ಆಕಾಶದಲ್ಲಿ ಹಾರಾಡಿತು ಪೈಲಟ್ ರಹಿತ ಹೆಲಿಕಾಪ್ಟರ್..!

ವಿದೇಶ(ವಾಷಿಂಗ್ಟನ್): ಪೈಲಟ್‌ಗಳಿಲ್ಲದೇ ಸ್ವತಂತ್ರವಾಗಿ ಇದೇ ಮೊದಲ ಬಾರಿಗೆ ಹೆಲಿಕಾಪ್ಟರ್ ಒಂದು ಹಾರಾಟ ನಡೆಸಿದೆ. ಪೈಲಟ್ ರಹಿತ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ 30 ನಿಮಿಷಗಳ ಕಾಲ ಆಕಾಶದಲ್ಲಿ ಸ್ವತಂತ್ರವಾಗಿ ಹಾರಾಟ ನಡೆಸಿದೆ.

ಅಲಿಯಾಸ್ ಎಂಬ ಅಮೆರಿಕಾ ರಕ್ಷಣಾ ಸಂಶೋಧನಾ ಕಾರ್ಯಕ್ರಮದ ಭಾಗವಾಗಿ ಸಂಪೂರ್ಣ ಕಂಪ್ಯೂಟರ್-ಚಾಲಿತ ಹೆಲಿಕಾಪ್ಟರ್‌ಅನ್ನು ಫೆಬ್ರವರಿ 5 ರಂದು ಪರೀಕ್ಷಿಸಲಾಯಿತು. ಮೊದಲ ಪರೀಕ್ಷಾರ್ಥ ಹಾರಾಟದಲ್ಲಿ, ಮಾನವರಹಿತ ಬ್ಲ್ಯಾಕ್ ಹಾಕ್ ಸುಮಾರು 4,000 ಅಡಿ ಎತ್ತರದಲ್ಲಿ ಹಾಗೂ ಗಂಟೆಗೆ ಸುಮಾರು 115 ರಿಂದ 125 ಮೈಲುಗಳ ವೇಗದಲ್ಲಿ ಹಾರಿದೆ.

ಪೈಲಟ್ ರಹಿತ ಹೆಲಿಕಾಪ್ಟರ್ ತಯಾರಿಕೆಗೆ ಮುಖ್ಯ ಕಾರಣ ಸುರಕ್ಷತೆ ಹಾಗೂ ಭೂಮಿಗೆ ಅಪ್ಪಳಿಸುವಂತಹ ಅನಾಹುತಗಳನ್ನು ತಪ್ಪಿಸುವುದು, ಇನ್-ಫ್ಲೈಟ್ ನೆರವು ಹಾಗೂ ಕಡಿಮೆ ವೆಚ್ಚ ಎಂದು ಅಲಿಯಾಸ್ ಪ್ರೋಗ್ರಾಂ ಮ್ಯಾನೇಜರ್ ಸ್ಟುವರ್ಟ್ ಯಂಗ್ ತಿಳಿಸಿದ್ದಾರೆ. 

ಈ ಹೆಲಿಕಾಪ್ಟರ್ ಸೇನಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡುತ್ತದೆ. ಇದು ಹಗಲು ಹಾಗೂ ರಾತ್ರಿಯ ಹೊತ್ತು ಪೈಲಟ್ ಇದ್ದು ಅಥವಾ ಇಲ್ಲದೆಯೂ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಿದರು.

WhatsApp
Facebook
Telegram
error: Content is protected !!
Scroll to Top