Russia-Ukraine War Live: ಸಂಘರ್ಷ ನಿಲ್ಲಸದಿದ್ದರೆ ದೇಶವೇ ಇಲ್ಲದಂತಾದೀತು: ಉಕ್ರೇನ್ ಅಸ್ತಿತ್ವಕ್ಕೇ ಸವಾಲೆಸೆದ ರಷ್ಯಾ

ಪಾಶ್ಚಿಮಾತ್ಯ ದೇಶಗಳು ಉಕ್ರೇನ್-ರಷ್ಯಾ ವಿವಾದದಲ್ಲಿ ಮಧ್ಯಪ್ರವೇಶಿಸುವುದು ನಿಲ್ಲಿಸದಿದ್ದರೆ ಉಕ್ರೇನ್ ಗಡಿಯಾಚೆಗೂ ಯುದ್ಧ ವಿಸ್ತರಿಸಬಹುದು ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನೇರ ಎಚ್ಚರಿಕೆ ನೀಡಿದ್ದಾರೆ.

ಸಂಘರ್ಷ ನಿಲ್ಲಸದಿದ್ದರೆ ದೇಶವೇ ಇಲ್ಲದಂತಾದೀತು: ಉಕ್ರೇನ್ ಅಸ್ತಿತ್ವಕ್ಕೇ ಸವಾಲೆಸೆದ ರಷ್ಯಾರಷ್ಯಾ ಸೇನೆಯ ವಿರುದ್ಧದ ಸಂಘರ್ಷವನ್ನು ಉಕ್ರೇನ್ ಅಡಳಿತ ತಕ್ಷಣ ನಿಲ್ಲಿಸಬೇಕು. ಅವರ ನಡವಳಿಕೆ ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಉಕ್ರೇನ್​ಗೆ ಇರುವ ಪ್ರತ್ಯೇಕ ದೇಶದ ಸ್ಥಾನಮಾನವೇ ಅಪಾಯಕ್ಕೀಡಾಗಬಹುದು ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಗಂಭೀರ ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ರಷ್ಯಾ ಅಂಥ ಕಠಿಣ ಕ್ರಮಕ್ಕೆ ಮುಂದಾಗುವುದು ಅನಿವಾರ್ಯವಾದರೆ ಅದರ ಸಂಪೂರ್ಣ ಹೊಣೆ ಉಕ್ರೇನ್​ನ ಆಡಳಿತಗಾರರದೇ ಆಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.

  • 11ನೇ ದಿನಕ್ಕೆ ಉಕ್ರೇನ್ ಯುದ್ಧ
  • ಉಕ್ರೇನ್ ಮೇಲೆ ರಷ್ಯಾ ಆರಂಭಿಸಿರುವ ದಾಳಿಯು 11ನೇ ದಿನಕ್ಕೆ ಕಾಲಿಟ್ಟಿದೆ. ರಷ್ಯಾ ದಾಳಿಯಿಂದ ಈವರೆಗೆ 15 ಲಕ್ಷ ಉಕ್ರೇನ್ ನಾಗರಿಕರು ನಿರಾಶ್ರಿತರಾಗಿದ್ದಾರೆ.
  • ಖಾರ್ಕಿವ್ ನಗರದಿಂದ ಎಲ್ಲ ಭಾರತೀಯರ ರಕ್ಷಣೆ
  • ಉಕ್ರೇನ್‌ನ ಖಾರ್ಕಿವ್ ನಗರದಲ್ಲಿ ಭಾರತೀಯರು ಯಾರೊಬ್ಬರೂ ಇಲ್ಲ. ಅಲ್ಲಿದ್ದ ಎಲ್ಲ ಭಾರತೀಯರನ್ನು ರಕ್ಷಿಸಲಾಗಿದೆ ಎಂದು
    ಭಾರತೀಯ ವಿದೇಶಾಂಗ ಸಚಿವಾಲಯದಿಂದ ಮಾಹಿತಿ ನೀಡಲಾಗಿದೆ.
