮ ಕೈಬಿಡುವುದಿಲ್ಲ. ಬೆಂಗಳೂರಿನಲ್ಲಿ 30 ವರ್ಷದ ಸ್ಮರಣ ಸಂಚಿಕೆ ಬಿಡುಗಡೆ ಮಾಡುವ ಸಂದರ್ಭದಲ್ಲಿ ಜಾತಾ ಮಾಡುವ ಕುರಿತು ತೀರ್ಮಾನ ತೆಗೆದುಕೊಂಡೆವು. ಈ ನಿರ್ಧಾರದಂತೆ ನಾವು ಕಾರವಾರ ಜಿಲ್ಲೆಯ 562 ಹಳ್ಳಿಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದೆನೆ. 10 ಸಾವಿರ ಕುಟುಂಬವನ್ನು ತೆರವುಗೊಳಿಸಲು ಸುಪ್ರೀಂಕೋರ್ಟ್ ಆದೇಶ ಕೊಟ್ಟಿತು. ಆದ್ದರಿಂದ ನಿಮ್ಮಲ್ಲಿ ಜಾಗ್ರತಿ ಮೂಡಿಸುವ ಸಲುವಾಗಿ ಈ ಜಾತಾ ಕೈಗೊಂಡಿದ್ದೇವೆ. ಈ ಜಾಥಾಕ್ಕೆ ನಿಮ್ಮೆಲ್ಲರ ಅಭೂತಪೂರ್ವ ಸ್ವಾಗತ ಬೆಂಬಲ ದೂರತ್ತಿದೆ. ಈ ಬೆಂಬಲದಿಂದ ನನಗೆ ಹೋರಾಟ ಮಾಡಲು ಇನ್ನಷ್ಟು ಶಕ್ತಿ ಬಂದಿದೆ.

ಟಿಬೇಟ್ ನಿಂದ ಬಂದವರಿಗೆ 6 ಸಾವಿರ ಎಕ್ಕರೆ ಭೂಮಿ ಕೊಡುತ್ತಾರೆ. ಆದರೆ ಅರಣ್ಯ ಅತಿಕ್ರಮಣದಾರರನ್ನು ಹೊರ ಹಾಕಲು ಸರಕಾರ ಅಫಿಡಾವಿಟ್ ಸಲ್ಲಿಸುತ್ತೇವೆ ಅಂತಾ ಹೇಳುತ್ತದೆ. ಆದ್ದರಿಂದ ನಿಮ್ಮನ್ನು ಜಾಗ್ರತಗೊಳಿಸುವುದೇ ಈ ಜಾತಾದ ಉದ್ದೇಶ. ಉತ್ತರ ಕನ್ನಡ ಜಿಲ್ಲೆಯಲ್ಲಿ 85 ಸಾವಿರ ಅರಣ್ಯ ಅತಿಕ್ರಮಣದಾರರು ತಮ್ಮ ಹಕ್ಕಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ 74 ಸಾವಿರ ಅರ್ಜಿ ತಿರಸ್ಕರಿಸಿದ್ದಾರೆ. ಹೀಗಾದರೆ ಅವರೆಲ್ಲ ನಿರಾಶ್ರಿತರಾಗುತ್ತಾರೆ. ಅರಣ್ಯ ಅತಿಕ್ರಮಣದಲ್ಲಿರುವ ಎಲ್ಲಾ ಮನೆಗಳಿಗೆ ಸರಕಾರದಿಂದ ಎಲ್ಲಾ ಸೌಲಭ್ಯಗಳನ್ನು ಕೊಟ್ಟು ಒಕ್ಕಲೆಬ್ಬಿಸುವುದು ಯಾವ ನ್ಯಾಯ? ನಿಮಗೆ ಆಧಾರ್ ಕಾರ್ಡ್ ಕೊಟ್ಟಿದ್ದಾರೆ, ರೇಷನ್ ಕಾರ್ಡ್ ಕೊಟ್ಟಿದ್ದಾರೆ,ಮನೆ ನಂಬರ್ ಕೂಟ್ಟಿದ್ದಾರೆ ಆದರೆ ಇಷ್ಟೇಲ್ಲಾ ಕೊಟ್ಟು ನಿಮ್ಮನ್ನು ಒಕ್ಕಲೆಬ್ಬಿಸುವುದು ಯಾವ ನ್ಯಾಯ? ನಾನು ನನ್ನ ಪ್ರಾಣ ಇರುವವರೆಗೆ ಹೋರಾಟ ಮಾಡುತ್ತೇನೆ ಎಂದು ತಿಳಿಸಿರುತ್ತಾರೆ.

