ರಾಯಲ್ ಎನ್‌ಫೀಲ್ಡ್‌ನಲ್ಲಿ ಸಂಪೂರ್ಣ ಅಂಟಾರ್ಟಿಕಾ ಮಾಡಿದ ಕನ್ನಡಿಗ ಸಂತೋಷ್..!

ರಾಜ್ಯ: ಎಲ್ಲಿ ನೋಡಿದರೂ ಮುಂಜುಗಡ್ಡೆ, ರಸ್ತೆ, ಆಕಾಶ ಎರಡಕ್ಕೂ ಹೆಚ್ಚಿನ ವ್ಯತ್ಯಾಸವೇ ಇಲ್ಲ. ದುರ್ಗಮ ಹಾದಿಯ ಅಂಟಾರ್ಟಿಕಾ ಸವಾರಿಯನ್ನು ಬೆಂಗಳೂರಿನ ಕನ್ನಡಿಗ ಸಂತೋಷ್ ಕುಮಾರ್‌ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್‌ನಲ್ಲಿ ಮುಗಿಸಿದ್ದಾರೆ.ಸಂತೋಷ್ ಸಾಧನೆಗೆ  ಎಲ್ಲೆಡೆಗಳಿಂದ ಮೆಚ್ಚುಗೆಗೆಗಳ ಮಹಾಪೂರವೇ ಹರಿದುಬಂದಿದೆ. 87 ಡಿಗ್ರಿ ದಕ್ಷಿಣ ಧ್ರುವಕ್ಕೆ ರೋಚಕ ಹಾಗೂ ಅತ್ಯಂತ ಸಾಹಸಮಯ ರೈಡಿಂಗ್ ಪೂರ್ಣಗೊಳಿಸಿ ಹೊಸ ಮೈಲಿಗಲ್ಲು ನಿರ್ಮಿಸಿದ್ದಾರೆ. ಐಟಿ ಉದ್ಯೋಗ ತೊರೆದು ಪೂರ್ಣ ಪ್ರಮಾಣದಲ್ಲಿ ರಾಯಲ್ ಎನ್‌ಫೀಲ್ಡ್ ಸಾಹಸಮಯ ರೈಡಿಂಗ್‌ನಲ್ಲಿ ತೊಡಗಿರುವ ಬೆಂಗಳೂರಿನ ಸಂತೋಷ್ ಕುಮಾರ್ ಜೊತೆ ಏಷ್ಯಾನೆಟ್ ಸುವರ್ಣನ್ಯೂಸ್.ಕಾಂ ನಡೆಸಿದ ಸಂದರ್ಶನ ಇಲ್ಲಿದೆ.

ಪ್ರಶ್ನೆ: ನಿಮ್ಮ 90° ಸೌಥ್ ಪೋಲ್ ರೈಡ್ ಅನುಭವ ಹೇಗಿತ್ತು? ಯಾವೆಲ್ಲಾ ಪ್ರದೇಶಗಳಲ್ಲಿ ರೈಡ್ ಮಾಡಿದ್ದೀರಿ?
ಉತ್ತರ: ಅನುಭವ ಕುರಿತು ಹೇಳಬೇಕೆಂದರೆ ಅದೊಂದು ಬೇರೆ ಜಗತ್ತು. ಅತ್ಯುತ್ತಮ, ರೋಚಕ ಹಾಗೂ ಸಾಹಸಮಯ ಅನುಭವ ನನ್ನದಾಗಿತ್ತು. ಅತೀವ ಚಳಿ, ಅತೀ ಆಸಕ್ತಿಯ ಬೈಕ್ ರೈಡಿಂಗ್ ಇದಕ್ಕಿಂತ ಇನ್ನೇನು ಬೇಕು. ಸಂಪೂರ್ಣ ಅಂಟಾರ್ಟಿಕಾ ಖಂಡ ಸುತ್ತಿದ್ದೇನೆ. ಅಂಟಾರ್ಟಿಕಾದ ಒಂದು ಬದಿಯಿಂದ ಅಂದರೆ  ಸೌತ್ ಆಫ್ರಿಕಾದ ಸನಿಹದಿಂದ ರೈಡಿಂಗ್ ಆರಂಭಗೊಂಡಿತು. ಸರಿಸುಮಾರು ದಕ್ಷಿಣದ 370 ಡಿಗ್ರಿಯಿಂದ ಆರಂಭಗೊಂಡ ಪಯಣ , 28 ದಿನ, ಬರೋಬ್ಬರಿ 5,500 ಕಿಲೋಮೀಟರ್ ರೈಡ್ ಮಾಡಿದ್ದೇನೆ. 

