ಪ್ರತಿ ಲೀಟರ್ ಬೆಲೆಯಲ್ಲಿ 2 ರೂಪಾಯಿ ಹೆಚ್ಚಿಸಿದ AMUL, ನಾಳೆಯಿಂದಲೇ ಹೊಸ ದರ ಅನ್ವಯ

ರಾಜ್ಯ: ಅಮುಲ್ (Amul) ಹಾಲಿನ ದರವನ್ನು ಮತ್ತೊಮ್ಮೆ ಹೆಚ್ಚಿಸಿದೆ. ದೇಶಾದ್ಯಂತ ಹಾಲಿನ ದರವನ್ನು ಲೀಟರ್‌ಗೆ 2 ರೂಪಾಯಿ ಹೆಚ್ಚಿಸಲು ಕಂಪನಿ ನಿರ್ಧರಿಸಿದೆ. ಹೊಸ ದರಗಳು ನಾಳೆಯಿಂದ ಅಂದರೆ ಮಾರ್ಚ್ 1 ರಿಂದ ಅನ್ವಯಿಸಲಿವೆ. ಹೊಸ ಬೆಲೆ (Amul Milk New Price) ಜಾರಿಯಾದ ನಂತರ ಅಹಮದಾಬಾದ್ ಮತ್ತು ಸೌರಾಷ್ಟ್ರ ಮಾರುಕಟ್ಟೆಗಳಲ್ಲಿ ಅಮುಲ್ ಗೋಲ್ಡ್ ಹಾಲಿನ ಬೆಲೆ ಅರ್ಧ ಲೀಟರ್ ಗೆ 30 ರೂ. ಅಮುಲ್ ತಾಜಾ ಹಾಲಿನ ಬೆಲೆ ಅರ್ಧ ಲೀಟರ್ ಗೆ 24 ರೂ ಮತ್ತು ಅಮುಲ್ ಶಕ್ತಿ ಹಾಲಿನ ಬೆಲೆ ಅರ್ಧ ಲೀಟರ್ಗೆ 27 ರೂ.ಆಗಿದೆ.

ಬಿಹಾರದ ಕುರಿತು ಹೇಳುವುದಾದರೆ, ಪಾಟ್ನಾದಲ್ಲಿ 56 ರೂ.ಗೆ ಮಾರಾಟವಗುತ್ತಿದ್ದ  ಅಮುಲ್ ಗೋಲ್ಡ್ ಬೆಲೆ ಈಗ 58 ರೂ.ಗೆ ಏರಿಕೆಯಾಗಿದೆ. 49 ರೂ.ಗೆ ಮಾರಾಟವಾಗುತ್ತಿದ್ದ ಅಮುಲ್ ಶಕ್ತಿಯ ಬೆಲೆ ಮಾರ್ಚ್ 1 ರಿಂದ ಪಾಟ್ನಾದಲ್ಲಿ 51 ರೂ.ಗೆ ಸಿಗಲಿದೆ. ತಾಜಾ ಹಾಲಿನ ದರ ಲೀಟರ್‌ಗೆ 44 ರೂ.ನಿಂದ 46 ರೂ.ಗೆ ಏರಿಕೆಯಾಗಿದೆ. ಹಾಲು ಹೊರತುಪಡಿಸಿ ಹಾಲಿನ ಉತ್ಪನ್ನಗಳ (Amul Milk Products) ಬೆಲೆಯಲ್ಲಿ ಅಮೂಲ್ ಯಾವುದೇ ಏರಿಕೆಯನ್ನು ಮಾಡಿಲ್ಲ.

ಇನ್ನೂರು ಗ್ರಾಂ ಮೊಸರಿನ ಬೆಲೆ ಮೊದಲಿನಂತೆ 15 ರೂ., 400 ಗ್ರಾಂ ಮೊಸರು ಪ್ಯಾಕೆಟ್ ಬೆಲೆ 28 ರೂ. ಮತ್ತು ಒಂದು ಕಿಲೋಗ್ರಾಂ ಮೊಸರು ಬೆಲೆ 63 ರೂ. ಮುಂದುವರೆಯಲಿದೆ(Business News In Kannada). ಅದೇ ರೀತಿ ಮಾರುಕಟ್ಟೆಯಲ್ಲಿ ಲಸ್ಸಿ ರೂ.10 ಪ್ಯಾಕೆಟ್ ಹಾಗೂ ಪನೀರ್ ರೂ.76ಕ್ಕೆ ಇನ್ನೂರು ಗ್ರಾಂ ಹಾಗೂ ಒಂದು ಕಿಲೋ ರೂ.352ಕ್ಕೆ ಸಿಗಲಿದೆ.

WhatsApp
Facebook
Telegram
error: Content is protected !!
Scroll to Top