ಉತ್ತರ ಕನ್ನಡ: ಮಳೆಗಾಲದ ಮುನ್ನವೇ ಜನರ ಸ್ಥಳಾಂತರಕ್ಕೆ ಜಿಲ್ಲಾಡಳಿತ ಸಿದ್ಧತೆ..!

ಉತ್ತರಕನ್ನಡ :  ಮಳೆಗಾಲ ಪ್ರಾರಂಭವಾದ್ರೆ ಸಾಕು ಉತ್ತರಕನ್ನಡ ಜಿಲ್ಲೆಯಲ್ಲಂತೂ ಎಲ್ಲೆಡೆಯೂ ಪ್ರವಾಹ ಕಾಣಿಸಿಕೊಳ್ಳುತ್ತದೆ. ಈ ಪ್ರವಾಹದ ಜತೆ ಭೂ ಕುಸಿತ ಹಾಗೂ ಸಮುದ್ರ‌ ಕೊರೆಯು ಸಾಮಾನ್ಯವಾಗಿದೆ. ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಕಾಣಿಸಿಕೊಂಡ ಪ್ರವಾಹವು ಸಾವಿರ ಹೆಕ್ಟೇರ್ ಭೂ ಪ್ರದೇಶಗಳನ್ನು ಆಹುತಿ ಪಡೆದುಕೊಂಡಿದೆ.

ಹೀಗಾಗಿ ಯಲ್ಲಾಪುರ, ಕಾರವಾರ, ಅಂಕೋಲಾ, ಶಿರಸಿ ಭಾಗದ ಪ್ರದೇಶಗಳನ್ನು ಅತೀ ಅಪಾಯಕಾರಿ ಪ್ರದೇಶ ಎಂದು ಗುರುತಿಸಲಾಗಿದೆ. ಇದರೊಂದಿಗೆ ಚಂಡಮಾರುತ, ಪ್ರಕೃತಿ ವಿಕೋಪಗಳಿಂದ ಕಡಲ ಭಾಗದ ಭೂ ಪ್ರದೇಶಗಳು ಕೂಡಾ ಭಾರೀ ಅಪಾಯಕ್ಕೀಡಾಗಿವೆ. 

ಹೀಗಾಗಿ ನ್ಯಾಷನಲ್ ಸೆಂಟರ್ ಫಾರ್ ಕೋಸ್ಟಲ್ ರಿಸರ್ಚ್ (NCCR) ಸಂಸ್ಥೆಯು ಕರಾವಳಿಯ ಆಯ್ದ ಸ್ಥಳಗಳಲ್ಲಿ ಕಡಲ ಕೊರೆತದಿಂದ ಆಗುವ ಅಪಾಯದ ಬಗ್ಗೆ ಅಧ್ಯಯನ ಕೈಗೊಂಡಿದೆ‌‌. ಇನ್ನು ಕಾರವಾರ, ಯಲ್ಲಾಪುರ ತಾಲೂಕುಗಳಲ್ಲಿ ನಿರಂತರ ಭೂ ಕುಸಿತ ವಾಗುತಿದ್ದು, ಕೈಗಾ ಅಣುಸ್ಥಾವರ, ಕದ್ರಾ ಜಲಾಶಯಗಳ‌ ತೀರ ಪ್ರದೇಶಗಳಲ್ಲೂ ಭೂ ಕುಸಿತ ಕಾಣುತ್ತಿದೆ. ಹೀಗಾಗಿ ಈ ಮಳೆಗಾಲದ ಮುನ್ನ ಸ್ಥಳೀಯ ಜನರನ್ನು ಬೇರೆಡೆ ಸ್ಥಳಾಂತರಿಸಲು ಸರಕಾರ ಹಾಗೂ ಜಿಲ್ಲಾಡಳಿತ ವ್ಯವಸ್ಥೆ ಮಾಡುತ್ತಿದೆ. ಇಲ್ಲಿದೆ ಈ ಕುರಿತ ಒಂದು ವರದಿ 

WhatsApp
Facebook
Telegram
error: Content is protected !!
Scroll to Top