ಸಮುದ್ರದಾಳದಲ್ಲಿ 12,000 ವರ್ಷಗಳಷ್ಟು ಹಳೆಯದಾದ ನಗರ ಪತ್ತೆ: ಹೇಗಿದೆ ‘ಆ’ ಊರು?

ಈ ಹಿಂದೆ ಎಷ್ಟೋ ನಾಗರೀಕತೆಗಳು (Civilization) ಮರೆಯಾಗಿವೆ. ಈ ಸಂಬಂಧ ನಾಗರೀಕತೆಗಳು ಕುರುಹುಗಳು ಸಹ ನಮ್ಮ ಮುಂದಿವೆ. ಅಂದು ಜನರು (Citizens) ಹೇಗಿದ್ರು? ಅವರ ಜೀವನಶೈಲಿ (Lifestyle) ಇತ್ಯಾದಿ ವಿಷಯಗಳು ಇಲ್ಲಿಯ ವಸ್ತುಗಳು ಹೇಳುತ್ತವೆ. ಇನ್ನು ಎಷ್ಟೋ ನಗರಗಳು (City) ಪ್ರವಾಹಕ್ಕೆ (Flood) ಸಿಲುಕಿ ನಾಶಗೊಂಡಿವೆ. ಇಂದಿಗೂ ಈ ಸಂಬಂಧ ಅಧ್ಯಯನಗಳು (Research) ನಡೆಯುತ್ತಲೇ ಇವೆ. ಶೋಧ ಕಾರ್ಯದಲ್ಲಿ ಸಂಶೋಧಕರು ಕಂಡು ಕೊಂಡು ಸತ್ಯಗಳು ಎಲ್ಲರನ್ನು ಅಚ್ಚರಿಗೊಳಿಸುತ್ತವೆ. ಇದೀಗ ಅಮೆರಿಕದ ವಾಸ್ತುಶಿಲ್ಪಿ (American architect) ಒಬ್ಬರು ಸಮುದ್ರ(Sea)ದಾಳದಲ್ಲಿ 12,000 ವರ್ಷಗಳಷ್ಟು ಹಳೆಯ ನಗರವನ್ನು (Old City) ಪತ್ತೆ ಮಾಡಿರೋದಾಗಿ ಹೇಳಿಕೊಂಡಿದ್ದಾರೆ.

ಅಮೆರಿಕನ್ ವಾಸ್ತು ಶಿಲ್ಪಿ ಕ್ರಾಕ್ ಪಾಟ್ ಜಾರ್ಜ್ ಗೆಲೆ ಎಂಬವರು ತಾವು 12,000 ವರ್ಷಗಳ ನಗರವನ್ನು ನೋಡಿರೋದಾಗಿ ಹೇಳಿದ್ದಾರೆ. ಸದ್ಯ ಇವರ ಹೇಳಿಕೆಯ ಕುರಿತು ಚರ್ಚೆಗಳು ನಡೆಯುತ್ತಿವೆ. ಗಲ್ಫ್ ಆಫ್ ಮೆಕ್ಸಿಕೋದಲ್ಲಿರುವ ಚಾಂಡ್ಲೂರ್ ದ್ವೀಪಗಳಲ್ಲಿ ಪುರಾತನ ನೀರೊಳಗೆ ನಗರದ ಅವಶೇಷಗಳಿವೆ ಎಂದು ಜಾರ್ಜ್ ಗೆಲೆ ಹೇಳುತ್ತಾರೆ.

