ಏರಿಕೆ ಕಂಡ ಎಲ್​ಪಿಜಿ ಗ್ಯಾಸ್, ಮುಂದಿನ ವಾರ ಕಾದಿದೆ ಮತ್ತೊಂದು ಶಾಕ್!

ದೇಶ(ನವದೆಹಲಿ): ರಷ್ಯಾ ಮತ್ತು ಉಕ್ರೇನ್​ (Russia-Ukraine War)ನಡುವೆ ಯುದ್ಧ ನಡೆಯುತ್ತಿರುವ ಪರಿಣಾಮ ಇತ್ತ ಭಾರತದಲ್ಲಿ ಪೆಟ್ರೋಲ್-ಡೀಸೆಲ್(Petrol-Diesel), ಚಿನ್ನ-ಬೆಳ್ಳಿ(Silver-Gold) ಹಾಗೂ ಎಲ್​ಪಿಜಿ ಸಿಲಿಂಡರ್(LPG Gas Cylinder) ಬೆಲೆ ಹೆಚ್ಚಾಗುತ್ತಿದೆ. ಷೇರು ಮಾರುಕಟ್ಟೆಯ ಮೇಲೂ ರಷ್ಯಾ-ಉಕ್ರೇನ್ ಯುದ್ಧದ ಪ್ರಭಾವ ಬೀರಿದಂತಿದೆ. ಹೀಗಾಗಿ ಷೇರು ಮಾರುಕಟ್ಟೆಯಲ್ಲಿ(Share Market) ಅಲ್ಲೋಲ-ಕಲ್ಲೋಲವಾಗುತ್ತಿದೆ.

ಮಾರ್ಚ್ 1ರಂದು ಎಲ್​ಪಿಜಿ ಸಿಲಿಂಡರ್ ಬೆಲೆ 105 ರೂ. ಹೆಚ್ಚಾಗಿದೆ. ಸದ್ಯ ವಾಣಿಜ್ಯ ಎಲ್​​ಪಿಜಿ ಸಿಲಿಂಡರ್​ ಬೆಲೆ ಮಾತ್ರ ಏರಿಕೆಯಾಗಿದ್ದು, ಮುಂದಿನ ವಾರ ಗೃಹ ಬಳಕೆಯ ಎಲ್​ಪಿಜಿ ಸಿಲಿಂಡರ್ ಬೆಲೆಯೂ ಏರಿಕೆಯಾಗಲಿದೆ. ಮಾರ್ಚ್​ 7ರಂದು ಗೃಹೋಪಯೋಗಿ ಎಲ್​ಪಿಜಿ ಸಿಲಿಂಡರ್ ಬೆಲೆ ಹೆಚ್ಚಾಗಲಿದೆ.

ಉತ್ತರ ಪ್ರದೇಶದಲ್ಲಿ ಮಾರ್ಚ್​​ 3ರಂದು 6ನೇ ಹಂತದ ಮತದಾನ ನಡೆಯಲಿದೆ. ಮಾರ್ಚ್​ 7ರಂದು 7ನೇ ಹಂತದ ಚುನಾವಣೆ ನಡೆದಯಲಿದೆ. ಹೀಗಾಗಿ ಚುನಾವಣೆ ಮುಗಿದ ಬಳಿಕ ಎಲ್​ಪಿಜಿ ಸಿಲಿಂಡರ್ ಬೆಲೆ ಹೆಚ್ಚಿಸುವ ಪ್ಲ್ಯಾನ್​ ಸರ್ಕಾರದ್ದಾಗಿದೆ. ಅದರಂತೆ ಮಾರ್ಚ್​ 7ರ ಬಳಿಕ ಗೃಹ ಬಳಕೆಯ ಎಲ್​ಪಿಜಿ ಸಿಲಿಂಡರ್ ಬೆಲೆ ಇನ್ನೂ ದುಬಾರಿಯಾಗಲಿದೆ.