ನಾನು ಈ ಹೋರಾಟಕ್ಕೆ ನಿಮ್ಮ ಹತ್ತಿರ ಯಾವಾಗಲೂ ಹಣ ಕೇಳಲಿಲ್ಲ. ಉತ್ತರ ಕನ್ನಡದಲ್ಲಿ 2800 ಕುಟುಂಬಗಳಿಗೆ ಮಾತ್ರ ಹಕ್ಕು ಪತ್ರ ನೀಡಲಾಗಿದೆ. ಆದ್ದರಿಂದ ಉಳಿದವರ ಹಕ್ಕಿಗಾಗಿ ಈ ಹೋರಾಟ ಮಾಡುತ್ತೇನೆ. ಅರಣ್ಯ ಅತಿಕ್ರಮಣ ದಾರರ ವಿಷಯದಲ್ಲಿ ಜನಪ್ರತಿನಿಧಿಗಳು ನಿರ್ಲಕ್ಷ್ಯ ಮಾಡಿ ಸುಪ್ರೀಂಕೋರ್ಟ್ ನಲ್ಲಿ ವ್ಯತಿರಿಕ್ತ ಆದೇಶ ಬಂದರೆ ಅದಕ್ಕೆ ಜನಪ್ರತಿನಿಧಿಗಳೇ ಕಾರಣ. ಅದಕ್ಕಾಗಿ ನಾವು ಮುಂದಿನ ದಿನಗಳಲ್ಲಿ ಅರಣ್ಯ ಅತಿಕ್ರಮಣದಾರರು ಸೇರಿ ಜನಪ್ರತಿನಿಧಿಗಳ ಮನೆಯ ಮುಂದೆ ಧರಣಿ ಸತ್ಯಾಗ್ರಹ ಮಾಡಬೇಕಾಗುತ್ತದೆ. ನಮ್ಮ ಜನಪ್ರತಿನಿಧಿಗಳು ಮುಂದಿನ 60 ದಿನಗಳಲ್ಲಿ ನಮ್ಮ ಪರವಾಗಿ ಸುಪ್ರೀಂಕೋರ್ಟ್ ನಲ್ಲಿ ಅಫಿಡಾವಿಟ್ ಸಲ್ಲಿಸಬೇಕು. ಇಲ್ಲದಿದ್ದರೆ ಶಾಸಕರು, ಸಂಸದರ ಮನೆಯ ಮುಂದೆ ಧರಣಿ ಕುಳಿತುಕೊಳ್ಳುತ್ತೇವೆ. ಮೂರು ತಲೆಮಾರಿನ ದಾಖಲೆ ಬೇಕು ಎನ್ನುವ ಕಾಯಿದೆ ಎಲ್ಲೂ ಇಲ್ಲಾ. 2012 ರಲ್ಲಿ ಅದರ ತಿದ್ದುಪಡಿ ಆಗಿದೆ. ಆದರೆ ಈ ಮಾಹಿತಿ ನಮ್ಮ ಅಧಿಕಾರಿಗಳಿಗೆ ಇಲ್ಲದಿರುವುದು ದುರಾದೃಷ್ಟ. ಹೋರಾಟಕ್ಕೆ ಯಾವಾಗಲೂ ಸೋಲೇ ಇಲ್ಲ. ದೆಹಲಿಯಲ್ಲಿ ರೈತರ ಹೋರಾಟಕ್ಕೆ ಸರಕಾರ ಮಣಿಯಲಿಲ್ಲವೇ? ಆದ್ದರಿಂದ ನಮ್ಮ ಹೋರಾಟಕ್ಕೆ ಸರಕಾರ ಮಣಿಯುವವರೆಗೆ ನಾವು ಹೋರಾಟ ಮಾಡಬೇಕು. ನಿಮ್ಮ ಜೋತೆ ನಾನು ಸದಾ ಇರುತ್ತೇನೆ ಅಂತಾ ಹೇಳಿದರು.

