ಉಕ್ರೇನ್​​-ರಷ್ಯಾ ಯುದ್ಧಕ್ಕೆ ಗಗನಕ್ಕೇರಿದ ಕಚ್ಚಾ ತೈಲದ ಬೆಲೆ​..! ಈ ವಾರವೇ ಜನರ ಜೇಬು ಸುಡುತ್ತಾ ಪೆಟ್ರೋಲ್​​-ಡೀಸೆಲ್​​​..?

ಬೆಂಗಳೂರು: ಉಕ್ರೇನ್​​-ರಷ್ಯಾ ಯುದ್ಧಕ್ಕೆ ಕಚ್ಚಾ ತೈಲದ ಬೆಲೆ​ ಗಗನಕ್ಕೇರಿದ್ದು, ಶುಕ್ರವಾರದ ನಂತರ ಡೀಸೆಲ್​​, ಪೆಟ್ರೋಲ್​​​​​​ ದರ ಲೀಟರ್​​ ಮೇಲೆ 2-3 ರೂಪಾಯಿ ಒಮ್ಮೆಲೇ ಹೆಚ್ಚಾಗುತ್ತಾ ಎಂಬ ಆತಂಕ ಶುರುವಾಗಿದೆ

ಉಕ್ರೇನ್​​-ರಷ್ಯಾ ಯುದ್ಧಕ್ಕೆ  ಕಚ್ಚಾ ತೈಲದ ದರ ಹೆಚ್ಚಾಗಿದ್ದು, ಒಂದು ಬ್ಯಾರೆಲ್​​​ ಕ್ರೂಡ್​ ಆಯಿಲ್​​ 140 ಡಾಲರ್​​​​ ಆಗಿದೆ.
ಭಾರತದ ರೂಪಾಯಿ ಲೆಕ್ಕದಲ್ಲಿ 10,699 ರೂಪಾಯಿಯಷ್ಟಾಗಿದ್ದು, ಕಳೆದ ಒಂದು ತಿಂಗಳ ಹಿಂದೆ ಕೇವಲ 97 ಡಾಲರ್​​ ಇತ್ತು. ಯುದ್ಧದ ನಂತರ ಬರೋಬ್ಬರಿ 40 ಡಾಲರ್​​ನಷ್ಟು ಏರಿಕೆಯಾಗಿದೆ.  ದರ ಏರಿಕೆ ಲೆಕ್ಕಾಚಾರದ ಪ್ರಕಾರ ಲೀಟರ್​ಗೆ 10-12 ರೂ.ಏರಿಕೆಯಾಗಲಿದ್ದು, ಬೆಂಗಳೂರಲ್ಲಿ ಸದ್ಯ ಡಿಸೇಲ್​ ಪ್ರತಿ ಲೀಟರ್​​ಗೆ 85.1 ರೂ, ಲೀಟರ್ ಪೆಟ್ರೋಲ್ ದರ 100.58 ರೂಪಾಯಿ ಇದೆ.

ಕಳೆದ ನವೆಂಬರ್​ನಿಂದ ಒಂದು ನಯಾ ಪೈಸೆ ಏರಿಕೆಯಾಗಿಲ್ಲ, ಪಂಚ ರಾಜ್ಯಗಳ ಚುನಾವಣೆ​​ ಹಿನ್ನೆಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಯಥಾಸ್ಥಿತಿ ಇತ್ತು. ರೇಟ್​ ಏರಿಕೆ ಮಾಡಲು ತೈಲ ಕಂಪನಿ ತುದಿಗಾಲಲ್ಲಿ ನಿಂತಿದ್ದು, ಕೇಂದ್ರದ ಗ್ರೀನ್​​ ಸಿಗ್ನಲ್​ಗೆ ಕಾಯುತ್ತಿದೆ.  2008 ರಲ್ಲಿ ಪ್ರತಿ ಬ್ಯಾರೆಲ್​​​​​ ಕಚ್ಚಾ ತೈಲ 130.28 ಡಾಲರ್​ ಇತ್ತು, 12 ವರ್ಷಗಳ ನಂತರ ಇದೇ ಮೊದಲ ಬಾರಿ ಕಚ್ಚಾ ತೈಲ ದರ ಇಷ್ಟು ಪ್ರಮಾಣದಲ್ಲಿ ಏರಿಕೆಯಾಗಿದ್ದು, ನಿನ್ನೆ 130 ಡಾಲರ್​ ಡಾಲರ್ ಇದ್ದ ಕಚ್ಚಾ ತೈಲ ಬೆಲೆ ಇಂದು 140ರ ಗಡಿ ಸಮೀಪಿಸಿದೆ.

ಉಕ್ರೇನ್​- ರಷ್ಯಾ ಯುದ್ಧದ ಎಫೆಕ್ಟ್​ನಿಂದ ಕಚ್ಚಾತೈಲ ಬೆಲೆ ಮೇಲ್ಮುಖ ಕಂಡಿದ್ದು, ಕಚ್ಚಾತೈಲ ದರ ಏರಿಕೆಗೆ ಏಷ್ಯಾ, ಜಪಾನ್​, ಚೀನಾ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿದೆ.  ಸ್ಟಾಕ್​ ಮಾರ್ಕೆಟ್​ಗಳಲ್ಲಿ ಶೇಕಡಾ 3ರಷ್ಟು ಆರಂಭಿಕ ಕುಸಿತವಾಗಿದ್ದು,
ಅಮೆರಿಕದಲ್ಲಿ ಶೇಕಡಾ 11ರಷ್ಟು ತೈಲ ದರ ಏರಿಕೆ ಕಂಡಿದೆ.  ಇಂಗ್ಲೆಂಡ್​ನಲ್ಲೂ ಪ್ರತಿ ಲೀಟರ್​ಗೆ 1.50 ಡಾಲರ್​ ಏರಿಕೆಯಾಗಿದ್ದು, ಗ್ಯಾಸ್​, ತೈಲಧಾರಿತ ಉತ್ಪನ್ನಗಳ ಬೆಲೆಯೂ ಏರಿಕೆಯಾಗುವ ಸಾಧ್ಯತೆಗಳಿವೆ.

WhatsApp
Facebook
Telegram
error: Content is protected !!
Scroll to Top