ಬೀದಿ ನಾಯಿಗಳ ತವರು ಮನೆಯಾದ ಭಟ್ಕಳ ಪುರಸಭೆ..!

ಭಟ್ಕಳ :ಪುರಸಭಾ ಕಟ್ಟಡದಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು , ವರ್ಷಗಳಿಂದ ಬೀದಿ ನಾಯಿಗಳು ಬೇಕಾಬಿಟ್ಟಿಯಾಗಿ ಓಡಾಡಿಕೊಂಡು ಸಾರ್ವಜನಿಕರಿಗೆ ತೊಂದರೆ ನೀಡುತ್ತಿವೆ . ಊರಿಗೆ ಬುದ್ದಿ ಹೇಳುತ್ತಿದ್ದ ಪುರಸಭೆ ತನ್ನ ನ್ಯೂನತೆಯನ್ನು ಸರಿ ಪಡಿಸಿಕೊಳ್ಳದ ಹಿನ್ನೆಲೆಯಲ್ಲಿ ವಿ ದಿ ಭಟ್ಕಳಿಸ್ ಎಂಬ ಸಾಮಾಜಿಕ ಸಂಘಟನೆಯ ಮೂಲಕ ಬುದ್ದಿ ಹೇಳಿಸಿಕೊಳ್ಳುವ ನಾಚಿಕೆಗೇಡಿನ ಪರಿಸ್ಥಿತಿಯನ್ನು ತಲುಪಿದೆ

ಪುರಸಭಾ ಕಚೇರಿಗಳ ಆವರಣ ಮಾತ್ರವಲ್ಲ ಭಟ್ಕಳ ಪುರಸಭಾ ಕಛೇರಿ ಒಳಗೂ ಬೀದಿ ನಾಯಿಗಳು ರಾಜಾರೋಶವಾಗಿ ತಿರುಗಾಡುತ್ತಿದೆ . ಪುರಸಭೆಗೆ ದಿನ ನಿತ್ಯವು ನೂರಾರು ಮಂದಿ ತಮ್ಮ ಕಚೇರಿ ಕೆಲಸಕ್ಕೆಂದು ಬರುತ್ತಾರೆ . ಅಷ್ಟೇ ಅಲ್ಲದೆ ಮಹಿಳೆಯರು , ಚಿಕ್ಕಮಕ್ಕಳೂ , ವಯೋವೃದ್ಯರು ಕೂಡ ಇರುತ್ತಾರೆ .
ಈ ನಾಯಿಗಳಿಂದ ಬಹಳಷ್ಟು ಜನರು ತೊಂದರೆಯನ್ನು ಅನುಭವಿಸಬೇಕಾಗಿ ಬಂದಿದೆ ಹಾಗೂ ಪುರಸಭಾ ಕಟ್ಟಡದ ಹಿಂಬಾಗದಲ್ಲಿ ಹಲವು ವರ್ಷಗಳಿಂದ ಜನರು ಬಹಿರಂಗವಾಗಿ ದಿನವಿಡೀ ನಿಂತು ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ .

ತನ್ನ ಕಾಲ ಬುಡದಲ್ಲೆ ಸ್ವಚ್ಚತೆ ಕಾಪಾಡಲು ವಿಪಲವಾದ ಪುರಸಭೆ..!