ಪ್ರಶ್ನೆ: ನಿಮ್ಮ ಸೌತ್ ಪೋಲ್ ಜರ್ನಿಯಲ್ಲಿ ಅತ್ಯಂತ ಕಠಿಣವಾದ ರಸ್ತೆ ಯಾವುದಾಗಿತ್ತು? 
ಉತ್ತರ: ಅಂಟಾರ್ಟಿಕಾ ರೈಡ್‌ನಲ್ಲಿ ಅತೀ ದೊಡ್ಡ ಸವಾಲು ಮಂಜುಗಡ್ಡೆ ತುಂಬಿದ ಹಾದಿ. ಇದರಲ್ಲಿ ಬಿಸಿಲು ಹೆಚ್ಚಾದಾಗ ಮುಂಜು ಕರಗಲು ಆರಂಭಿಸುತ್ತದೆ. ಈ ವೇಳೆ ಮುಂಜುಗಡ್ಡೆ ಮೃದುವಾಗತ್ತದೆ. ಈ ವೇಳೆ ರೈಡಿಂಗ್ ಅತ್ಯಂತ ಕಷ್ಟ. ಕಾರಣ ಮಂಜುಗಡ್ಡೆ ಒಳಗಡೆ ಬೈಕ್ ಹೂತು ಹೋಗಲು ಆರಂಭಿಸುತ್ತದೆ. ಮುಂಜುಗಡ್ಡೆ ಕೆಳಗಡೆ ರಸ್ತೆ ಇದೆಯೂ ಅಥವಾ ಎಷ್ಟು ಎತ್ತರಕ್ಕೆ ಮಂಜುಗಡ್ಡೆ ಇದೆ ಅನ್ನೋದೇ ಅರ್ಥವಾಗುವುದಿಲ್ಲ. ಎಲ್ಲಾ ಕಡೆ ಮುಂಜುಗಡ್ಡೆ, ಯಾವ ಹಾದಿಯಲ್ಲಿ ಹೋಗಬೇಕು ಅನ್ನೋದು ಸಮಸ್ಯೆ. ಹೇಗೆಂದರೆ ದೊಡ್ಡ ಟೇಬಲ್ ಟೆನಿಸ್ ಮಾಡಿ ಅದರೊಳಗೆ ಹೋದರೆ ನಮಗೆ ಎಲ್ಲವೂ ಬಿಳಿಯಾಗಿ ಕಾಣಿಸುತ್ತದೆ. ಸುತ್ತ, ಮುತ್ತ, ಮೇಲೆ ಕೆಳಗೆ ಎಲ್ಲವೂ ಬಿಳಿ. ಅದರೆ ರೀತಿ ಇತ್ತು. ಒಂದು ಪ್ರದೇಶದಲ್ಲಿ ವಿಪರೀತ ಗಾಳಿ ಇತ್ತು. ಪ್ರತಿ ಅರ್ಧಗಂಟೆಗೊಮ್ಮೆ ವಾತಾವರಣ ಬದಲಾಗುತ್ತಿತ್ತು. 24 ಗಂಟೆಯೂ ಸೂರ್ಯನ ಬೆಳಕು ಸಿಗಲಿದೆ. ಆದರೆ ಅತೀವ ಗಾಳಿ ನಮ್ಮ ಎಲ್ಲಾ ಲೆಕ್ಕಾಚಾರ ಉಲ್ಟಾ ಮಾಡುತ್ತಿತ್ತು.

