ಭಟ್ಕಳ; ಪುರಸಭಾ ಅಧ್ಯಕ್ಷ ಪರವೇಜ್ ಖಾಶಿಮ್‌ ನಡೆಸಿರುವ ಭ್ರಷ್ಟಾಚಾರದ ಬಗ್ಗೆ ಜಿಲ್ಲಾಧಿಕಾರಿ ತನಿಖೆ ನಡೆಸಬೇಕು: ಪುರಸಭಾ ಸದಸ್ಯ ಪಾಸ್ಕಲ್‌ಗೊಮ್ಸ ಹೇಳಿಕೆ

ತನ್ನ ಸ್ವಂತ ಕಟ್ಟಡಕ್ಕೆ ಪುರಸಭಾ ಅಧ್ಯಕ್ಷ ಪರವೇಜ್ ಖಾಶಿಮ್‌ ತೆರಿಗೆಯನ್ನೆ ಕಟ್ಟದೆ ಉಳಿಸಿಕೊಂಡಿದ್ದಾರೆ ಪಾಸ್ಕಲ್‌ ಗೋಮ್ಸ ಆಕ್ರೋಶ

ಭಟ್ಕಳ: ತಾಲೂಕ ಪುರಸಭಾ ಅಧ್ಯಕ್ಷ ಪರವೇಜ್ ಖಾಶಿಮ್‌ ಅವರು ಅಭಿವೃದ್ದಿಯ ಹೆಸರಲ್ಲಿ ಭ್ರಷ್ಟಾಚಾರವನ್ನು ನಡೆಸುತ್ತಿದ್ದಾರೆ ಈ ಬಗ್ಗೆ ನಮ್ಮ ಉತ್ತರ ಕನ್ನಡ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಬೇಕು ಎಂದು ಪುರಸಭಾ ಸದಸ್ಯ ಪಾಸ್ಕಲ್‌ ಗೋಮ್ಸ ಹೇಳಿದರು

ಅವರು ತಾಲೂಕಿನ ಖಾಸಗಿ ಹೊಟೆಲ್‌ ಒಂದರಲ್ಲಿ ನಡೆಸಿದ ಪತ್ರಿಕಾಗೋಷ್ಟೀಯನ್ನು ಉದ್ದೇಶಿಸಿ ಮಾತನಾಡಿ ನಮ್ಮ ಭಟ್ಕಳ ಪುರಸಭೆಯಲ್ಲಿ ಅಭಿವೃದ್ದಿಯ ಹೆಸರಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದೆ ಘನ ತ್ಯಾಜ್ಯ ಘಟಕ ಬೀದಿ ದೀಪ ಉಧ್ಯಾನವನ ಮುಂತಾದ ಕಾಮಗಾರಿಯಲ್ಲಿ ಪುರಸಭಾ ಅಧ್ಯಕ್ಷ ಪರವೇಜ್ ಖಾಶಿಮ್‌ ಅವರು ಭ್ರಷ್ಟಾಚಾರವನ್ನು ನಡೆಸಿದ್ದಾರೆ ಉದಾಹರಣೆ ಬೀದಿದೀಪಗಳನ್ನು ಖರಿದಿಸುವಾಗ ಬ್ರಾಂಡೆಡ್‌ ಲೈಟ್ಸಗಳನ್ನು ಖರಿದಿಸದೆ ಚೈನಾ ಮೇಡ್‌ ಲೈಟ್ಗಳನ್ನು ಖರಿದಿಸಿದ್ದಾರೆ , ಹಾಗೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಪಾರ್ಕ ನಿರ್ಮಾಣದ ಹೆಸರಲ್ಲಿ ಅವ್ಯವಹಾರ ನಡೆಸಿದ್ದಾರೆ ಇಲ್ಲಿ ಖರ್ಚಾಗಿರುವುದು ಅಂದಾಜು ಎರಡ ರಿಂದ ಮೂರು ಲಕ್ಷ ಖರ್ಚಾಗಿರ ಬಹುದು ಆದರೆ ಅಧ್ಯಕ್ಷರು 10 ಲಕ್ಷ ಬಿಲ್‌ ಮಾಡಿ ಪಾರ್ಕಿನಲ್ಲಿ ಐದು ಲಕ್ಷದ ಬೋರ್ಡಹಾಕಿದ್ದಾರೆ ಇನ್ನು ಘನತ್ಯಾಜ್ಯ ಘಟಕದ ಕಾಮಗಾರಿಯಲ್ಲಿ ಏಂಟು ಕೋಟಿ ಅವ್ಯವಹಾರ ನಡೆದಿರುವುದು ಗಮನಕ್ಕೆ ಬರುತ್ತಿದ್ದೆ ಅಲ್ಲದೆ ಈ ಅಧ್ಯಕ್ಷರು ತಮ್ಮ ಕಟ್ಟಡಕ್ಕೆ ಲಕ್ಷಾಂತರ ಟ್ಯಾಕ್ಸಕಟ್ಟದೆ ವಂಚಿಸುತ್ತಿದ್ದಾರೆ ಈ ಎಲ್ಲಾ ಘಟನೆಯ ಬಗ್ಗೆ ನಾನು ಸಭೆಯಲ್ಲಿ ದ್ವನಿ ಎತ್ತಿದರೆ ನನಗೆ ಅಧ್ಯಕ್ಷರು ಸಂವಿದಾನ ಬಾಹಿರ ಶಬ್ದವನ್ನು ನನ್ನ ಮೇಲೆ ಪ್ರಯೋಗಿಸಿದ್ದಾರೆ ಈ ಎಲ್ಲಾ ಭ್ರಷ್ಟಾಚಾರದ ಬಗ್ಗೆ ಜಿಲ್ಲಾಧಿಕಾರಿಗಳು ಕುದ್ದಾಗಿ ನಿಂತು ಪರೀಶಿಲಿಸಿ ಸೂಕ್ತ ಕ್ರಮ ಕೈಗೊಳ್ಳ ಬೇಕು ಎಂದು ಹೇಳಿದರು

ಪತ್ರಿಕಾಗೊಷ್ಟೀಯಲ್ಲಿ ಹಾಜರಿದ್ದ ನಾಗರಿಕ ವೇದಿಯ ತಾಲೂಕ ಅಧ್ಯಕ್ಷ ದೇವಯ್ಯ ನಾಯ್ಕ ಮಾತನಾಡಿ ಈ ಹಿಂದೆ ಪುರಸಭಾ ಅಧ್ಯಕ್ಷರು ತಾವು ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ನಮ್ಮ ನಾಗರಿಕಾ ವೇದಿಕೆಯ ಬಗ್ಗೆ ಕೇವಲವಾಗಿ ಮಾತನಾಡಿದ್ದಾರೆ ಮುಂದಿನ ದಿನಗಳಲ್ಲಿ ನಾವು ಇದಕ್ಕೆ ತಕ್ಕ ಉತ್ತರವನ್ನು ನೀಡುತ್ತೆವೆ ಎಂದು ಹೇಳಿದರು

ಈ ಸಂದರ್ಭ ನಾಗರೀಕಾ ವೇದಿಕೆಯ ಗೌರವ ಅಧ್ಯಕ್ಷರಾದ ದತ್ತಾತ್ರೆಯ ನಾಯ್ಕ ಉಪಸ್ಥಿತರಿದ್ದರು.

WhatsApp
Facebook
Telegram
error: Content is protected !!
Scroll to Top