ನೈಟ್ ಶಿಫ್ಟ್ ನಲ್ಲಿ ವರ್ಕ್ ಫ್ರಂ ಹೋಮ್ ಮಾಡ್ತಿದ್ದ ಟೆಕ್ಕಿಗಳೇ ಇವನ ಟಾರ್ಗೆಟ್​..! 

ಬೆಂಗಳೂರು: ಟೆಕ್ಕಿಗಳು ವಾಸವಿದ್ದ ಪಿಜಿಗಳನ್ನೇ ಟಾರ್ಗೆಟ್​ ಮಾಡಿಕೊಂಡು ಕಳ್ಳತನ ಮಾಡಿ ನಂತರ ಬಂದ ಹಣದಲ್ಲಿ ಎಣ್ಣೆ ಹೊಡೆದು ಪಬ್ ನಲ್ಲಿ ಮಜಾ ಮಾಡ್ತಿದ್ದ ಆರೋಪಿಯನ್ನ ಬಂಧಿಸಲಾಗಿದೆ.

ಟೆಕ್ಕಿಗಳು ವಾಸವಿದ್ದ ಪಿಜಿಗಳೇ ಆರೋಪಿಯ ಮೈನ್ ಟಾರ್ಗೆಟ್ ಆಗಿದ್ದು,  ನೈಟ್ ಶಿಫ್ಟ್ ನಲ್ಲಿ ವರ್ಕ್ ಫ್ರಂ ಹೋಮ್ ಮಾಡ್ತಿದ್ದ ಟೆಕ್ಕಿಗಳು ಇರುವ ಪಿಜಿಗಳನ್ನ ಲಿಸ್ಟ್ ಮಾಡುತ್ತಿದ್ದ.  ಬೆಳಗಿನ ಜಾವ 4 ರಿಂದ 5 ಘಂಟೆ ವೇಳೆಯಲ್ಲಿ ಕೈಚಳಕ ತೋರಿಸುತ್ತಿದ್ದ. ಬೆಳಗಿನ ಜಾವ ಡೋರ್ ಹಾಗೂ ಕಿಟಕಿ ಲಾಕ್ ಮಾಡದೇ ಟೆಕ್ಕಿಗಳು ನಿದ್ರೆಗೆ ಜಾರುತ್ತಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಬಂಧಿತ ಆರೋಪಿ,  ಡೋರ್ ಪಕ್ಕದಲ್ಲಿ ಕಿಟಕಿಗಳಿರುವ ಪಿಜಿಗಳಲ್ಲಿ ಕೃತ್ಯ ಎಸಗುತ್ತಿದ್ದ.

ಕಿಟಕಿಯ ಮೂಲಕ ಕೈ ಹಾಕಿ ಅದರ ಪಿಜಿಯ ಡೋರ್ ಒಪನ್ ಮಾಡಿ ಕಳ್ಳತನ ಮಾಡುತ್ತಿದ್ದ.  ಬೈಯ್ಯಪ್ಪನಹಳ್ಳಿ ಠಾಣೆ ಪೊಲೀಸರಿಂದ ಕುಖ್ಯಾತ ಕಳ್ಳ,  ನಾಗಾಲ್ಯಾಂಡ್ ಮೂಲದ ಥಂಗ್ ಸಿಯಾನ್ ಬಂಧಿಸಲಾಗಿದ್ದು,  ಬಂಧಿತನಿಂದ 8 ಲಕ್ಷ ಮೌಲ್ಯದ‌ 9 ಲ್ಯಾಪ್ ಟಾಪ್ ಹಾಗೂ 5 ಮೊಬೈಲ್ ವಶಕ್ಕೆ ಪಡೆಯಲಾಗಿದೆ.  ಕದ್ದ ಮಾಲಿನಿಂದ ಬಂದ ಹಣದಲ್ಲಿ ಎಣ್ಣೆ ಹೊಡೆದು ಪಬ್ ನಲ್ಲಿ ಆರೋಪಿ ಮಜಾ ಮಾಡುತ್ತಿದ್ದ.

WhatsApp
Facebook
Telegram
error: Content is protected !!
Scroll to Top