ಈ‌ ಸಂದರ್ಬದಲ್ಲಿ ತಂಜಿಮ್ ಅಧ್ಯಕ್ಷ ಮಾತನಾಡಿ ಈ ಪ್ರತಿಭಟನೆ ಮಾನವ ಹಕ್ಕಿಗಾಗಿ ಎರಡು ಹೊತ್ತಿನ ಊಟ ಪಡೆಯುವ ಸಲುವಾಗಿ ನಡೆಸುವ ಹೊರಾಟವಾಗಿದೆ ಇಲ್ಲಿ ದಬ್ಬಾಳಿಕೆ ನಡೆಯಲು ಸಾಧ್ಯವಿಲ್ಲಾ ಮಾನವಿಯತೆ ಮಾನವಿಯತೆಯೆ ಕಾನೂ‌ನಿಗಿಂತ ದೊಡ್ಡದಾಗಿದೆ ಈ ಪ್ರತಿಭಟನೆ ಹಮ್ಮಿಕೊಂಡ ನಾಯಕರುಗಳಿಗೆ ಹೃದಯ ಪೂರ್ವಕ ಧನ್ಯವಾದಗಳು ಈ ಹೊರಾಟಕ್ಕೆ ತಂಜಿಮ್ ಸಂಪೂರ್ಣ ಬೆಂಬಲಕೊಡುತ್ತದೆ ನಾವು ಸಂವಿದಾನ ಹಾಗು ಕಾನೂನಿನ ಚೌಕಟ್ಟಿನಲ್ಲಿ ನ್ಯಾಯ ಒದಗಿಸಿಕೊಡುತ್ತೆವೆ ನಾವು ಸ್ವಾತಂತ್ರ್ಯ ಭಾರತದಲ್ಲಿ ಇದ್ದೆವೆ ನಮ್ಮ ಒಗ್ಗಟನ್ನು ಯಾರು ಒಡೆಯಲು ಸಾಧ್ಯವಿಲ್ಲಾ ಇಲ್ಲಿ ಯಾವುದೆ ಧರ್ಮ ಜಾತಿ ಜನಾಂಗದ ಬೇದವಿಲ್ಲಾ ಈಗಿಗ ಬಡವರ ಕೂಗನ್ನು ಯಾರು ಕೇಳುವವರೆ ಇಲ್ಲವಾಗಿದೆ ಬಡವ ಪರವಾಗಿ ನಿಂತ ರವಿಂದ್ರ ನಾಯ್ಕ ಅವರ ತಂಡಕ್ಕೆ ನಾವು ಅಭಿನಂದನೆಯನ್ನು ಸಲ್ಲಿಸುತ್ತಿದ್ದೆನೆ ಮುಂದಿನ ದಿನಗಳಲ್ಲಿ ಅವರ ಹೊರಾಟಕ್ಕೆ ನಾವು ಜೊತೆಯಲ್ಲಿರುತ್ತೆವೆ‌. ಎಲ್ಲಿಯವರೆ ನಮಗೆ ನ್ಯಾಯ ಸಿಗುವುದಿಲ್ಲವೊ ಅಲ್ಲಿಯವರೆಗೆ ನಮ್ಮ ಹೋರಾಟ ಚಾಲ್ತಿಯಲ್ಲಿರುತ್ತದೆ ಎಂದು ಹೇಳಿದರು

