ಅಕ್ರಮವಾಗಿ ಬಿಪಿಎಲ್ ಕಾರ್ಡ್‌ ಪಡೆದ ಸರ್ಕಾರಿ ನೌಕರರು..!

ಚಿಕ್ಕಮಗಳೂರು: ಸರ್ಕಾರ ಬಡವರಿಗಾಗಿಯೇ ಬಿಪಿಎಲ್ ಕಾರ್ಡ್ ನೀಡಿದೆ. ಉಚಿತ ಅಕ್ಕಿ, ಆರೋಗ್ಯ ಭಾಗ್ಯವನ್ನೂ ನೀಡುತ್ತಿದೆ. ಇದು ಬಡವರಿಗೆ ಅಂತಾನೇ ಮಾಡಿರೋ ಬಿಪಿಎಲ್ ಕಾರ್ಡ್‌ನ್ನು ಕಾಫಿ ನಾಡಲ್ಲಿ ಅರ್ಥಿಕವಾಗಿ ಬಲಿಷ್ಟರಿರೋರು ಬಿಪಿಎಲ್ ಕಾರ್ಡ್‌ ಮಾಡಿಸಿಕೊಂಡು ಸರ್ಕಾರದ ಉಚಿತ ಸೌಲಭ್ಯ ಪಡಿಯುತ್ತಿದ್ದಾರೆ. ಅವ್ರಿಗೆಲ್ಲ ಆಹಾರ ಇಲಾಖೆ ಬಿಗ್ ಶಾಕ್ ನೀಡಿದೆ. ಬರೋಬ್ಬರಿ 5800 ಕಾರ್ಡ್ ಪತ್ತೆ ಹಚ್ಚಿ ಬ್ಲಾಕ್ ಮಾಡೋ ಕೆಲ್ಸಕ್ಕೆ ಮುಂದಾಗಿದೆ. ಅದ್ರಲ್ಲಿ 486 ಕಾರ್ಡ್‌ಗಳಿರೋದು ಸರ್ಕಾರಿ ಸಂಬಳ ತಗೊಳೋ ನೌಕರರದ್ದು. ಒಟ್ಟು 38 ಲಕ್ಷದವರೆಗೆ ದಂಡ ವಸೂಲಿ ಮಾಡಲಾಗಿದೆ.

ಇನ್ನೂ 486 ಸರ್ಕಾರಿ ನೌಕರರ ಬಿಪಿಎಲ್ ಕಾರ್ಡ್ ಬ್ಲಾಕ್ ಮಾಡಲಾಗಿದೆ. ಕೆಇಬಿ, ಪೊಲೀಸ್,ಶಿಕ್ಷಕರು, ಹಾಸ್ಟೆಲ್ ವಾರ್ಡನ್ ಕೆಲ್ಸ ಮಾಡೋರ ಕಾರ್ಡ್‌ಗಳು.ಅವರ ಕಾರ್ಡ್ ಬ್ಲಾಕ್ ಒಂದು ಕಡೆಯಾದ್ರೆ ಅವ್ರು ಸರ್ಕಾರಿ ನೌಕರಿಗೆ ಸೇರಿದ ಮೇಲೆ ಬಿಪಿಎಲ್ ಕಾರ್ಡ್‌ನಲ್ಲಿ ಪಡೆದಿರೋ ಪಡಿತರದ ಲೆಕ್ಕ ಹಾಕಿ ಬರೊಬ್ಬರಿ 25 ಲಕ್ಷ ದಂಡ ವಸೂಲಿ ಮಾಡಲಾಗಿದೆ. ಇನ್ನೂ ಇರೋ ಬಿಪಿಎಲ್ ಕಾರ್ಡ್‌ನಲ್ಲಿ ಸರ್ಕಾರಿ ನೌಕರರು ಇದ್ದಾರಾ ಅನ್ನೋದನ್ನು ಪತ್ತೆ ಹಚ್ಚಲಾಗ್ತಾ ಇದೆ. ಏನಾದ್ರು ಸಿಕ್ಕಿದ್ರೆ ದಂಡದ ಜೊತೆ ಕ್ರಿಮಿನಲ್ ಕೇಸ್ ಮಾಡೋ ಎಚ್ಚರಿಕೆಯನ್ನು ನೀಡಲಾಗಿದೆ.

ಒಟ್ಟಾರೆ ಬಡವರಿಗೆ ಸಿಗೋ ಸವಲತ್ತನ್ನು ದುಡ್ಡಿದ್ರು ಪಡೆಯುತ್ತಿದ್ದವರಿಗೆ ಆಹಾರ ಇಲಾಖೆ ಬಿಗ್ ಶಾಕ್ ನೀಡಿದ್ರೆ ಅದ್ರಲ್ಲಿ ಸರ್ಕಾರಿ ನೌಕರರು ಇರೋದಂತೂ ಶಾಕಿಂಗ್. ಸರ್ಕಾರ ಸಂಬಳ ಕೊಟ್ರು ಬಿಪಿಎಲ್ ಕಾರ್ಡ್ ಪಡೆದಿರೋದಂತೂ ನಿಜಕ್ಕೂ ದುರಂತವೇ ಸರಿ.

WhatsApp
Facebook
Telegram
error: Content is protected !!
Scroll to Top