ಹಳೆಯ ನಗರಕ್ಕೆ 44 ಬಾರಿ ಭೇಟಿ

ಸಮುದ್ರದಾಳದಲ್ಲಿ ಪ್ರಾಚೀನ ನಗರಗಳಿಗೆ ನಿರ್ಮಾಣಕ್ಕೆ ಬಳಸಲಾದ ಕಲ್ಲುಗಳಿವೆ. ಅಲ್ಲಿ ಕೆಲ ಪಿರಮಿಡ್ ಸಹ ಪತ್ತೆಯಾಗಿವೆ. ಈಗಾಗಲೇ ಪ್ರಾಚೀನ ನಗರ ಪತ್ತೆಯಾದ ಸ್ಥಳಕ್ಕೆ 44 ಬಾರಿ ಭೇಟಿ ನೀಡಿದ್ದೇನೆ ಎಂದು ಜಾರ್ಜ್ ಗೆಲೆ ಹೇಳಿಕೊಂಡಿದ್ದಾರೆ. ಅಂದು ನಿರ್ಮಿಸಲಾದ ಕಟ್ಟಡಗಳು ಅವಶೇಷಗಳಾಗಿ ಬದಲಾಗಿವೆಯಂತೆ.

ಹೇಗಿದೆ 12,000 ವರ್ಷಗಳ ಹಳೆಯ ನಗರ?

12,000 ವರ್ಷಗಳಷ್ಟು ಹಳೆಯದಾದ ನಗರವನ್ನು ಕಂಡುಹಿಡಿದಿರುವ ಜಾರ್ಜ್ ಗೆಲೆ ಅವರ ಹೇಳಿಕೆಯನ್ನು ಹೆಚ್ಚಿನ ತಜ್ಞರು ಒಪ್ಪಿಕೊಂಡಿಲ್ಲ. ನೀರಿನಲ್ಲಿ ಕಂಡು ಬಂದಿರುವ ಗ್ರಾನೈಟ್ ನಗರದ ಮಧ್ಯ ಭಾಗದಲ್ಲಿ ಪಿರಮಿಡ್ ಕೂಡ ಇದೆ ಎಂದು ಜಾರ್ಜ್ ಗೆಲೆ WWL-TV ಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ. ನೂರಾರು ಕಟ್ಟಡಗಳು ಮರಳು ಮತ್ತು ಹೂಳಿನಿಂದ ಆವೃತವಾಗಿವೆ. ಅವುಗಳು ಗಿಜಾದ ಗ್ರೇಟ್ ಪಿರಮಿಡ್‌ ಗೆ ಸಂಬಂಧಿಸಿವೆ.

ಯಾರು ಈ ಕ್ರಾಕ್ ಪಾಟ್ ಜಾರ್ಜ್ ಗೆಲೆ?

‘ಡೈಲಿ ಸ್ಟಾರ್’ ಪ್ರಕಾರ, ಗೆಲೆ ಅವರು ಸುಮಾರು 50 ವರ್ಷಗಳಿಂದ ‘ಪ್ರಮುಖ ಕಟ್ಟಡಗಳ ಅವಶೇಷಗಳು’ ಮತ್ತು ‘ಮಹಾ ಪಿರಮಿಡ್‌ ವಿಷಯಗಳ ಕುರಿತು ಅಧ್ಯಯನ ಮಾಡುತ್ತಿದ್ದಾರೆ. ಇತ್ತೀಚೆಗೆ ಸಮುದ್ರಕ್ಕೆ ಹೋದಾಗ 12,000 ವರ್ಷಗಳಷ್ಟು ಹಳೆಯದಾದ ಗ್ರಾನೈಟ್ ಸಿಟಿ ಸಿಕ್ಕಿದೆ ಎಂದು ಹೇಳಿದ್ದಾರೆ.

ಮೀನುಗಾರರ ಬಲೆಯಲ್ಲಿ ಸಿಗುತ್ತಿರುವ ಬಂಡೆಗಳು

ಜಾರ್ಜ್ ಗೆಲೆ ಅವರು ನೋಡಿದ ನಗರದ ಬಗ್ಗೆ ಈ ಹಿಂದೆಯೂ ಹಲವು ಚರ್ಚೆಗಳು ನಡೆದಿವೆ. ಇಲ್ಲಿನ ಸ್ಥಳೀಯ ಮೀನುಗಾರರು ತಮ್ಮ ಬಲೆಯಲ್ಲಿ ವಿಚಿತ್ರ ಬಂಡೆಗಳು ಸಿಕ್ಕಿ ಬೀಳುತ್ತಿರುವ ಬಗ್ಗೆ ಹಲವು ಬಾರಿ ಮಾಹಿತಿ ನೀಡುತ್ತಲೇ ಇರುತ್ತಾರೆ.