  • ಉಕ್ರೇನ್​ಗೆ ಶಸ್ತ್ರಾಸ್ತ್ರ ಬೇಡ: ರಷ್ಯಾ ತಾಕೀತು
  • ಉಕ್ರೇನ್‌ಗೆ ಇನ್ನು ಮುಂದೆ ಯಾವುದೇ ರೀತಿಯ ಶಸ್ತ್ರಾಸ್ತ್ರ ಕೊಡಬಾರದು ಎಂದು ಐರೋಪ್ಯ ಒಕ್ಕೂಟ ಮತ್ತು ನ್ಯಾಟೊ ಸಂಘಟನೆಗೆ ರಷ್ಯಾ ತಾಕೀತು ಮಾಡಿದೆ.
  • ರಷ್ಯಾದ ಮಾಧ್ಯಮ ಕಾನೂನಿಗೆ ಅಮೆರಿಕ ವಿರೋಧ
  • ರಷ್ಯಾ ಜಾರಿಗೆ ತಂದಿರುವ ಹೊಸ ಮಾಧ್ಯಮ ಕಾನೂನಿಗೆ ಅಮೆರಿಕ ತೀವ್ರ ವಿರೋಧ ವ್ಯಕ್ತಪಡಿಸಿದೆ. ಸುಳ್ಳು ಸುದ್ದಿಯನ್ನು ಬಿತ್ತರಿಸಿದರೆ 15 ವರ್ಷ ಜೈಲುಶಿಕ್ಷೆ ಕಾನೂನಿಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸಹಿ ಹಾಕಿದ್ದಾರೆ. ಪುಟಿನ್ ನಡೆಯನ್ನು ಅಮೆರಿಕ ಅಧ್ಯಕ್ಷರ ಕಚೇರಿ ಆಕ್ಷೇಪಿಸಿದೆ.
  • ಆರ್ಥಿಕ ಬೆಂಬಲ, ರಕ್ಷಣಾ ಉಪಕರಣ ಕೋರಿದ ಝೆಲೆನ್​ಸ್ಕಿ
  • ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರೊಂದಿಗೆ ಉಕ್ರೇನ್ ಅಧ್ಯಕ್ಷ ವೊಲೊಡ್ಮಿರ್ ಝೆಲೆನ್​ಸ್ಕಿ ಮಾತುಕತೆ ನಡೆಸಿದ್ದಾರೆ. ರಷ್ಯಾ ಮೇಲಿನ ನಿರ್ಬಂಧ ಮುಂದುವರಿಸಬೇಕು ಎಂದು ಅವರು ಕೋರಿದ್ದಾರೆ.
  • ರಷ್ಯಾ ಸೇನೆಯ ದಿಗ್ಬಂಧನದಲ್ಲಿ 4 ಲಕ್ಷ ಜನ
  • ಉಕ್ರೇನ್‌ನಲ್ಲಿ ರಷ್ಯಾ ಸೇನೆಯ ದಾಳಿ ಮುಂದುವರಿದಿದೆ. ರಷ್ಯಾ ಸೇನೆಯು ಮರಿಯುಪೋಲ್ ನಗರಕ್ಕೆ ದಿಗ್ಬಂಧನ ಹೇರಿದೆ. ನಗರದಲ್ಲಿ ಪ್ರಸ್ತುತ 4 ಲಕ್ಷ ಜನರಿದ್ದಾರೆ. ವಿದ್ಯುತ್ ಸಂಪರ್ಕ ಇಲ್ಲದ ನಗರದಲ್ಲಿ, ಕುಡಿಯುವ ನೀರಿನ ಪೂರೈಕೆಯು ಕಡಿತಗೊಂಡಿದೆ. ಜನರನ್ನು ರಷ್ಯಾ ಸೇನೆ ಜನರನ್ನ ಒತ್ತೆ ಇರಿಸಿಕೊಂಡಿದೆ ಎಂದು ಮರಿಯುಪೋಲ್ ನಗರದ ಮೇಯರ್ ವಾಡಿಮ್ ಬಾಯ್ಚೆಂಕೊ ಹೇಳಿದ್ದಾರೆ.
