ಗಡಿಗಳಲ್ಲಿ ಹೆಣ್ಮಕ್ಕಳ ಮೇಲೆ ಸೈನಿಕರಿಂದ ಹಲ್ಲೆ ಕರಾಳತೆ ಬಿಚ್ಚಿಟ್ಟ ವಿದ್ಯಾರ್ಥಿನಿಯರು..!

ರಾಜ್ಯ(ಬೆಂಗಳೂರು): ಗಡಿಗಳಲ್ಲಿ ಹೆಣ್ಮಕ್ಕಳ ಮೇಲೆ ದೌರ್ಜನ್ಯ ಆಗುತ್ತಿದೆ. ಗಡಿಗಳಲ್ಲಿ ಸೈನಿಕರೇ ನಮ್ಮ ಮೇಲೆ ದಾಳಿ ಮಾಡಿದ್ರು. ನಮ್ಮ ಮೇಲೆ ಪೆಪ್ಪರ್ ಸ್ಪ್ರೇ ಮಾಡಿದ್ರು. ನಮ್ಮನ್ನು ಗಡಿ ದಾಟದಂತೆ ತಡೆದ್ರು ಎಂದು ಉಕ್ರೇನ್‍ನಿಂದ ವಾಪಸ್ಸಾದ ವಿದ್ಯಾರ್ಥಿನಿಯರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ವಿದ್ಯಾರ್ಥಿನಿಯರಾದ ಶ್ರೇಯಾ ಹಾಗೂ ಸಿಂಧು ಉಕ್ರೇನ್ ಗಡಿಯಲ್ಲಿನ ಭೀಕರತೆ ಬಿಚ್ಚಿಟ್ಟರು. ಭಾರೀ ಸಂಕಷ್ಟದ ಪರಿಸ್ಥಿತಿಯಲ್ಲಿ ಉಕ್ರೇನ್ ಗಡಿ ದಾಟಿ ಬಂದಿದ್ದೇವೆ. ಭಾರತೀಯ ಎಂಬೆಸಿ, ಅಧಿಕಾರಿಗಳು, ನಮ್ಮ ಸೀನಿಯರ್ಸ್ ಸಹಾಯದಿಂದ ನಾವು ಸೇಫಾಗಿ ಬಂದಿದ್ದೇವೆ ಎಂದರು.

ಖಾರ್ಕೀವ್, ಕೀವ್‍ನಲ್ಲಿರುವ ಭಾರತೀಯರು ಸೇಫಾಗಿ ಬರಲಿ. ಪೋಲೆಂಡ್, ಹಂಗೇರಿ, ರೊಮೇನಿಯಾದಲ್ಲಿ ಹೆಚ್ಚು ದಾಳಿ ಆಗ್ತಿದೆ. ದಯವಿಟ್ಟು ಎಂಬೆಸಿ ಆದಷ್ಟು ಬೇಗ ಅಲ್ಲಿರುವ ಜ್ಯೂನಿಯರ್ಸ್ ಅನ್ನು ಕರೆಸಿಕೊಳ್ಳಿ. ಅವರಿಗೆ ಇನ್ನು ಏನೂ ಗೊತ್ತಿಲ್ಲ. ಟ್ರಾನ್ಸ್‍ಪೋರ್ಟ್‍ಗೆ ಅಂತಿರುವ ಏರ್‍ಪೋರ್ಟ್, ಮೆಟ್ರೋ ಸ್ಟೇಷನ್ ಮೇಲೆ ರಷ್ಯಾ ದಾಳಿ ಮಾಡಿದೆ. ಹಂಗೇರಿ, ರೊಮೇನಿಯಾ ಗಡಿಯಲ್ಲಿ ಹೆಣ್ಮಕ್ಕಳ ಮೇಲೆ ಹಲ್ಲೆ ನಡೆದಿದೆ. ಅವರು ಪೆಪ್ಪರ್ ಸ್ಪ್ರೇ ಮಾಡಿದ್ರು. ನಾವು ಸ್ಲೋವೆಕಿಯಾದಿಂದ ಬಂದ್ವಿ. ಅಲ್ಲಿರುವವರನ್ನು ದಯವಿಟ್ಟು ಬೇಗ ಸುರಕ್ಷಿತವಾಗಿ ಕರೆ ತನ್ನಿ ಎಂದು ಮನವಿ ಮಾಡಿಕೊಂಡರು.

WhatsApp
Facebook
Telegram
error: Content is protected !!
Scroll to Top