Bhatkal : 28/02/2022 ರಂದು ಹೆಬ್ಬಳೆ ಗ್ರಾಮ ಪಂಚಾಯತ ಅಲ್ಲಿ ಬುಗಿಲೆದ್ದ ಕಸದ ಸಮಸ್ಯೆ : ಪಂಚಾಯತ್‌ ಗೇರಾವಿಗೆ ಕರೆಕೊಟ್ಟ ವೆಲ್ಪೇರ್‌ ಪಾರ್ಟಿ ಆಪ್‌ ಇಂಡಿಯಾ

ಭಟ್ಕಳ ತಾಲೂಕಿನ ಹೆಬ್ಳೆ ಪಂಚಾಯತ್‌ ವ್ಯಾಪ್ತೀಯಲ್ಲಿ ಕೆಲವು ವರ್ಷಗಳಿಂದ ಕಸದ ಸಮಸ್ಯೆ ಬುಗಿಲೆದ್ದಿದ್ದ /ಈ ಬಗ್ಗೆ ತಾಲೂಕಿನ ವೆಲ್ಪೇರ್‌ ಪಾರ್ಟಿ ಆಪ್‌ ಇಂಡಿಯಾ ಹಾಲವಾರು ಬಾರಿ ಸ್ಥಳಿಯಾಡಳಿತ ಹಾಗು ತಾಲೂಕಾಡಳಿತಕ್ಕೆ ಮನವಿಯನ್ನು ಸಲ್ಲಿಸುತ್ತ ಬಂದಿದ್ದರು ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ತಾಲೂಕಿನ ವೆಲ್ಪೇರ್‌ ಸೊಸೈಟಿ ಆಪ್‌ ಇಂಡಿಯಾವು ದಿನಾಂಕ 28/02/2022 ರಂದು ಹೆಬ್ಳೆ ಗ್ರಾಮ ಪಂಚಾಯತಗೆ ಗೇರಾವು ಹಾಕಲು ಕರೆಕೊಟ್ಟಿದೆ

ತಾಲೂಕಿನ ವೆಲ್ಪೇರ್‌ ಸೋಸೈಟಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಟಿಯಲ್ಲಿ ತಾಲೂಕಿನ ವೆಲ್ಪೇರ್‌ ಸೊಸೈಟಿ ಆಪ್‌ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಆಶಿಪ್‌ ಶೇಕ್‌ ಅವರು ಮಾತನಾಡಿ ಹೆಬ್ಳೆ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಹಲವಾರು ಸಮಯಗಳಿಂದ ಕಸದ ಸಮಸ್ಯೆ ತಾಂಡವವಾಡುತ್ತಿದೆ ಈ ಬಗ್ಗೆ ನಮ್ಮ ಸಂಘಟನೆ ಅನೇಕ ಬಾರಿ ಮನವಿ ಪ್ರತಿಭಟನೆಗಳನ್ನು ಮಾಡಿರುತ್ತೆವೆ ಆದರೆ ಈ ಬಗ್ಗೆ ಯಾವೊಬ್ಬ ಅಧಿಕಾರಿಗಳು ಕೂಡ ಯಾವುದೆ ಕ್ರಮಕ್ಕೆ ಮುಂದಾಗಲಿಲ್ಲಾ ಕಾರಣ ಕಸದ ಸಮಸ್ಯೆ ಉಲ್ಬಣವಾಗುತ್ತದೆ ಬಂದಿದೆ ನಮಗೆ ಈ ಕಸದ ಸಮಸ್ಯೆಗೆ ಶಾಶ್ವತ ಪರಿಹಾರದ ಅವಶ್ಯಕತೆ ಇದೆ ಈ ಸಮಸ್ಯೆ ಕೂಡಲೆ ಬಗೆ ಹರಿಸದಿದ್ದಲ್ಲಿ ನಾವು ನಮ್ಮ ಸಂಘಟನೆಯ ವತಿಯಿಂದ ದಿನಾಂಕ 28/02/2022 ರಂದು ಅಂದರೆ ಸೋಮವಾರ ಹೇಬ್ಳೆ ಪಂಚಾಯತಗೆ ಸಂಘಟನೆ ಹಾಗು ಸಾರ್ವಜನಿಕರ ಸಹಯೋಗದಲ್ಲಿ ಗೇರಾವ್‌ ಹಾಕಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದ್ದಾರೆ

ಈ ಸಂದರ್ಭದಲ್ಲಿ ಸಂಘಟನೆಯ ಅಬ್ದುಲ್‌ ಜಬ್ಬಾರ್‌ ಅಸದೀನ್‌ ಮಾತನಾಡಿ ನಮ್ಮ ಸಂಘಟನೆಯ ಮೂಲಕ ಹಲವಾರು ಬಾರಿ ನಾವು ಮನವಿಯನ್ನು ಸಲ್ಲಿಸಿದ್ದೆವೆ ಈ ಬಗ್ಗೆ ತಾಲೂಕಾಡಳಿತಕ್ಕೂ ತಿಳಿಸಿದ್ದೆವೆ ಆದರೆ ಈ ಬಗ್ಗೆ ಯಾರು ಈವರೆಗೂ ಕ್ರಮಕ್ಕೆ ಮುಂದಾಗಿಲ್ಲಾ ಆದ್ದರಿಂದ ನಮಗೆ ಗೇರಾವು ಮೂಲಕ ಪ್ರತಿಭಟಿಸುವುದನ್ನು ಬಿಟ್ಟರೆ ಬೇರೆ ಮಾರ್ಗವಿಲ್ಲಾ ಈ ಸಮಸ್ಯೆಗೆ ಶಾಶ್ವತ ಪರಿಹಾರದ ಅಗತ್ಯ ನಮ್ಮ ಸಾರ್ವಜನಿಕರಿಗಿದೆ ಎಂದು ಹೇಳಿದರು

ಈ ಸಂದರ್ಬದಲ್ಲಿ ಸಂಘಟನೆಯ ಉಪಾಧ್ಯಕ್ಷ ಶೌಕತ್‌ ಕತೀಬ್‌ , ನಯಿಮ್‌ , ಸಹಿದ್‌ ಮುಂತಾದವರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top