ಉಕ್ರೇನ್‌ಗಾಗಿ ಹೋರಾಡಲು ಸ್ವಯಂಪ್ರೇರಿತರಾಗಿ ಮುಂದೆ ಬಂದ 70 ಜಪಾನಿಯರು.

ವಿದೇಶ: ರಷ್ಯಾ ಉಕ್ರೇನ್​ ನಡುವಿನ ಯುದ್ಧ(Russia Ukraine War) ಮುಂದುವರೆದಿದೆ. ಸತತ ಏಳನೇ ದಿನಕ್ಕೆ ಯುದ್ಧ ಕಾಲಿಟ್ಟಿದೆ. ಈಗಾಗಲೇ ಕೀವ್​ ಮತ್ತು ಖಾರ್ಕೀವ್​ಗಳತ್ತ ರಷ್ಯಾ ಸೇನೆ ನುಗ್ಗಿದ್ದು, ನಾಗರಿಕರನ್ನು ಇನ್ನಷ್ಟು ಆತಂಕಕ್ಕೀಡು ಮಾಡಿದೆ. ಉಕ್ರೇನ್​ ಅಧ್ಯಕ್ಷ ಝೆಲೆನ್ಸ್ಕಿ ನಾಗರಿಕರಿಗೂ ಶಸ್ತ್ರಾಸ್ತ್ರ ನೀಡಿದ್ದು ದೇಶಕ್ಕಾಗಿ ಹೋರಾಡಲು ನೂರಾರು ಯುವಕರು ಪಣತೊಟ್ಟಿದ್ದಾರೆ. ಈ ನಡುವೆ ಜಪಾನ್ ​(Japan)ನ ಸುಮಾರು 70 ಯುವಕರು ಸ್ವಯಂಪ್ರೇರಿತರಾಗಿ ಉಕ್ರೇನ್​ ಪರವಾಗಿ ಹೋರಾಡಲು ಬಂದಿದ್ದಾರೆ ಎಂದು ಮಾಧ್ಯಮಗಳ ವರದಿ ತಿಳಿಸಿದೆ.

ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಅಂತರರಾಷ್ಟ್ರೀಯ ಸೈನ್ಯ ರಚನೆಗೆ ಭಾನುವಾರ ಕರೆ ನೀಡಿದರು, ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾಕ್ಕೆ ದೇಶಕ್ಕಾಗಿ ಹೋರಾಡುವಂತೆ ಕರೆ ನೀಡಿದರು. ಸಾಮಾಜಿಕ ಜಾಲತಾಣ ಟ್ವಿಟರ್​ನಲ್ಲಿ ಕರೆ ನೀಡಿದ್ದನ್ನು ಗಮನಿಸಿ ಜಪಾನ್​ನ ಸುಮಾರು 70 ಮಂದಿ ಪುರುಷರು ಉಕ್ರೇನ್​ ಬೆಂಬಲಕ್ಕೆ ನಿಂತಿದ್ದಾರೆ. ಅದರಲ್ಲಿ 50 ಮಂದಿ  ಜಪಾನ್‌ನ ಸ್ವ-ರಕ್ಷಣಾ ಪಡೆಗಳ ಮಾಜಿ ಸದ್ಯರು ಮತ್ತು ಫ್ರೆಂಚ್ ಫಾರಿನ್ ಲೀಜನ್‌ನ ಇಬ್ಬರು ಅನುಭವಿಗಳು – ಸ್ವಯಂಸೇವಕರಾಗಿ ಹೋರಾಡಲು ಅರ್ಜಿ ಸಲ್ಲಿಸಿದ್ದಾರೆ ಎಂದು ಮೈನಿಚಿ ಶಿಂಬುನ್ ದೈನಿಕವು ಟೋಕಿಯೊ ಕಂಪನಿಯನ್ನು ಉಲ್ಲೇಖಿಸಿ ಹೇಳಿದೆ.