  • ರಷ್ಯಾ ಬ್ಯಾಂಕ್​ಗೆ ಸೇವೆ ನಿಲ್ಲಿಸಿದ ವೀಸಾ, ಮಾಸ್ಟರ್​ಕಾರ್ಡ್​
  • ವಿಶ್ವದಾದ್ಯಂತ ಹಣಕಾಸು ಸೇವೆ ಒದಗಿಸುತ್ತಿರುವ ವೀಸಾ ಮತ್ತು ಮಾಸ್ಟರ್​ಕಾರ್ಡ್​ ಕಂಪನಿಗಳು ರಷ್ಯಾ ಬ್ಯಾಂಕ್​ಗಳಿಗೆ ನೀಡುತ್ತಿದ್ದ ಸೇವೆಯನ್ನು ರದ್ದುಪಡಿಸಿವೆ. ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಮುಂದುವರಿಸಿದ ಹಿನ್ನೆಲೆಯಲ್ಲಿ ಎರಡೂ ಕಂಪನಿಗಳು ಕಠಿಣ ನಿಲುವು ತಳೆದಿವೆ. ಈ ನಡುವೆ ಮತ್ತೊಂದು ಪ್ರಮುಖ ಕಂಪನಿ ಪುಮಾ ಸಹ ರಷ್ಯಾದಲ್ಲಿದ್ದ ಮಳಿಗೆಗಳನ್ನು ಮುಚ್ಚಲು ನಿರ್ಧರಿಸಿದೆ.
  • ಒಪ್ಪೊತ್ತು ಊಟ ಮಾಡಿ ಜೀವ ಹಿಡಿದಿದ್ದೆವು
  • ಉಕ್ರೇನ್​ನಿಂದ ಬಂದ ಚೈತ್ರಾ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. ಅಲ್ಲಿ ತುಂಬಾ ಕಠಿಣ ಪರಿಸ್ಥಿತಿಯಿತ್ತು. ನಮ್ಮ ದೇಶದ ರಾಯಭಾರ ಕಚೇರಿ ಸಾಕಷ್ಟು ಸಹಾಯ ಮಾಡಿತು. ಏಳೆಂಟು ದಿನಗಲ‌ ಕಾಲ ಒಂದು ಹೊತ್ತು ಊಟ ಮಾಡುತ್ತಾ, ಬಂಕರ್​ನಲ್ಲೆ ಕಾಲ‌ ಕಳೆದೆವು ಎಂದು ತಮ್ಮ ಪರಿಸ್ಥಿತಿ ವಿವರಿಸಿದರು.
  • ಉಕ್ರೇನ್​ನಲ್ಲಿ ಸಿಲುಕಿದ್ದ 35 ಕನ್ನಡಿಗರು ವಾಪಸ್
  • ಉಕ್ರೇನ್‌ನಲ್ಲಿ ಸಿಲುಕಿದ್ದ 154 ಭಾರತೀಯರು ಸ್ಲೊವಾಕಿಯಾ ಮಾರ್ಗವಾಗಿ ದೆಹಲಿಗೆ ಭಾನುವಾರ ಹಿಂದಿರುಗಿದರು. ‘ಆಪರೇಷನ್ ಗಂಗಾ’ ಹೆಸರಿನಲ್ಲಿ ಏರ್‌ಲಿಫ್ಟ್ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆ. ಉಕ್ರೇನ್‌ನಲ್ಲಿ ಸಿಲುಕಿದ್ದ 35 ಕನ್ನಡಿಗರು ದೆಹಲಿಗೆ ಬಂದಿಳಿದಿದ್ದಾರೆ. ಈ ಪೈಕಿ 18 ಜನರು ಬೆಂಗಳೂರು ತಲುಪಿದ್ದಾರೆ.