ನೀರಿನಲ್ಲಿ ಇಷ್ಟು ದಪ್ಪ ಮತ್ತು ಗಟ್ಟಿಯಾದ ಗ್ರಾನೈಟ್ ರಚನೆಯನ್ನು ಯಾರು ನಿರ್ಮಿಸಬಹುದು ಎಂಬ ಪ್ರಶ್ನೆಗಳು ಉದ್ಭವಿಸಿದವು. ಈ ಪಿರಮಿಡ್ ರಚನೆಯ ಮೂಲ, ವಯಸ್ಸು ಮತ್ತು ಉದ್ದೇಶದ ಬಗ್ಗೆ ಗೆಲೆ ಆಸಕ್ತಿ ಹೊಂದಿದ್ದು, ತಮ್ಮ ಶೋಧ ಕಾರ್ಯ ಮುಂದುವರಿಸಿದ್ದಾರೆ. ಆದರೆ ಕೆಲ ತಜ್ಞರು  ಗೆಲೆ ಅವರ ಶೋಧನೆ ಮತ್ತು ಅವರ ವಾದವನ್ನು ಅನುಮಾನದಿಂದಲೇ ನೋಡುತ್ತಿದ್ದಾರೆ.

ಮನುಷ್ಯನ ಮುಖ, ಮೀನಿನ ದೇಹ.. 300 ವರ್ಷಗಳಷ್ಟು ಹಳೆಯ ಪಳೆಯುಳಿಕೆ ಪತ್ತೆ

ಜೀವಿಯ ಮುಖವು ಮನುಷ್ಯನಂತೆ, ಕೆಳಗಿನ ಭಾಗವು ಮೀನಿನಂತಿದೆ. ಜೀವಿಯು ಚೂಪಾದ ಹಲ್ಲುಗಳು ಮತ್ತು ಎರಡು ಕೈಗಳನ್ನು ಹೊಂದಿದೆ. ಆದರೆ ಹಣೆಯ ಮೇಲೆ ಸಾಕಷ್ಟು ಕೂದಲು ಕೂಡ ಇದೆ. 1736 ಮತ್ತು 1741 ರ ನಡುವೆ ಇದು ಜಪಾನಿನ ಕರಾವಳಿಯಲ್ಲಿ ಪೆಸಿಫಿಕ್ ಮಹಾಸಾಗರದಲ್ಲಿ ಜೀವಿ ಸಿಕ್ಕಿ ಬಿದ್ದಿದೆ ಎಂದು ಹೇಳಲಾಗಿದೆ.

ಇದರ ನಂತರ ಅದನ್ನು ಅಸಾಕುಚಿ ನಗರದ ದೇವಾಲಯದಲ್ಲಿ ಇರಿಸಲಾಯಿತು. ಮಾಂಸ ತಿನ್ನುವವನು ಅಮರನಾಗುತ್ತಾನೆಯೇ? ಇದರ ಬಗ್ಗೆ ವಿಚಿತ್ರ ಕಥೆಗಳಿವೆ. ಕೆಲವರು ಇದನ್ನು ಮತ್ಸ್ಯಕನ್ಯೆ ಎಂದು ಹೇಳಿದ್ದಾರೆ. ಈ ಜೀವಿಯ ಮಾಂಸವನ್ನು ತಿನ್ನುವುದರಿಂದ ಮನುಷ್ಯ ಅಮರವಾಗುತ್ತದೆ.

WhatsApp
Facebook
Telegram
error: Content is protected !!
Scroll to Top