ಫೆ,28ರಂದು ಉಕ್ರೇನ್​ ರಾಯಭಾರ ಕಚೇರಿಯು ಜಪಾನ್​ಗೆ ಧನ್ಯವಾದ ಸಲ್ಲಿಸಿದೆ. ಆದರೆ ಒಂದು ನಿಬಂಧನೆಯನ್ನು ವಿಧಿಸಿದೆ. ಅದೇನೆಂದರೆ, ಯುದ್ಧದದಲ್ಲಿ ತೊಡಗಲು ಬಯಸುವವರು ಜಪಾನ್​ನ ಸ್ವರಕ್ಷಣಾ ಪಡೆಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿರಬೇಕು ಅಥವಾ ವಿಶೇಷ ತರಬೇತಿ ಪಡೆದಿರಬೇಕು ಎಂದಿದೆ. ಬುಧವಾರ ಜಪಾನ್​ನಲ್ಲಿರುವ ಉಕ್ರೇನ್​ ರಾಯಭಾರ ಕಚೇರಿಯು, ಉಕ್ರೇನ್​ಗಾಗಿ ಐಟಿ, ವೈದ್ಯಕೀಯ ಮತ್ತು ಅಗ್ನಿಶಾಮಕ ದಳದಲ್ಲಿ ಅನುಭವವುಳ್ಳವರು ಬೇಕಾಗಿದ್ದಾರೆ ಎಂದು ಟ್ವೀಟ್​ ಮಾಡಿದೆ. ಆದರೆ ಉಕ್ರೇನ್​ಗೆ ಹೋಗಿಯೇ ಕೆಲಸಮಾಡಬೇಕೆ ಎನ್ನುವ  ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ನೀಡಿಲ್ಲ.

ಜಪಾನ್​ ಸರ್ಕಾರ ಯಾವುದೇ ಕಾರಣಕ್ಕೂ ಉಕ್ರೇನ್​ಗೆ ಪ್ರಯಾಣ ಮಾಡದಿರಿ ಎಂದು ನಾಗರಿಕರಿಗೆ ಸೂಚನೆ ನೀಡಿದೆ. ಮುಖ್ಯ ಕ್ಯಾಬಿನೆಟ್ ಕಾರ್ಯದರ್ಶಿ ಹಿರೋಕಾಜು ಮಾಟ್ಸುನೊ ಸ್ವಯಂ ಸೇವಕರಾಗಿ ಹೊರಟವರಿಗೆ ಎಚ್ಚರಿಕೆ ನೀಡಿದ್ದಾರೆ. ಜತೆಗೆ ಜಪಾನ್​ನಲ್ಲಿರುವ ಉಕ್ರೇನ್​ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿದ್ದೇವೆ  ಸ್ವಯಂಸೇವಕರನ್ನು ಸ್ಥಳಾಂತರಿಸುವ ಬಗ್ಗೆ ಚರ್ಚಿಸಿ ಮಾಹಿತಿ ನೀಡಲಾಗುವುದು ಎಂದು ಜಪಾನ್​ ಸರ್ಕಾರ ತಿಳಿಸಿದೆ.

ಇನ್ನೂ ರಷ್ಯಾ ವಿರುದ್ಧ ಹೋರಾಟಕ್ಕೆ ಸ್ಟಾನಿಸ್ಲಾವ್ ಹೋರುನಾ ಕೂಡ ಮುಂದೆ ಬಂದಿದ್ದಾರೆ. ಒಲಿಂಪಿಕ್ ಪದಕ ವಿಜೇತ ಸ್ಟಾನಿಸ್ಲಾವ್  ರಷ್ಯಾ ವಿರುದ್ಧ ಹೋರಾಟಕ್ಕೆ ಕೈಜೋಡಿಸಿದ್ದಾರೆ.  ಸ್ಟಾನಿಸ್ಲಾವ್ ಉಕ್ರೇನ್​ನ ಓಲಂಪಿಕ್ಸ್​ನಲ್ಲಿ ಕಳೆದ ಬಾರಿ ಕಂಚಿನ ಪದಕ ಗೆದ್ದಿದ್ದರು.

WhatsApp
Facebook
Telegram
error: Content is protected !!
Scroll to Top