ಪ್ರಶ್ನೆ: ಅತ್ಯಂತ ಕಠಿಣ ರಸ್ತೆಗಳಲ್ಲಿ ರೈಡಿಂಗ್ ಮಾಡುವಾಗ ಮೆಂಟಲ್ ಫಿಟ್ನೆಸ್ ಹಾಗೂ ಫಿಸಿಕಲ್ ಫಿಟ್ನೆಸ್ ಎಷ್ಟು ಮುಖ್ಯ?
ಉತ್ತರ: ಮೆಂಟರ್ ಫಿಟ್ನೆಸ್ ಅತ್ಯಂತ ಮುಖ್ಯ. ಇಲ್ಲದೆ ಹೋದಲ್ಲಿ ರೈಡ್ ಯಶಸ್ವಿಯಾಗಿ ಪೂರ್ಣಗೊಳಿಸಲು ಸಾಧ್ಯವಿಲ್ಲ. ಮಾನಸಿಕವಾಗಿ ಅತ್ಯಂತ ಸದೃಢವಾಗಿರಬೇಕು. ಇನ್ನು ದೈಹಿಕ ಸಾಮರ್ಥ್ಯ ಪ್ರತಿಯೊಬ್ಬ ಮೋಟಾರ್‌ಸೈಕಲ್ ರೈಡ್ ಮಾಡುವವನಿಗೂ ಬೇಕು. ಇದರಲ್ಲಿ ಎರಡು ಮಾತಿಲ್ಲ. ಅದರಲ್ಲೂ ಈ ರೀತಿ ಮುಂಜುಗಡ್ಡೆ ತುಂಬಿದ ಪ್ರದೇಶದಲ್ಲಿ ರೈಡ್ ಮಾಡುವಾಗ ಜಾರಿ ಬೀಳುವುದು ಸಾಮಾನ್ಯ. ಹೀಗಾಗಿ ಬಿದ್ದಾಗ ಮತ್ತೆ ಎದ್ದು ರೈಡ್ ಮಾಡುವ ಶಕ್ತಿ ಇರಲೇಬೇಕು. ಇನ್ನು ಅತೀವ ಚಳಿಯಲ್ಲಿ ಗಾಯಗೊಂಡರೆ ಅದರ ನೋವು ಅನುಭವಿಸಿದಾಗಲೇ ತಿಳಿಯಲಿದೆ. 

ರೈಡಿಂಗ್ ಆರಂಭಗೊಂಡಾಗ ಪರ್ವತಗಳು ಸೇರಿದಂತೆ ಪ್ರಕೃತಿಯ ಕಾಣಸಿಕ್ಕಿತ್ತು. ಆದರೆ ಮಧ್ಯಭಾಗಕ್ಕೆ ಬಂದಾಗ ಮಂಜುಗಡ್ಡೆ ಹೊರತುಪಡಿಸಿ ಏನೂ ಇಲ್ಲ. ಸೌತ್ ಫೋಲ್‌ ಸಮುದ್ರಮಟ್ಟಕ್ಕಿಂತ 2,8350 ಮೀಟರ್ ಎತ್ತರವಿತ್ತು. ಇದರಲ್ಲಿ2,500 ಮೀಟರ್  ಮಂಜುಗಡ್ಡಯೇ ಇದೆ. ಅಂದರೆ ಭೂಮಿ ಕೇವಲ 300 ಮೀಟರ್ ಎತ್ತರ, ಇನ್ನು ಈ ಭೂಮಿ ಮೇಲೆ ಸರಿಸುಮಾರು ಎರಡೂವರೆ ಕಿಲೋಮೀಟರ್ ಉದ್ದದಷ್ಟು ದಪ್ಪದ ಮುಂಜುಗಡ್ಡೆ ಹೊದಿಕೆ ಇದೆ. 

