ಭಟ್ಕಳ;ಹೆಬ್ಬಳೆ ಗ್ರಾಮ ಪಂಚಾಯತ ಅಲ್ಲಿ ಬುಗಿಲೆದ್ದ ಕಸದ ಸಮಸ್ಯೆ..!

ಭಟ್ಕಳ: ಕಳೆದ ಸಾಕಷ್ಟು ವರ್ಷದಿಂದ ಇಲ್ಲಿನ ಹೆಬಳೆ ಗ್ರಾಮ ಪಂಚಾಯತ ವ್ಯಾಪ್ತಿಯ ಜಾಮೀಯಾಬಾದನ ಮುಖ್ಯ ರಸ್ತೆಯ ಎರಡು ಕಡೆಗಳಲ್ಲಿ ಸುಮಾರು 500 ಮೀ. ಉದ್ದದ ವರೆಗೂ ಕಸ, ಪ್ಲಾಸ್ಟಿಕ್, ತ್ಯಾಜ್ಯ ವಸ್ತುಗಳು ಗುಡ್ಡೆ ಹಾಕಲಾಗದಿದ್ದು, ವರ್ಷಗಳೆ ಕಳೆಯುತ್ತ ಬಂದರು ಸಹ ಇನ್ನು  ತನಕ ಕಸ ವಿಲೇವಾರಿಯಾಗದೇ ಗ್ರಾಮ ಪಂಚಾಯತ ಸೂಕ್ತ ಕ್ರಮ ತೆಗೆದುಕೊಳ್ಳಲು ಸಂಪೂರ್ಣ ವಿಫಲವಾಗಿದೆ ಎಂಬುದು ವೆಲ್ಪೇರ್‌  ಪಾರ್ಟಿ ಆಪ್‌ ಇಂಡಿಯಾ ಕಾರ್ಯಕರ್ತರ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ.

ಕಸದ ಸಮಸ್ಯೆಗೆ ಪರಿಹಾರ ನೀಡುವ ವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲಾ ಸಂಘಟನೆ ಯಿಂದ ಆಕ್ರೋಶ..!

ಈ ಸಂಘಟನೆಯವರು ಈ ಹಿಂದೆ ಸಹಯಕ ಆಯುಕ್ತರಳೊಗೊಂಡತೆ  ಜಿಲ್ಲಾಧಕಾರಿಗಳಿಗು ಮನವಿಯನ್ನು ಸಲ್ಲಿಸಿದ್ದರು ಆದರೆ ಯಾವುದೆ ಪ್ರಯೋಜನೆವಾಗಿರಲ್ಲಿಲ್ಲಾ  ಇದರಿಂದ ಬೇಸತ್ತ ವೆಲ್ಪೇರ ಪಾರ್ಟಿ ಆಪ ಇಂಡಿಯಾ ಪ್ರತಿಭಟನೆಯ ಹಾದಿಯನ್ನೇ ಹಿಡಿದ್ದಿದೆ .

ವೆಲ್ಪೇರ್‌  ಪಾರ್ಟಿ ಆಪ್‌ ಇಂಡಿಯಾ ಕಾರ್ಯಕರ್ತ ರಿಂದ ಹೆಬ್ಬಳೆ ಗ್ರಾಮ ಪಂಚಾಯತಗೆ ಗೆರಾವ ..!

ತಾಲೂಕಿನ ಹೆಬಳೆ ಗ್ರಾಮ ಪಂಚಾಯತಗೆ ಬೆಳ್ಳಂ ಬೆಳಿಗೆಯೇ ಗೆರವು ಹಾಕುವ ಮೂಲಕ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕೇಂದು ಪಟ್ಟು ಹಿಡಿಯಿತ್ತು.ಇದರಿಂದ ಪಂಚಾಯತ ಅಧಿಕಾರಿಗೊಳಗೊಂಡಂತೆ ಜನಪ್ರತಿನಿಧಿ ಸಹ ಈ ಪ್ರತಿಭಟನೆ ಕಾರಣ ಒಂದು ಕ್ಷಣ ತಡಭಡಿಸಿ ಹೋದರು ನಂತರ ಹೇಗೊ ಸಾವರಿಸಿ ಕೊಂಡು ಮಾಧ್ಯಮವನ್ನು ಹೊರಗಿಟ್ಟು ಸಂದಾನಕಾಗಿ ಪ್ರತಿಭಟನ ಕಾರರನ್ನು ಒಳ ಕರೆದರು .

