ಪೇಶಾವರ ಬಾಂಬ್ ಸ್ಫೋಟ ಪ್ರಕರಣ;ದಾಳಿಯ ಹೊಣೆ ಹೊತ್ತ ಇಸ್ಲಾಮಿಕ್ ಸ್ಟೇಟ್ಸ್..!

ಪಾಕಿಸ್ತಾನ: ಪೇಶಾವರದ ಮಸೀದಿಯೊಂದರಲ್ಲಿ ಶುಕ್ರವಾರದ ಪ್ರಾರ್ಥನಾ ಸಮಯದಲ್ಲಿ ನಡೆದಿದ್ದ ಬಾಂಬ್ ದಾಳಿಯಲ್ಲಿ (Peshawar Mosque Blast) ಮೃತಪಟ್ಟವರ ಸಂಖ್ಯೆ 57ಕ್ಕೇರಿದೆ. ಈ ಸ್ಫೋಟದ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ (ಐಎಸ್) ಹೊತ್ತುಕೊಂಡಿದೆ ಎಂದು ಶನಿವಾರ ವರದಿಗಳು ತಿಳಿಸಿವೆ. ಶುಕ್ರವಾರ ಇಬ್ಬರು ಭಯೋತ್ಪಾದಕರು ಪೇಶಾವರದ ಮಸೀದಿ ಬಳಿ ಪೊಲೀಸ್ ಅಧಿಕಾರಿಗಳ ಮೇಲೆ ಗುಂಡು ಹಾರಿಸಿದ್ದರು. ನಂತರ ಅವರಲ್ಲಿ ಒಬ್ಬರು ಕಟ್ಟಡಕ್ಕೆ ಪ್ರವೇಶಿಸಿ ಸ್ಫೋಟ ನಡೆಸಿದ್ದರು. ದಾಳಿಯಲ್ಲಿ 57 ಜನರು ಸಾವನ್ನಪ್ಪಿದ್ದು, 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ವಿಶ್ವಸಂಸ್ಥೆ ಸೆಕ್ರೆಟರಿ-ಜನರಲ್ ಆಂಟೋನಿಯೊ ಗುಟೆರಸ್ ಆತ್ಮಹತ್ಯಾ ಸ್ಫೋಟವನ್ನು ಖಂಡಿಸಿದ್ದು, ‘ಪ್ರಾರ್ಥನಾ ಸ್ಥಳಗಳು ಸ್ವರ್ಗವಾಗಬೇಕೇ ಹೊರತು, ದಾಳಿಗೆ ಗುರಿಯಲ್ಲ’ ಎಂದಿದ್ದಾರೆ. ‘ಶುಕ್ರವಾರದ ಪ್ರಾರ್ಥನೆಯ ವೇಳೆ ಪಾಕಿಸ್ತಾನದ ಪೇಶಾವರದ ಮಸೀದಿಯ ಮೇಲೆ ನಡೆದ ಭೀಕರ ದಾಳಿಯನ್ನು ನಾನು ಖಂಡಿಸುತ್ತೇನೆ. ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪಗಳು’ ಎಂದು ವಿಶ್ವಸಂಸ್ಥೆಯ ಮುಖ್ಯಸ್ಥರು ಟ್ವೀಟ್ ಮಾಡಿದ್ದಾರೆ.

ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗವು (HRCP) ಷಿಯಾ ಆರಾಧಕರನ್ನು ಗುರಿಯಾಗಿಸುವ ಉದ್ದೇಶದಿಂದ ನಡೆದ ಆತ್ಮಹತ್ಯಾ ಸ್ಫೋಟವನ್ನು ತೀವ್ರವಾಗಿ ಖಂಡಿಸಿದೆ. ‘‘ಈ ದಾಳಿಯು ಸ್ಪಷ್ಟವಾಗಿ ಶಿಯಾ ಆರಾಧಕರನ್ನು ಗುರಿಯಾಗಿಸುವ ಉದ್ದೇಶ ಹೊಂದಿತ್ತು. ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಿರುವ ಪಂಥೀಯ ದಾಳಿಯ ಲಕ್ಷಣವನ್ನು ಇದು ಹೊಂದಿದೆ’’ ಎಂದು ಹೆಚ್​ಆರ್​ಸಿಪಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಮಸೀದಿ ಮೇಲಿನ ದಾಳಿಯನ್ನು ಪಾಕಿಸ್ತಾನ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ತೀವ್ರವಾಗಿ ಖಂಡಿಸಿ, ತುರ್ತು ವೈದ್ಯಕೀಯ ಸೇವೆ ನೀಡಲು ಆದೇಶಿಸಿದ್ದರು.

WhatsApp
Facebook
Telegram
error: Content is protected !!
Scroll to Top