ಶ್ರೀ ಮಾರಿಕಾಂಬಾ ಜಾತ್ರೆ ಯೋಜನೆಗಳಿಗೆ ಶಿರಸಿ ನಗರಸಭೆಯಿಂದ ಚಾಲನೆ..!

ಶಿರಸಿ : ಶ್ರೀ ಮಾರಿಕಾಂಬಾ ಜಾತ್ರೆ 2022 ಕ್ಕೆ ಅಗತ್ಯವಿರುವ ಪೂರ್ವ ಭಾವಿ ಕ್ರಮಗಳನ್ನು ಶಿರಸಿ ನಗರಸಭೆ ಯಿಂದ ಕೈಗೊಳ್ಳಲಾಗಿದ್ದು, ಹೊಸದಾಗಿ ಹಲವು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ.

ನಗರದ ಪ್ರಮುಖ ಸ್ಥಳದಲ್ಲಿ ತಾತ್ಕಾಲಿಕವಾಗಿ 16 ಸಿಸಿಟವಿ ಕ್ಯಾಮರಾ ಆಳವಡಿಕೆ ಮಾಡಲಾಗಿದೆ. ಐದು ಕಡೆಗೆ ಫೇಸ್ ರೆಕಗ್ನೈಸ್ಡ್ ಕ್ಯಾಮರಾ ಆಳವಡಿಕೆ ಮಾಡಲಾಗುತ್ತಿದ್ದು, ಸಾರ್ವಜನಿಕರ ರಕ್ಷಣೆಗಾಗಿ 6 ಸ್ಥಳದಲ್ಲಿ ವಾಚ್ ಟವರ್ ನಿರ್ಮಿಸಲಾಗುತ್ತಿದೆ. ಅದೇ ರೀತಿ 110 ಹೊಸ ದೀಪ ಖರೀದಿಸಲಾಗುತ್ತಿದೆ.

ನಗರದ 12 ಸ್ಥಳದಲ್ಲಿ ದಿನದ 24 ಗಂಟೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದ್ದು ಹಳೆ ಬಸ್ ನಿಲ್ದಾಣದ ಸಮೀಪ ಪೊಲೀಸ್ ಕಂಟ್ರೋಲ್ ರೂಮ್ ಶೆಡ್ ನಿರ್ಮಾಣವಾಗಲಿದೆ. ಇನ್ನು ಜಾತ್ರಾ ಮಹೋತ್ಸವ ಬಂದೋಬಸ್ತ್ ಸಲುವಾಗಿ ಪೊಲೀಸ್ ಸಿಬ್ಬಂದಿಯವರಿಗೆ ನೀರಿನ ವ್ಯವಸ್ಥೆ ಕಲ್ಪಿಸಲಾಗಿದ್ದು, ನಗರದ ಪ್ರಮುಖ ಸ್ಥಳದಲ್ಲಿ ಬ್ಯಾರಿಕೇಡ್ ಆಳವಡಿಕೆ ಮಾಡಲಾಗುತ್ತಿದೆ.

ಅದೇ ರೀತಿ ತಾತ್ಕಾಲಿಕವಾಗಿ 14 ಶೌಚಾಲಯ ನಿರ್ಮಿಸಲಾಗುತ್ತಿದೆ. ನಗರದ ಜಾತ್ರಾ ಸ್ಥಳದ ಕಾರಂಜಿಗಳಿಗೆ ವಿದ್ಯುತ್ತೀಕರಣ ಹಾಗೂ ಸುಣ್ಣ ಬಣ್ಣ ನಡೆಯಲಿದೆ. ಮುಖ್ಯವಾಗಿ ರಾಯಪ್ಪ ಹುಲೇಕಲ್ ಶಾಲೆ ಪಕ್ಕದಲ್ಲಿ, ಝೂ ಸರ್ಕಲ್ ಬಳಿ ಇರುವ ಅರಣ್ಯ ಡಿಪೋ, ಟಿಎಸ್ಎಸ್ ಹಾಸ್ಟೆಲ್ ಹಾಗೂ ಯೋಗ ಮಂದಿರ, ಮಾರಿಕಾಂಬಾ ಜೂನಿಯರ್ ಕಾಲೇಜು ಸೇರಿ ಒಟ್ಟು 10 ಕಡೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಮಾ.12 ರಿಂದ 14 ರವರೆಗೆ ಅಂಗಡಿ ಹರಾಜು ಪ್ರಕ್ರಿಯೆ ಬಹಿರಂಗವಾಗಿ ನಡೆಯಲಿದೆ. ಈ ಬಗ್ಗೆ ವಿವಿಧ ಅಧಿಕಾರಿ ಗಳನ್ಮು ಒಂದೊಂದು ಕೆಲಸಕ್ಕೆ ಮೇಲ್ವಿಚಾರಕರನ್ನಾಗಿ ನೇಮಕ ಮಾಡಲಾಗಿದೆ.

WhatsApp
Facebook
Telegram
error: Content is protected !!
Scroll to Top