ಆದರೆ ಪ್ರತಿಭಟನಕಾರರು ತಮಗಿಗಲೆ ಕಸದ ಸಮಸ್ಯೆ ಪರಿಹಾರದ ಬಗೆಯನ್ನು ತಿಳಿಸಿ ಇಲ್ಲಾವಾದಲಿ ಕಸದ ಸಮಸ್ಯೆ ಪರಿಹರಿಸುವುದಾಗಿ ಬರೆದು ಕೊಡಿ ಎಂದು ಪಟ್ಟು ಹಿಡಿದ್ದರು,ಆದರೆ ಇದಕೆ ಪಂಚಾಯತ ಒಪ್ಪಿಕೊಳ್ಳಲಿಲ್ಲಾ ಇಂದರಿಂದ ರೋಚಿಗೆದ್ದ ಪ್ರಟಿಭಟನಕಾರರು ತಮ್ಮ ಪ್ರತಿಭಟನೆಯ ಬಿರುಸನ್ನು ಹೆಚ್ಚಿಸಿದ್ದರು ತಮ್ಮಗೆ ಎಲ್ಲಿಯವರೆಗೆ ಪಂಚಾಯತ ಕಸದ ಸಮಸ್ಯೆ ಬಗೆ ಹರಿಸುವುದಿಲ್ಲವೋ ಅಲ್ಲಿಯವರೆಗೂ ನಾವು ಪಂಚಯತ ಮುಂಭಾಗದಲ್ಲಿ ಪ್ರತಿಭಟಿಸುವುದಾಗಿ ಪಟ್ಟು ಹಿಡಿದ್ದಾರೆ.

ಸಂಘದ ಕಾರ್ಯಕರ್ತರ ಪ್ರಶ್ನೆಗೆ ಕಂಗಾಲಾದ ಹೆಬಳೆ ಪಂಚಾಯತ್‌ ಜನಪ್ರತಿನಿಧಿಗಳು

ಕ್ಷಣ ಕ್ಷಣಕು ಪ್ರತಿಭಟನೆ ಕಾವು ಹೆಚ್ಚಾಗುತ್ತಿತು ಕೊನೆಗೂ ಹೆಬಳೆ ಗ್ರಾಮ ಪಂಚಾಯತ ಪ್ರತಿಭಟನಾ ಕಾರರ ಪ್ರತಿಭಟನೆಗೆ ಮಣಿದು ತುರ್ತು ಪರಿಹಾರವನ್ನು ಒದ್ದಗಿಸಿದು ತಾಲೂಕಿನ  ಜಾಮಿಯಾಬಾದ ರೋಡ್‌ , ಮೀನ್‌ ರೋಡ್‌, ರೆಮತಾ ಬಾದ ರೋಡ್‌ಲ್ಲಿ ಕಸಹಾಕುವ ಜಾಗವನ್ನು ಗೊತ್ತುಗೊಳಿಸಿ ಅಲ್ಲಿ ಕಟ್ಟೆಯನ್ನು ಕಟ್ಟಿ ಸಾರ್ವಜನಿಕರಿಗೆ ಕಸಹಾಕಲು ವ್ಯವಸ್ಥೆ ಮಾಡಿಕೊಡುವುದಾಗಿಯು ಈ ಕಟ್ಟೆಯಲ್ಲಿ ಸಂಗ್ರಹವಾದ ಕಸ ತಾವೆ ಎತ್ತುವುದ್ದಾಗಿ ಭರವಸೆಯನ್ನು ನೀಡಿದ್ದಾರೆ.

ಹೆಬಳೆ ಗ್ರಾಮಪಂಚಾಯತ ವೆಲ್ಪೇರ್‌ ಪಾರ್ಟಿ ಆಪ ಇಂಡಿಯಾದ ಪ್ರತಿಭಟನಾಕಾರರಿಗೆ ನೀಡಿದ ಭರವಸೆ ಇವರು ಎಷ್ಟರ ಪಟ್ಟಿಗೆ ನೇರವೆರಿಸಿಯಾರು ಎಂದು ಕಾದು ನೋಡಬೇಕಾಗಿದೆ.

WhatsApp
Facebook
Telegram
error: Content is protected !!
Scroll to Top