ಇದರಿಂದ ಆ ಭಾಗದಲ್ಲಿ ಓಡಾಡುವವರು ಮೂಗು ಮುಚ್ಚಿಕೊಂಡು ಓಡಾಡುವಂತಹ ಸ್ಥಿತಿ ನಿರ್ಮಾಣಗೊಂಡಿದೆ . ಅಷ್ಟೇ ಅಲ್ಲದ ರಸ್ತೆ ಬದಿ ಹೋಗುವ ಮಹಿಳೆಯರು ಇದರಿಂದ ಮುಜುಗರ ಅನುಭವಿಸಬೇಕಾಗಿ ಬಂದಿದೆ ಹಾಗೂ ಇದೊಂದು ಸಾರ್ವಜನಿಕ ಮೂತ್ರಾಲಯವಾಗಿ ಮಾರ್ಪಟ್ಟಿದ್ದು ಇದರಿಂದಾಗಿ ಟಿಎಂಸಿ ಕಟ್ಟಡ ಹಾನಿಗೊಳ್ಳುತ್ತದೆ , ಇಡೀ ಪ್ರದೇಶ ಗಬ್ಬು ನಾರಲು ಆರಂಭಿಸಿದ್ದು ಮುಂದೊಂದು ದಿನ ಹಲವು ಸಾಂಕ್ರಮಿಕ ರೋಗಗಳು ಹರಡು ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ .
ನಗರದಲ್ಲಿ ಸ್ವಚ್ಛತೆ ಕಾಪಾಡುವುದು , ಮತ್ತು ಅದನ್ನು ನೈರ್ಮಲವಾಗಿರುವಂತೆ ನೋಡಿಕೊಳ್ಳುವುದು ಪುರಸಭೆಯ ಕರ್ತವ್ಯ ಮತ್ತು ಪ್ರಮುಖ ಗುರಿಯಾಗಿದೆ.
ಆದರೆ ಈ ರೀತಿಯಾಗಿ ನಗರದ ನೈರ್ಮಲವು ಹಾಳಾಗಲು ನಿಜಕ್ಕೂ ಇಲ್ಲಿನ ಪುರಸಭೆಯೊಂಬುದು ಇದಯೇ ಎಂಬ ಪ್ರಶ್ಣೆ ಉದ್ಬವವಾಗುತ್ತದೆ.
ದೇಶದ ಪ್ರಧಾನಿಯವರು ಸ್ವಚ್ಛಭಾರತದ ಕನಸನ್ನು ಕಂಡವರು . ಅದಕ್ಕಾಗಿ ಅಭಿಯಾನವನ್ನೇ ಹಮ್ಮಿಕೊಂಡಿದ್ದಾರೆ . ಆದರೆ ಭಟ್ಕಳದ ಇಂದಿನ ಪರಿಸ್ಥಿತಿಗಳನ್ನು ಅವಲೋಕಿಸದರೆ ಭಟ್ಕಳ ಪುರಸಭೆಯಲ್ಲಿ ಸ್ವಚ್ಛಭಾರತದ ಅಭಿಯಾನ ಕೇವಲ ಘೋಷಣೆಗೆ ಮಾತ್ರ ಸೀಮಿತಗೊಂಡಿದೆಯೆ ಎಂಬ ಅನುಮಾನಗಳು ಹುಟ್ಟಿ ಕೊಳ್ಳುತ್ತಿದೆ ಎಂದು ವಿ ದಿ ಭಟ್ಕಳ ಆಕ್ರೋಶ ವ್ಯಕ್ತಪಡಿಸಿದೆ.

ಪುರಸಭೆ ತನ್ನ ಈ ಅವ್ಯವಸ್ಥೆಯನ್ನು‌ ಸರಿಪಡಿಸಿಕೊಳ್ಳುವಂತೆ ವಿ ದಿ ಭಟ್ಕಳಿಸ್ ಇಂದ ಬುದ್ದಿವಾದ..!