ಅಕ್ಟೋಬರ್ 6, 2021ರಿಂದ ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಅಂದರೆ ಏರಿಕೆಯೂ ಆಗಿಲ್ಲ, ಇಳಿಕೆಯೂ ಆಗಿಲ್ಲ. ಆದರೆ ರಷ್ಯಾ ಮತ್ತು ಉಕ್ರೇನ್ ದೇಶಗಳ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಳ್ಳುತ್ತಿದ್ದು, ಅದರ ಪರಿಣಾಮದಿಂದ ಅದಾಗಲೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್ ಕಚ್ಚಾ ತೈಲದ ಬೆಲೆ ನೂರು ಡಾಲರ್ ದಾಟುತ್ತಿದೆ.

ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಅಕ್ಟೋಬರ್ 2021ರಿಂದ ಫೆಬ್ರವರಿ 2022ರವರೆಗೆ 170 ರೂ.ಗಳಷ್ಟು ಹೆಚ್ಚಿಸಲಾಗಿದೆ. ದೆಹಲಿಯಲ್ಲಿ ಸಿಲಿಂಡರ್ ಬೆಲೆಯು ಅಕ್ಟೋಬರ್ 2021ರಲ್ಲಿ 1736 ರೂ. ಇತ್ತು. ಇದು ಫೆಬ್ರವರಿ 2022ರಲ್ಲಿ 2012ರೂ.ಗೆ ಏರಿಕೆಯಾಗಿದೆ. ಮತ್ತೊಂದೆಡೆ ಗೃಹ ಬಳಕೆಯ ಎಲ್​ಪಿಜಿ ಸಿಲಿಂಡರ್ ಬೆಲೆಯಲ್ಲಿ ಈ ರೀತಿಯ ಬೆಲೆ ಏರಿಕೆಯಾಗದಿರುವುದು ಜನಸಾಮಾನ್ಯರಿಗೆ ಸಮಾಧಾನ ತಂದಿದೆ.

ಈ ಬಾರಿ ಕಮರ್ಷಿಯಲ್​ ಸಿಲಿಂಡರ್ ಬೆಲೆ ಹೆಚ್ಚಾಗಿದೆ. ಮಾರ್ಚ್​ 1ರಂದು 19 ಕೆ.ಜಿ ವಾಣಿಜ್ಯ ಸಿಲಿಂಡರ್ ಬೆಲೆ 105 ರೂ.ಗಳಷ್ಟು ಏರಿಕೆಯಾಗಿದೆ. ಇಂದು ದೆಹಲಿಯಲ್ಲಿ 19 ಕೆ.ಜಿ. ಗ್ಯಾಸ್ ಸಿಲಿಂಡರ್ ಬೆಲೆ 1907 ರೂ.ನಿಂದ 2012ರೂ. ಗೆ ಏರಿಕೆಯಾಗಿದೆ. ಕೊಲ್ಕತ್ತಾದಲ್ಲಿ 1987 ರೂ.ನಿಂದ 2095 ರೂ.ಗೆ ಏರಿಕೆಯಾಗಿದೆ. ಮುಂಬೈನಲ್ಲಿ 1857ರೂ.ನಿಂದ 1963 ರೂ.ಗೆ ಏರಿಕೆಯಾಗಿದೆ.

ಪ್ರಸ್ತುತ ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಚುನಾವಣೆ ಸಮಯದಲ್ಲಿ ಕಳೆದ ಕೆಲವು ತಿಂಗಳಿನಿಂದ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಹೆಚ್ಚಳವಾಗಿಲ್ಲ. 2021 ರ ಅಕ್ಟೋಬರ್‌ನಿಂದ ಎಲ್‌ಪಿಜಿ ಬೆಲೆ ಸ್ಥಿರವಾಗಿದೆ.

ಮಾರ್ಚ್ 7 ರಂದು ಚುನಾವಣೆ ಮುಗಿದ ನಂತರ ಎಲ್‌ಪಿಜಿ ಸಿಲಿಂಡರ್‌ ಬೆಲೆ ಮತ್ತು ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಾಗಬಹುದು ಎಂಬ ಆತಂಕವಿದೆ. ಪ್ರಸ್ತುತ, ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 100 ಡಾಲರ್ ದಾಟಿದೆ.

WhatsApp
Facebook
Telegram
error: Content is protected !!
Scroll to Top