ಭಟ್ಕಳ ತಾಲೂಕ ಪುರಸಭಾ ಅಧ್ಯಕ್ಷ ಪರ್ವೇಜ್‌ ಕಾಶಿಮ್‌ ಅವರಿಂದ ಪತ್ರಿಕಾಗೋಷ್ಟಿ:

ಪುರಸಭೆಯಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿರುವುದಿಲ್ಲಾ ಸದಸ್ಯ ಪಾಸ್ಕಲ್‌ ಗೋಮ್ಸ ಅವರ ಆರೋಪ ಸತ್ಯಕ್ಕೆ ದೂರವಾಗಿರುತ್ತದೆ : ಅಧ್ಯಕ್ಷ ಪರ್ವೇಜ್‌ ಕಾಶಿಮ್‌ ಹೇಳಿಕೆ

ಭಟ್ಕಳ: ತಾಲೂಕಿನ ಪುರಸಭೆಯ ಸದಸ್ಯ ಪಾಸ್ಕಲ್‌ ಗೋಮ್ಸ ನನ್ನ ಮೇಲೆ ಮಾಡಿರುವ ಭ್ರಷ್ಟಾಚಾರದ ಆರೋಪ ಸತ್ಯಕ್ಕೆ ದೂರವಾದ ಆರೋಪವಾಗಿರುತ್ತದೆ ಈ ಬಗ್ಗೆ ನಾನು ಎಲ್ಲಾ ದಾಖಲೆಗಳನ್ನು ಒದಗಿಸುತ್ತೆನೆ ಇನ್ನು ಘನ ತ್ಯಾಜ್ಯ ಘಟಕಕ್ಕೆ ಎಂಬತ್ತು ಲಕ್ಷ ಕ್ರಿಯಾಯೋಜನೆಯಾಗಿರುತ್ತದೆ ಅದರ ಹಣ ಇವರೆಗೂ ಪುರಸಭೆಗೆ ಬಂದಿರುವುದಿಲ್ಲಾ ಎಂದು ಪುರಸಭಾ ಅಧ್ಯಕ್ಷ ಪರ್ವೇಜ್‌ ಖಾಶಿಮ್‌ ಹೇಳಿದರು.

ಪುರಸಭಾ ಅಧ್ಯಕ್ಷ ಪರವೇಜ್‌ ಕಾಶಿಮ್‌ ಅವರು ತಮ್ಮ ಕಛೇರಿಯಲ್ಲಿ ಕರೆದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ಈ ಹಿಂದೆ ನಮ್ಮ ಪುರಸಭಾ ಸದಸ್ಯರಾದ ಪಾಸ್ಕಲ್‌ ಗೋಮ್ಸ ಅವರು ತಮ್ಮ ಸುದ್ದಿಗೋಷ್ಟೀಯಲ್ಲಿ ನನ್ನ ಮೇಲೆ ಭ್ರಷ್ಟಾಚಾರದ ಆರೋಪವನ್ನು ಹಾಕಿರುತ್ತಾರೆ ಆದರೆ ಇದು ಸತ್ಯೆಕ್ಕೆ ದೂರವಾದ ಆರೋಪವಾಗಿರುತ್ತದೆ ಅವರು ಮಾಡಿರುವ ಆರೋಪದಲ್ಲಿ ಮೊದಲನೆಯದಾಗಿ ಪುರಸಭೆಯ ವತಿಯಿಂದ ನಡೆದಿರುವ ಪಾರ್ಕ ಈ ಕಾಮಗಾರಿ ಕಳಪೆ ಮಟ್ಟದಲ್ಲಿ ಆಗಿರುತ್ತದೆ ಕೇವಲ 2 ಲಕ್ಷ ಕರ್ಚಾಗಿದೆ ಎಂಬ ಹೇಳಿಕೆಯನ್ನು ನೀಡಿದ್ದಾರೆ ಇದು ಸುಳ್ಳು ಆರೋಪವಾಗಿರುತ್ತದೆ ಇಲ್ಲಿ ೧೦ ಲಕ್ಷದ ಅನುದಾನದಲ್ಲಿ ಕಾಮಗಾರಿಯನ್ನು ನಡೆಸಲಾಗಿರುತ್ತದೆ ಈ ಬಗ್ಗೆ ನನ್ನಲ್ಲಿ ಎಲ್ಲಾ ದಾಖಲೆಗಳಿವೆ ಇನ್ನು ಸ್ಟ್ರೀಟ್‌ ಲೈಟ್ಗಳನ್ನು ಚೈನಾ ಮೇಡ್‌ ಎಂದು ಆರೋಪಿಸಲಾಗಿದೆ ಆದರೆ ಇದು ಐ ಎಸ್‌ ಐ ಮಾರ್ಕಿರುವ ಸನ್‌ ಲೈಟ್‌ ಎಂಬ ಕಂಪನಿಯ ಲೈಟ್ಗಳನ್ನೆ ಹಾಕಲಾಗಿದೆ ಈ ಬಗ್ಗೆ ಪುರಸಭಾ ಸದಸ್ಯರುಗಳ ಅನುಮೋದನೆಯನ್ನು ಕೂಡಾ ಪಡೆದುಕೊಳ್ಳಲಾಗಿದೆ ಹಾಗೆ ಘನ ತ್ಯಾಜ್ಯ ಘಟಕದಲ್ಲಿ 8 ಕೋಟಿ ಅವ್ಯವಹಾರ ನಡೆದಿದೆ ಎಂಬ ಆರೋಪವನ್ನು ಮಾಡಿದ್ದಾರೆ ಇದು ಸಂಪೂರ್ಣ ಸತ್ಯಕ್ಕೆ ದೂರವಾದ ಘಟನೆಯಾಗಿದೆ ಘನ ತ್ಯಾಜ್ಯ ಘಟಕ ಕಾಮಗಾರಿಗೆ ಕೇವಲ ಎಂಬತ್ತು ಲಕ್ಷಕ್ಕೆ ಅನುಮೋದನೆ ಮಾಡಲಾಗಿದ್ದು ಇನ್ನು ಯಾವುದೇ ಅನುದಾನ ಪುರಸಭೆಗೆ ಬಂದಿರುವುದಿಲ್ಲಾ. ನನ್ನ ಖಾಸಗಿ ಕಟ್ಟಡಕ್ಕೆ ಟ್ಯಾಕ್ಸ ಕಟ್ಟುತ್ತಿಲ್ಲಾ ಎಂಬ ಆರೋಪವನ್ನು ಮಾಡಿದ್ದಾರೆ ಇದು ಕೂಡಾ ಅಸತ್ಯವಾಗಿದ್ದು ನಾನು ಯಾವುದೆ ಟ್ಯಾಕ್ಸ ಉಳಿಸಿಕೊಂಡಿರುವುದಿಲ್ಲಾ ಒಟ್ಟಾರೆ ನಮ್ಮ ಪುರಸಭಾ ಸದಸ್ಯ ಪುರಸಭಾ ಸದಸ್ಯ ಪಾಸ್ಕಲ್‌ ಗೋಮ್ಸ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದ್ದು ನಾನು ಈ ಬಗ್ಗೆ ಕಾನೂನು ಸಮರವನ್ನು ನಡೆಸುತ್ತೆನೆ ಇದರಲ್ಲಿ ಯಾವುದೆ ಅನುಮಾನವು ಇರುವುದಿಲ್ಲಾ ಎಂದು ಹೇಳಿದರು

WhatsApp
Facebook
Telegram
error: Content is protected !!
Scroll to Top