  • ಹಟಕ್ಕೆ ಬಿದ್ದ ಪುಟಿನ್:
  • ಅಮೆರಿಕಕ್ಕೆ ವಾರ್ನಿಂಗ್ಉಕ್ರೇನ್​ ವಾಯುಗಡಿಯಲ್ಲಿ ರಷ್ಯಾದ ಯುದ್ಧವಿಮಾನಗಳ ಸಂಚಾರ ಹೆಚ್ಚಾಗಿದ್ದು, ರಾಜಧಾನಿ ಕೀವ್ ಮೇಲೆ ದೊಡ್ಡಮಟ್ಟದ ದಾಳಿ ನಡೆಯಬಹುದು ಎಂದು ಹೇಳಲಾಗುತ್ತಿದೆ. ಉಕ್ರೇನ್​ ವಾಯುಗಡಿಯನ್ನು ಸಂಪೂರ್ಣವಾಗಿ ನಿರ್ಬಂಧಿಸಬೇಕು ಎಂಬ ಉಕ್ರೇನ್ ಅಧ್ಯಕ್ಷ ವೊಮೊಡ್ಮಿರ್ ಝೆಲೆನ್​ಸ್ಕಿ ನ್ಯಾಟೊ ದೇಶಗಳಿಗೆ ಮನವಿ ಮಾಡಿದ್ದಾರೆ. ಉಕ್ರೇನ್ ಆಸುಪಾಸಿನ ದೇಶಗಳಲ್ಲಿ ನ್ಯಾಟೊ ಪಡೆಗಳು ಸಹ ಜಮಾವಣೆಗೊಂಡಿವೆ. ಉಕ್ರೇನ್​ ವಿಚಾರದಲ್ಲಿ ಹಸ್ತಕ್ಷೇಪ ಮಾಡಿದರೆ ಯುದ್ಧವನ್ನು ಇತರ ದೇಶಗಳಿಗೂ ವಿಸ್ತರಿಸಲು ಹಿಂಜರಿಯುವುದಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅಮೆರಿಕಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ.

Russia Ukraine Conflict ಉಕ್ರೇನ್ ರಾಜಧಾನಿ ಕೀವ್ ನಗರಕ್ಕೆ ಮುತ್ತಿಗೆ ಹಾಕಿರುವ ರಷ್ಯಾ ಈಗಾಗಲೇ ಬಂದರು ನಗರಿ ಮರಿಪೋಲ್ ಮತ್ತು ಪ್ರಮುಖ ನಗರ ಖಾರ್ಕಿವ್​ ವಶಪಡಿಸಿಕೊಂಡಿದೆ. ಸೈನಿಕರ ಸಂಖ್ಯೆ ಮತ್ತು ಶಸ್ತ್ರಾಸ್ತ್ರಗಳಲ್ಲಿ ರಷ್ಯಾವನ್ನು ಸರಿಗಟ್ಟಲಾಗದ ಉಕ್ರೇನ್​ ಹಿಮ್ಮೆಟ್ಟುತ್ತಿದೆ. ಆದರೆ ರಾಜತಾಂತ್ರಿಕ ಕ್ರಮಗಳ ಮೂಲಕ ರಷ್ಯಾವನ್ನು ಮಣಿಸಲು ಉಕ್ರೇನ್ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದೆ. ಅಮೆರಿಕ, ಜರ್ಮನಿ ಸೇರಿದಂತೆ ಹಲವು ಆರ್ಥಿಕ ಬಲಾಢ್ಯ ದೇಶಗಳು ಈಗಾಗಲೇ ರಷ್ಯಾ ವಿರುದ್ಧ ಕಠಿಣ ನಿರ್ಬಂಧಗಳನ್ನು ವಿಧಿಸುವ ಜೊತೆಗೆ ಉಕ್ರೇನ್​ಗೆ ಸುಧಾರಿತ ಶಸ್ತ್ರಾಸ್ತ್ರಗಳ ಪೂರೈಕೆ ಹೆಚ್ಚಿಸಿವೆ. ಈ ಬೆಳವಣಿಗೆಯಿಂದ ಸಿಟ್ಟಾಗಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಪಾಶ್ಚಿಮಾತ್ಯ ದೇಶಗಳು ಉಕ್ರೇನ್-ರಷ್ಯಾ ವಿವಾದದಲ್ಲಿ ಮಧ್ಯಪ್ರವೇಶಿಸುವುದು ನಿಲ್ಲಿಸದಿದ್ದರೆ ಉಕ್ರೇನ್ ಗಡಿಯಾಚೆಗೂ ಯುದ್ಧ ವಿಸ್ತರಿಸಬಹುದು ಎಂದು ನೇರ ಎಚ್ಚರಿಕೆ ನೀಡಿದ್ದಾರೆ.

WhatsApp
Facebook
Telegram
error: Content is protected !!
Scroll to Top