ಪ್ರಶ್ನೆ: ಐಟಿ ಕ್ಷೇತ್ರದಿಂದ ನೇರವಾಗಿ ಮೋಟಾರ್‌ಸೈಕಲ್‌ ಕ್ಷೇತ್ರದತ್ತ ನಿಮ್ಮ ಪಯಣ ತಿರುಗಿದ್ದು ಹೇಗೆ?
ಉತ್ತರ: ಬೈಕ್ ರೈಡಿಂಗ್ ಬಹುತೇಕರಿಗೆ ಇಷ್ಟ. ನಾನು ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ. ಈ ವೇಳೆ ರಾಯಲ್ ಎನ್‌ಫೀಲ್ಡ್ ಮಾರ್ಕೆಟಿಂಗ್ ರಿಸರ್ಚ್‌ಗಾಗಿ ಹಲವರನ್ನು ಭೇಟಿಯಾಗಿದ್ದೆ. ಹೀಗೆ ನನ್ನ ಮತ್ತು ರಾಯಲ್ ಎನ್‌ಫೀಲ್ಡ್ ಸಂಬಂಧ ಹತ್ತಿರವಾಯಿತು. ರಾಯಲ್‌ ಎನ್‌ಫೀಲ್ಡ್ ಕಂಪನಿ ಸೇರಿಕೊಂಡೆ. ಅಲ್ಲವರಿಗೆ ಸಣ್ಣ ಸಣ್ಣ ರೈಡಿಂಗ್, ಲಾಂಗ್ ಟ್ರಿಪ್ ಇದ್ದ ರೈಡಿಂಗ್ ಸ್ವರೂಪ ಬದಲಾಯಿತು. ಆಸಕ್ತಿಯೂ ಹೆಚ್ಚಾಯಿತು.

ಪ್ರಶ್ನೆ: ಈಗಿನ ಯುವ ಸಮೂಹಕ್ಕೆ ಲಾಂಗ್ ರೈಡ್, ಸೋಲೋ ರೈಡ್ ಸೇರಿದಂತೆ ಬೈಕ್ ರೈಡ್ ಹವ್ಯಾಸ ಹೆಚ್ಚು. ರೈಡಿಂಗ್ ಆಸಕ್ತಿಯುಳ್ಳವರಿಗೆ ನಿಮ್ಮ ಸಲಹೆ ಏನು?
ಉತ್ತರ: ಹೊಸದಾಗಿ ರೈಡಿಂಗ್ ಆರಂಭಿಸುವವರು ಕನಿಷ್ಠ ಅನುಭವಿಗಳ ಜೊತೆ ರೈಡಿಂಗ್ ಮಾಡಿ. ಸೋಲೋ ರೈಡ್ ಕೂಡ ಉತ್ತಮ. ಆದರೆ ರೈಡ್‌ಗೂ ಮುನ್ನ ಪರಿಸ್ಥಿತಿಗಳ ಅರಿವಿರಬೇಕು. ಮೋಟಾರ್‌ಸೈಕಲ್ ಕುರಿತು ತಿಳಿದಿರಬೇಕು. ಸಮಸ್ಯೆಯಾದಾಗ ನಿಭಾಯಿಸಲು ತಿಳಿದಿರಬೇಕು. ಪ್ರಯಾಣದ ವಿವರ, ಸ್ಥಳದ ಮಾಹಿತಿ, ದಾರಿ ಮಾಹಿತಿ ತಿಳಿದಿದ್ದರೆ ಇತರ ಸಮಸ್ಯೆಗಳಿಲ್ಲದೆ ರೈಡ್ ಮುಗಿಸಬಹುದು.ಮೋಟಾರ್‌ಸೈಕಲಿಂಗ್ ಅನುಭವ ಅತ್ಯಂತ ಹಿತ. ಆದರೆ ಅಷ್ಟೇ ರಿಸ್ಕ್ ಕೂಡ ಇದೆ. ಹೀಗಾಗಿ ಗುಂಪುಗಳಲ್ಲಿ ರೈಡಿಂಗ್ ಮಾಡುವುದು ಉತ್ತಮ. ಪೂರ್ವತಯಾರಿ ಅಷ್ಟೇ ಮುಖ್ಯ.

WhatsApp
Facebook
Telegram
error: Content is protected !!
Scroll to Top