ಒಂದು ಪತ್ರಿಕಾ ಪ್ರಕಟಣೆ ಹೊರಿಡಿಸಿ ಇಡೀ ಗ್ರಾಮದ ಜನರ ನಿದ್ದೆಗೆಡಿಸಿದ ಭೂಪ..!

ರಾಜ್ಯ: ದಾವಣಗೆರೆ ನಗರದ ಹೊಸ ಕುಂದವಾಡದ (Hosa Kundavada, Davanagere) ನಿವಾಸಿಗಳು ಕಳೆದ ಹಲವು ವರ್ಷಗಳಿಂದ ಇಲ್ಲಿ ಮನೆ (House) ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ. ಮನೆಗಳಿಗೆ ಪ್ರತಿ ವರ್ಷ ಕಂದಾಯ (Tax) ಪಾವತಿಸುತ್ತಾ ನೆಮ್ಮದಿ ಜೀವನ ನಡೆಸುತ್ತಿದ್ದ ಜನರಿಗೆ ಭೂಪನೋರ್ವ ಪತ್ರಿಕಾ ಪ್ರಕಟನೆ (Press Release) ಹೊರಡಿಸುವ ಮೂಲಕ ಶಾಕ್ ನೀಡಿದ್ದಾನೆ. ಹೊಸ ಕುಂದವಾಡ ದಾವಣಗೆರೆ ಮಹಾನಗರ ಪಾಲಿಕೆಗೆ (Davanagere Municipal Corporation) ಒಳಪಡುತ್ತಿದೆ. ಹಾಗಾಗಿ ಇಲ್ಲಿಯ ನಿವೇಶನ (Sites) ಮತ್ತು ಮನೆಗಳಿಗೆ (House) ಒಳ್ಳೆಯ ಬೆಲೆ (Sale Price)ಇದೆ. ಆದ್ರೆ ಹೊಸ ಕುಂದವಾಡದ ಅಂಜಿನಪ್ಪ ಎಂಬಾತ ಈ ಊರಿನ ಅರ್ಧ ಜಾಗ ನನ್ನದು. ಯಾರು ಮನೆ ಮತ್ತು ನಿವೇಶನ ಮಾರಾಟ (Sale) ಮಾಡುವಂತಿಲ್ಲ ಎಂದು ಪತ್ರಿಕಾ ಪ್ರಕಟನೆ ಹೊರಡಿಸಿದ್ದಾನೆ.

ಅಂಜಿನಪ್ಪನ ವಕೀಲರ ಮೂಲಕ ಹೊರಡಿಸಿದ ಪತ್ರಿಕಾ ಪ್ರಕಟನೆ ಕಂಡು ಹೊಸ ಕುಂದವಾಡದ ಜನರು ಶಾಕ್ ಆಗಿದ್ದಾರೆ. ಪತ್ರಿಕಾ ಪ್ರಕಟನೆ ಬಳಿಕ ಗ್ರಾಮಸ್ಥರೆಲ್ಲರೂ ಒಂದೆಡೆ ಸೇರಿ ಚರ್ಚೆ ನಡೆಸಿದ್ದಾರೆ. ನಂತರ ಅಂಜಿನಪ್ಪನ್ನು ಕರೆಸಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ಇದು ನಮ್ಮ ಅಜ್ಜನ ಆಸ್ತಿ ಎನ್ನುತ್ತಿರುವ ಅಂಜಿನಪ್ಪ

ಪತ್ರಿಕಾ ಪ್ರಕಟನೆಯಲ್ಲಿ ಹೊಸ ಕುಂದವಾಡದ ಸರ್ವೇ ನಂಬರ್ 33 ರಲ್ಲಿನ 7 ಎಕರೆ 16 ಗುಂಟೆ ಜಮೀನು ನನ್ನದು. ಹಾಗಾಗಿ ಮಾರಾಟ ಮಾಡಬಾರದು ಎಂದು ತಿಳಿಸಿದ್ದಾನೆ. ಈಗಾಗಲೇ ಸುಮಾರು ವರ್ಷಗಳಿಂದ ಆ ಸರ್ವೇ ನಂಬರ್ ನಲ್ಲಿ ಮನೆ ಕಟ್ಟಿಕೊಂಡ ಜನರು ಜೀವನ ನಡೆಸುತ್ತಿದ್ದಾರೆ. ಇದು ನಮ್ಮ ಅಜ್ಜನ ಆಸ್ತಿ ಎಂದು ಅಂಜಿನಪ್ಪ ಹೇಳಿಕೊಂಡಿದ್ದಾನೆ.

ಕಂದಾಯ ಪಾವತಿಸುತ್ತಿರುವ ಗ್ರಾಮಸ್ಥರು

ಅಂಜಿನಪ್ಪ ಈಗಾಗಲೇ ಸರ್ಕಾರಿ ಅಂಗನವಾಡಿ  ಜಾಗವನ್ನು ಕಬಳಸಿಕೊಂಡಿದ್ದಾನೆ. ಈಗ ಹಳೆಯ ದಾಖಲೆ ಇಟ್ಟುಕೊಂಡು ಅರ್ಧ ಊರು ನನ್ನದು ಎಂದು ಹೇಳುತ್ತಿದ್ದಾನೆ. ಆದ್ರೆ ನಾವು ಮನೆಗಳಿಗೆ ಮಹಾನಗರ ಪಾಲಿಕೆಯಲ್ಲಿ ಕಂದಾಯ ಕಟ್ಟುತ್ತಿದ್ದೇವೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಅಂಜಿನಪ್ಪ ವಿರುದ್ಧ ಕ್ರಮಕ್ಕೆ ಗ್ರಾಮಸ್ಥರ ಆಗ್ರಹ

ಇನ್ನೂ ಅಂಜಿನಪ್ಪ ಅಂಗನವಾಡಿ ಜಾಗ ವಶಕ್ಕೆ ಪಡೆದುಕೊಂಡ ಪರಿಣಾಮ, ಮಕ್ಕಳಿಗೆ ಬಾಡಿಗೆ ಕಟ್ಟಡದಲ್ಲಿ ಪಾಠ ಮಾಡಲಾಗುತ್ತಿದೆ. ಶೀಘ್ರವೇ ಜಾಗವನ್ನು ಹಿಂದಿರುಗಿಸಿ, ಅಂಗನವಾಡಿ ಕಟ್ಟಡ ನಿರ್ಮಿಸಿ ಗ್ರಾಮದ ಮಕ್ಕಳಿಗೆ ಅನುಕೂಲ ಕಲ್ಪಿಸಬೇಕು. ಇದರ ಜೊತೆ ಅರ್ಧ ಊರು ನನ್ನದು ಅನ್ನುತ್ತಿರೋ ಅಂಜಿನಪ್ಪ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಬಂದು ಸಮಸ್ಯೆ ಬಗಹರಿಸಬೇಕು ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಆದ್ರೆ ಅಂಜಿನಪ್ಪ ಮಾತ್ರ ಹೊಸ ಕುಂದವಾಡದ ಸರ್ವೇ ನಂಬರ್ 33 ರಲ್ಲಿನ 7 ಎಕರೆ 16 ಗುಂಟೆ ಜಾಗ ನನ್ನದು ಎಂದು ಹೇಳಿಕೊಳ್ಳುತ್ತಿದ್ದಾನೆ.

WhatsApp
Facebook
Telegram
error: Content is protected !!
Scroll to Top