16 ಗಂಟೆ ಟ್ರಾನ್‍ನಲ್ಲೇ ನಿಂತುಕೊಂಡೆ ಪ್ರಯಾಣ ಮಾಡಿದ್ದೇವೆ: ನೋವು ಹಂಚಿಕೊಂಡ ವಿದ್ಯಾರ್ಥಿಗಳು!

ರಾಜ್ಯ(ಮಡಿಕೇರಿ): ಉಕ್ರೇನ್-ರಷ್ಯಾ ದೇಶಗಳ ನಡುವೆ ನಡೆಯುತ್ತಿರುವ ಯುದ್ಧ ಇಂದು 9ನೇ ದಿನಕ್ಕೆ ಕಾಲಿಟ್ಟಿದೆ. ಸಾವಿರಾರು ಭಾರತೀಯರು ಯುದ್ಧ ಪೀಡಿತ ಪ್ರದೇಶವನ್ನು ಕಂಡು ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ. ಮಕ್ಕಳ ಪರಿಸ್ಥಿತಿ ಕಂಡು ಪೆÇೀಷಕರು ಕಂಗಾಲು ಆಗಿದ್ದಾರೆ. ಇನ್ನೂ ಕೆಲ ಪೆÇೀಷಕರು ಮಕ್ಕಳಿಗೆ ಧೈರ್ಯ ತುಂಬಿ ಯುದ್ಧ ಪೀಡಿತ ಪ್ರದೇಶದಿಂದ ಹೊರಡುವ ಪ್ರಯತ್ನ ಮಾಡಿ ಎಂದು ಹೇಳುತ್ತಿದ್ದಾರೆ. ಇದರಿಂದ ಅಲ್ಲಿರುವ ವಿದ್ಯಾರ್ಥಿಗಳು ಹೈ ರಿಸ್ಕ್ ತೆಗೆದುಕೊಂಡು ತಾಯ್ನಾಡಿಗೆ ಬರಲು ಮುಂದಾಗಿದ್ದಾರೆ.

ಕೊಡಗು ಜಿಲ್ಲೆಯ ನಾಲ್ವರು ವಿದ್ಯಾರ್ಥಿಗಳು ಹೈ ರಿಸ್ಕ್ ತೆಗೆದುಕೊಂಡು ಉಕ್ರೇನ್ ಖಾರ್ಕಿವ್ ನಗರದಿಂದ ಸ್ವಂತ ರಿಸ್ಕ್‍ನಲ್ಲಿ ತಾಯ್ನಾಡಿಗೆ ಆಗಮಿಸಿದ್ದಾರೆ. ಹೌದು, ಕಳೆದ 23 ರಲ್ಲಿ ಉಕ್ರೇನ್ ರಷ್ಯಾ ದೇಶಗಳಲ್ಲಿ ಆರಂಭವಾದ ಯುದ್ಧ ಇಂದಿಗೂ ಮುಗಿದಿಲ್ಲ. ಎಂಬಿಬಿಎಸ್ ವಿದ್ಯಾಭ್ಯಾಸ ಮಾಡಲು ಹೋದ ಕರ್ನಾಟಕ ವಿದ್ಯಾರ್ಥಿಗಳು ಈ ಯುದ್ಧವನ್ನು ಕಂಡು ಕಂಗಾಲು ಆಗಿದ್ದಾರೆ. ಹೇಗಾದರೂ ಮಾಡಿ ತಮ್ಮ ತಾಯ್ನಾಡಿಗೆ ಹೋಗಬೇಕು ಎಂದು ಕಾಲ್ನಡಿಗೆಯಲ್ಲೇ ಕೆಲ ವಿದ್ಯಾರ್ಥಿಗಳು ಬರುತ್ತಿದ್ದಾರೆ.

ಕೊಡಗು ಜಿಲ್ಲೆಯ 19 ವಿದ್ಯಾರ್ಥಿಗಳ ಪೈಕಿ ಈಗಾಗಲೇ ಜಿಲ್ಲೆಗೆ 4 ವಿದ್ಯಾರ್ಥಿಗಳು ಹೈ ರಿಸ್ಕ್ ತೆಗೆದುಕೊಂಡು ತಮ್ಮ ಊರಿಗೆ ಮರಳಿದ್ದಾರೆ. ಕೊಡಗಿನ ಕುಶಾಲನಗರದ ಇಬ್ಬರು ವಿದ್ಯಾರ್ಥಿಗಳಾದ ಚಂದನ್ ಗೌಡ ಹಾಗೂ ಲಿಖಿತ್ ಹೈ ರಿಸ್ಕ್ ತೆಗೆದುಕೊಂಡು ಜಿಲ್ಲೆಗೆ ಇಂದು ಆಗಮಿಸಿದ್ದಾರೆ. ಅಷ್ಟೇ ಅಲ್ಲದೆ ಉಕ್ರೇನ್ ನಲ್ಲಿ ನಡೆದ ಕರಾಳ ದಿನಗಳ ಬಗ್ಗೆ ಪಬ್ಲಿಕ್ ಟಿವಿಯೊಂದಿಗೆ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