ಕಾರ್ಯಕ್ರಮದಲ್ಲಿ ಪ್ರಾರಂಭದಲ್ಲಿ ತಾಲೂಕ ವಲಯ ಅರಣ್ಯ ಅಧಿಕಾರಿ ಹಾಜರಿಲ್ಲಾ ಎಂಬ ಕಾರಣಕ್ಕೆ ಹೊರಾಟಗಾರ ರವಿಂದ್ರ ನಾಯ್ಕ ಒಳಗೊಂಡಂತೆ ಸಾವಿರಾರು ಅರಣ್ಯ ಅತಿಕ್ರಮಣದಾರರು ಸ್ಥಳಕ್ಕೆ ಅಧಿಕಾರಿ ಬರಲೇ ಬೇಕು ಎಂದು ಪಟ್ಟು ಹಿಡಿದರು ಈ ಸಂದರ್ಬದಲ್ಲಿ ಪೊಲಿಸರು ಹಾಗು ಅತಿಕ್ರಮಣದಾರರ ಮದ್ಯ ಮಾತಿನ ಚಕಮಕಿ ನಡೆಯಿತು

ಅತಿಕ್ರಮಣದಾರರ ಪಟ್ಟಿಗೆ ಮಣಿದು ಸ್ವತಃ ಎ ಸಿ ಎಪ್ ಕಾರ್ಯಕ್ರಮಕ್ಕೆ ಹಾಜರಾಗಿ ಅತಿಕ್ರಮಣದಾರರಿಗೆ ಯಾರಿಗೂ ಅನ್ಯಾಯವಾಗಲಾರದು ಎಂದು ಹೇಳಿದರು ಅವರು ಈ ಸಂದರ್ಬದಲ್ಲಿ ಮಾತನಾಡಿ ರವಿಂದ್ರ ನಾಯ್ಕ ಅವರ ಹೊರಾಟದಿಂದ ಅತಿಕ್ರಮಣದಾರರಿಗೆ ತುಂಬ ಪ್ರಯೋಜನವಾಗಿದೆ ನಮ್ಮ ತಾಲೂಕಿನಲ್ಲಿ ನಿಜವಾದ ಅರಣ್ಯ ಅತಿಕ್ರಮಣದಾರರೆ ಹೆಚ್ಚಿದ್ದಾರೆ ನಮಗೆ ಅವರ ಬಗ್ಗೆ ಮರುಕವಿದೆ ನಾವು ಅನುಷ್ಟಾನ‌ ಅಧಿಕಾರಿಗಳು ಮೇಲಿನಿಂದ ಯಾವ ರೀತಿಯಲ್ಲಿ ಆದೇಶವನ್ನು ನೀಡಿರುತ್ತಾರೋ ಹಾಗೆ ನಾವು ಅವರ ಆದೇಶವನ್ನು ಅನುಷ್ಟಾನಗೋಳಿಸುತ್ತೆವೆಯೆ ಹೊರತು ನಮಗೆ ಅತಿಕ್ರಮಣದಾರರ ಮೇಲೆ ಯಾವುದೇ ದ್ವೇಷ ಇಲ್ಲಾ ನಾವು ಮುಂದಿನ ದಿನಗಳಲ್ಲಿ ಎಲ್ಲರನ್ನು ಸೇರಿಸಿ ಸಭೆ ನಡೆಸಿ ಇರುವ ಎಲ್ಲಾ ಸಮಸ್ಯೆಯನ್ನು ಮೇಲಧಿಕಾರಿಗಳಿಗೆ ತಲುಪಿಸುತ್ತೆವೆ ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೆವೆ ಎಂದು ಹೇಳಿದರು

ಈ ಸಂದರ್ಬದಲ್ಲಿ ಇನಾಯತ ಉಲ್ಲಾ ಶಾಬಾಂದ್ರಿ ,ಜಿಲ್ಲಾ ಸಂಚಾಲಕ ದೇವರಾಜ  ಗೊಂಡ ,  ಪಾಂಡುರಂಗ ನಾಯ್ಕ ಬೆಳಕೆ , , ರಿಜ್ವಾನ್ , ಚಂದ್ರ ನಾಯ್ಕ , , ಮಹಮ್ಮದ್ ನತಾರ್‌ ಪಿ ಎಪ್‌ ಐ ಸಂಘಟನೆಯ ತೌಪಿಕ್‌ ಬ್ಯಾರಿ ಮುಂತಾದವರು ಉಪಸ್ಥಿತರಿದ್ದರು.

WhatsApp
Facebook
Telegram
error: Content is protected !!
Scroll to Top