ಪುಣೆಯಲ್ಲಿ ಶಿವಾಜಿ ಪ್ರತಿಮೆ ಅನಾವರಣ, ಮೆಟ್ರೊ ರೈಲು ಯೋಜನೆಗೆ ಪ್ರಧಾನಿ ಮೋದಿ ಚಾಲನೆ

Narendra Modi ಎಂಐಟಿ ಮೈದಾನದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡುವುದಕ್ಕಾಗಿ ಅವರು ಗಾರ್ವೇರ್ ಕಾಲೇಜಿನಿಂದ ಆನಂದನಗರ ಮೆಟ್ರೋ ನಿಲ್ದಾಣದವರೆಗೆ ಮೆಟ್ರೊದಲ್ಲೇ ಪ್ರಯಾಣಿಸಿದರು.  ಶಾಲಾ ಮಕ್ಕಳೊಂದಿಗೆ ಮೆಟ್ರೊ ಸವಾರಿ ಮಾಡುತ್ತಿರುವ ಚಿತ್ರಗಳನ್ನೂ ಮೋದಿ ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದಾರೆ.

ಪುಣೆ: ಪ್ರಧಾನಿ  (Narendra Modi) ಅವರು ಭಾನುವಾರ ಮಹಾರಾಷ್ಟ್ರದ ಪುಣೆಯಲ್ಲಿ ಮಹಾನ್ ಮರಾಠ ಯೋಧ ಛತ್ರಪತಿ ಶಿವಾಜಿ ಮಹಾರಾಜರ (Chhatrapati Shivaji Maharaj) 9.5 ಅಡಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಿದ್ದು, ಮಹಾರಾಷ್ಟ್ರದ ಪುಣೆಯಲ್ಲಿ 12 ಕಿಮೀ ಉದ್ದದ 32.2 ಕಿಮೀ ಉದ್ದದ ಮೆಟ್ರೊ ರೈಲು ಯೋಜನೆಗೆ ಚಾಲನೆ ನೀಡಿದರು. ಎಂಐಟಿ ಮೈದಾನದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡುವುದಕ್ಕಾಗಿ ಅವರು ಗಾರ್ವೇರ್ ಕಾಲೇಜಿನಿಂದ ಆನಂದನಗರ ಮೆಟ್ರೋ ನಿಲ್ದಾಣದವರೆಗೆ ಮೆಟ್ರೊದಲ್ಲೇ ಪ್ರಯಾಣಿಸಿದರು.  ಶಾಲಾ ಮಕ್ಕಳೊಂದಿಗೆ ಮೆಟ್ರೊ ಸವಾರಿ ಮಾಡುತ್ತಿರುವ ಚಿತ್ರಗಳನ್ನೂ ಮೋದಿ ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದಾರೆ.  ಪುಣೆ ನಗರ ಸಂಚಾರಕ್ಕಾಗಿ ವಿಶ್ವದರ್ಜೆಯ ಮೂಲಸೌಕರ್ಯಗಳನ್ನು ಒದಗಿಸುವ ಗುರಿಯನ್ನು ಹೊಂದಿರುವ ಮೆಟ್ರೊ ಯೋಜನೆಗೆ ಡಿಸೆಂಬರ್ 24, 2016 ರಂದು ಮೋದಿಯವರೇ ಅಡಿಗಲ್ಲು ಹಾಕಿದ್ದರು. ಈ ಯೋಜನೆಯನ್ನು ಒಟ್ಟು ₹11,400 ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಪುಣೆ ಮೆಟ್ರೊ ಅಲ್ಯೂಮಿನಿಯಂ ಬಾಡಿ ಕೋಚ್‌ಗಳನ್ನು ಹೊಂದಿರುವ ದೇಶದ ಮೊದಲ ಯೋಜನೆಯಾಗಿದೆ.


ಪುಣೆ ಮೆಟ್ರೋದ ಶಂಕುಸ್ಥಾಪನೆಗೆ ನೀವು ನನ್ನನ್ನು ಕರೆದಿದ್ದೀರಿ ಮತ್ತು ಈಗ ಅದನ್ನು ಅರ್ಪಿಸಲು ನನಗೆ ಅವಕಾಶ ನೀಡಿರುವುದು ನನ್ನ ಅದೃಷ್ಟ. ಯೋಜನೆಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಬಹುದು ಎಂಬ ಸಂದೇಶವೂ ಇದರಲ್ಲಿದೆ ಎಂದು ಎಂಐಟಿ ಮೈದಾನದಲ್ಲಿ ನಡೆದ ಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದರು.
ಪ್ರಧಾನಿ ಮೋದಿ ಅವರು ಪುಣೆಯಲ್ಲಿ ಮುಲಾ-ಮುತಾ ನದಿ ಯೋಜನೆಗಳ ಪುನರುಜ್ಜೀವನ ಮತ್ತು ಮಾಲಿನ್ಯ ನಿವಾರಣೆ ಯೋಡನೆಗೆ ಅಡಿಪಾಯ ಹಾಕಿದರು. ₹1080 ಕೋಟಿಗೂ ಹೆಚ್ಚು ವೆಚ್ಚದ ಈ ಯೋಜನೆಯಡಿ ನದಿಯ 9 ಕಿ.ಮೀ ವ್ಯಾಪ್ತಿಯಲ್ಲಿ ಕಾಯಕಲ್ಪ ಮಾಡಲಾಗುವುದು.


ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಶಿವಾಜಿ ಪ್ರತಿಮೆಯು ಯುವ ಪೀಳಿಗೆಯಲ್ಲಿ ದೇಶಭಕ್ತಿಯನ್ನು ಬೆಳೆಸುತ್ತದೆ ಎಂದಿದ್ದಾರೆ.

WhatsApp
Facebook
Telegram
error: Content is protected !!
Scroll to Top