ನಾವು ಅಲ್ಲಿಂದ ಬರುವಾಗ ನಮ್ಮ ಸ್ವಂತ ರಿಸ್ಕ್‍ನಲ್ಲಿ ಬಂದಿದ್ದೇವೆ. ಊಟ ತಿಂಡಿ ಇಲ್ಲದೆ ಸುಮಾರು 16 ಗಂಟೆ ಟ್ರಾನ್‍ನಲ್ಲೇ ನಿಂತುಕೊಂಡೆ ಪ್ರಯಾಣ ಮಾಡಿದ್ದೇವೆ. ಉಕ್ರೇನ್‍ನಲ್ಲಿ ಇರುವಾಗ ಅಲ್ಲಿಯ ಯುದ್ಧದ ಭೀಕರತೆ ಬಗ್ಗೆ ನೆನೆಸಿಕೊಂಡರೇ ಈಗಾಲೂ ನಮಗೆ ಭಯವಾಗುತ್ತದೆ. ಅಲ್ಲಿ ನಡೆಯುತ್ತಿದ್ದ ಯುದ್ಧದ ಶಬ್ದಗಳು ಈಗಲೂ ಇಲ್ಲೇ ಯುದ್ಧ ನಡೆಯುತ್ತಿದೆ ಅನಿಸುತ್ತದೆ. ಆ ಶಾಕ್ ನಿಂದ ಹೋರ ಬರಲು ಕೆಲ ದಿನಗಳು ಬೇಕು ಎಂದ ವಿದ್ಯಾರ್ಥಿಗಳು

ತಮ್ಮ ರೂಂನಲ್ಲಿ ಜೊತೆಯಾಗಿದ್ದ ಮೃತ ನವೀನ್ ಅವರ ಬಗ್ಗೆ ನೆನೆಪು ಮಾಡಿಕೊಂಡು ಇದ್ದಾರೆ ತುಂಬಾ ನೋವು ಆಗುತ್ತದೆ. ಕಳೆದ ಎರಡು ವರ್ಷ ನವೀನ್ ನಾವು ಒಟ್ಟಿಗೆ ಇದ್ದೆವು. ಅವನ ಅಗಲಿಕೆ ಕೂಡ ನಮಗೆ ಬಹಳ ಬೇಸರ ತಂದಿದೆ. ಖಾರ್ಕಿವ್ ಪ್ರದೇಶದ ಪರಿಸ್ಥಿತಿ ಮತ್ತಷ್ಟು ಬಿಗುಡಾಯಿಸುತ್ತಿದೆ. ನಮ್ಮ ಯುನಿವರ್ಸಿಟಿ ಪಕ್ಕದ ಸಾಕಷ್ಟು ಯೂನಿವರ್ಸಿಟಿಗಳು ಈಗಾಗಲೇ ನಾಮಾವಶೇಷವಾಗಿದೆ. ನಮ್ಮ ಯೂನಿವರ್ಸಿಟಿ ಉಳಿಯುತ್ತೋ ಅನ್ನೋದು ಕೂಡ ಗೊತ್ತಿಲ್ಲಾ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸದ್ಯ ನಾವು ತಾಯ್ನಾಡಿಗೆ ಬಂದಿದ್ದೇವೆ. ಇದು ಬಹಳ ಸಂತೋಷ ತಂದಿದೆ. ನಮ್ಮ ಜೊತೆ ಇರುವ ಅನೇಕ ಸ್ನೇಹಿತರು ಅಲ್ಲಿಯೇ ಇದ್ದಾರೆ. ಅವರು ಬಂದರೆ ಮತ್ತಷ್ಟು ಖುಷಿಯಾಗುತ್ತದೆ ಎಂದು ವಿದ್ಯಾರ್ಥಿಗಳು ತಿಳಿಸಿದರು.

WhatsApp
Facebook
Telegram
error: Content is protected !!
Scroll to Top