ಈ ಸಾಮಾಜಿಕ ಸಂಘನೆಯಿಂದ ಮುಖಭಂಗ ಅನುಭವಿಸಿದ ಪುರಸಭೆಗೆ ಮಾಧ್ಯಮದವರು ಈ ಬಗ್ಗೆ ಪ್ರಶ್ನಿಸಿದಾಗ ಇದಕ್ಕೆ ಪ್ರತಿಕ್ರಿಯಿಸಿದ ಪುರಸಭೆ ಮುಖ್ಯಾಧಿಕಾರಿ ನಮಗೆ ಬೀದಿ ನಾಯಿಗಳು ಪುರಸಭೆಯಲ್ಲಿ ಸಂಚರಿಸುವ ಬಗ್ಗೆ ಮಾಹಿತಿ ಇತ್ತು ಆದರೆ ಪಾದಾಚಾರಿಗಳು ಮೂತ್ರ ವಿಸರ್ಜನೆ ಮಾಡುವ ಬಗ್ಗೆ ಮಾಹಿತಿ ಇರಲಿಲ್ಲವಾಗಿತ್ತು ಎಂಬ ಹಾಸ್ಯಾಸ್ಪದದ ಉತ್ತರವನ್ನು ಪುರಸಭಾ ಮುಖ್ಯಾಧಿಕಾರಿಗಳು ನೀಡುತ್ತಾ ಇಲ್ಲಿ ಮುಖ್ಯವಾಗಿ ಗಮನಿಸ ಬೇಕಾದ ಅಂಶ ಎನೆಂದರೆ ಪುರಸಭೆಯ ಈ ಅವ್ಯವಸ್ಥೆಯ ಬಗ್ಗೆ ಸಾರ್ವಜನಿಕರಿಗೆ ಸಾಮಾಜಿಕ ಕಳಕಳಿಯನ್ನು ಹೊಂದಿರುವ ಸಂಘಟನೆಗಳಿಗೆ ಮಾಹಿತಿ ಇರುತ್ತದೆ ಆದರೆ ಊರಿಗೆ ಸ್ವಚ್ಚತೆಯ ಪಾಠ ಮಾಡುವ ಪುರಸಭೆಗೆ ಇರಲಿಲ್ಲ ಎಂದರೆ ಭಟ್ಕಳ ಪುರಸಭೆ ಎಷ್ಟು ಬೇಜವಬ್ದಾರಿ ತನವನ್ನು ತೋರಿಸುತ್ತಿದೆ ಎಂಬುವುದು ತಿಳಿದು ಬರುತ್ತದೆ ಹಾಗಾದರೆ ಇಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳು ಪುರಸಭಾ ಜನ ಪ್ರತಿನಿದಿಗಳಿಗೆ ಜವಾಬ್ದಾರಿ ಎಂಬ ಶಬ್ದದ ಅರ್ಥವೆ ತಿಳಿದಿಲ್ಲವೆ.

ಈಗ ಈ ಪುರಸಭೆ ತನ್ನ ಬೆಜವಬ್ದಾರಿಗೆ ವಿ ದಿ ಭಟ್ಕಳಿಸ್ ಸಂಘಟನೆಯಿಂದ ಬುದ್ದಿ ಹೇಳಿಸಿಕೊಂಡು ತಿವೃತರದ ಮುಖ ಭಂಗಕ್ಕೆ ಒಳಗಾಗಿದೆ ಇನ್ನು ಮುಂದಾದರು ನಮ್ಮ ಭಟ್ಕಳ ಪುರಸಭೆ ಎಚ್ಚೆತ್ತುಕೊಂಡು ತನ್ನ ಕರ್ತವ್ಯವನ್ನು ನಿಷ್ಟೇಯಿಂದ ಪಾಲಿಸುತ್ತದೆಯೋ ಎಂದು ಕಾದು ನೊಡಬೇಕಾಗಿದೆ.

ಈ ಸಂರ್ಭದಲ್ಲಿ ಅಡ್ಮಿಸ್‌ ವಿ,ದಿ.ಭಟ್ಕಲೀಸ್‌ ಸಾಮಾಜಿಕ ಮಾಧ್ಯಮದ ಸದಸ್ಯರಾದ ಅಬ್ದುಲ್‌ ಬಾಸಿತ್‌ ಇಕ್ಕೇರಿ , ಎಸ್.ಎಂ.ಜುಬೇರ್‌ ಮೌಲಾನ. ಯಾಸಿರ್ ಬರ್ಮಾವರ್‌ ಹಾಗೂ ಸದಸ್ಯರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top