ರಾತ್ರಿ ಬೆಳಗಾಗುವುದರೊಳಗೆ ಭಟ್ಕಳ ಬಸ್‌ಸ್ಟಾಂಡ್ ನಲ್ಲಿ ಗೂಡ ಅಂಗಡಿ ;ಬಸ್‌ ಸ್ಟಾಂಡ್ ಅಂಗಡಿಕಾರ ರಿಂದ ಪ್ರತಿಭಟನೆ..!

ಭಟ್ಕಳ: ಬಸ್‌ನಿಲ್ದಾಣದಲ್ಲಿ ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಗುವ ರೀತಿಯಲ್ಲಿ ಹೊಸದಾಗಿ ಇಟ್ಟಿರುವ ನಂದಿನಿ ಪಾರ್ಲರ್ ಗೂಡಾ ಅಂಗಡಿಯನ್ನು ಶಾಶ್ವತವಾಗಿ ಸ್ಥಳಾಂತರ ಮಾಡಿಕೊಡುವಂತೆ ಬಸ್‌ ಸ್ಟಾಂಡ್ ಅಂಗಡಿ ಮಾಲಿಕರಿಂದ ಪ್ರತಿಭಟನೆ.

ಭಟ್ಕಳ ತಾಲೂಕಿನಲ್ಲಿ ಹೊಸದಾಗಿ ಪ್ರಾರಂಭವಾದ ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸುಸಜ್ಜಿತ ಬಸ್‌ನಿಲ್ದಾಣದಲ್ಲಿ ಕಳೆದ 2021 ನೇ ಸಾಲಿನಲ್ಲಿ ನಡೆದ ಟೆಂಡರ್‌ ಭಾಗವಹಿಸಿ ಈಗಾಗಲೇ ಕೆಲವು ಅಂಗಡಿಗಳನ್ನು ಹೆಚ್ಚಿನ ಬಾಡಿಗೆಗೆ ಪಡೆದಿದ್ದರು, ಆದರೆ  ಎಲ್ಲಾ ಕೊರೊನಾ ಹಾವಳಿಯಿಂದ ವ್ಯವಹಾರವು ಕೆಲವು ವರ್ಷಗಳಿಂದ ಕುಂಠಿತವಾಗಿದ್ದು , ಈಗ ಚೇತರಿಸಿಕೊಳ್ಳುವ ಅವಧಿಯ ಮೊದಲೆ ವ್ಯವಹಾರ ಮಾಡುವ ಅಂಗಡಿಯ ಎದುರು ಸಾರ್ವಜನಿಕರಿಗೆ   ಪ್ರಯಾಣಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಗುವ ರೀತಿಯಲ್ಲಿ ಹೊಸದಾಗಿ ನಂದಿನಿ ಪಾರ್ಲರ್ ಹೆಸರಿನಲ್ಲಿ ಗೂಡ ಅಂಗಡಿಯನ್ನು ರಾತ್ರಿ ಬೆಳಗಾಗುವುದರೊಳಗೆ ತಂದಿಟ್ಟಿರುವುದು ಬೆಳಕಿಗೆ ಬಂದಿದ್ದೆ.

ಒಂದು ವೇಳೆ ಈ ಗೂಡಂಗಡಿಯನ್ನು ತೆರೆದಲ್ಲಿ ಈಗಾಗಲೇ ಪ್ರಾರಂಭವಾಗಿರುವ ಅಂಗಡಿಗಳಲ್ಲಿ ವ್ಯವಹಾರ ಕುಂಠಿತವಾಗುತ್ತದೆ . ಈಗ ನಡೆಯುತ್ತಿರುವ ವ್ಯವಹಾರದಿಂದ ಮಾಸಿಕ ಬಾಡಿಗೆ ಮತ್ತು ದಿನ ನಿತ್ಯದ ಖರ್ಚು ವೆಚ್ಚಗಳಿಗೆ ಸರಿದೂಗಿಸಿಕೊಂಡು ಹೋಗಲು ಕಷ್ಟವಾಗುತ್ತದೆ . ಶಾಲಾ ಮಕ್ಕಳಿಗೆ ಮತ್ತು ಪ್ರಯಾಣಿಕರಿಗೆ ಸಂಚರಿಸಲು ಪ್ರತಿ ನಿತ್ಯ ಅಡಚಣೆಯಾಗುತ್ತದೆ .

 ಇಲ್ಲಿ ಅಂಗಡಿ ಇಟ್ಟಿರುವುದರಿಂದ ವಿಚಾರಣೆ ಕೊಠಡಿ ಮತ್ತು ಶೌಚಾಲಯಕ್ಕೆ ಹೋಗುವ ದಾರಿ  ಕಾಣಿಸುವುದಿಲ್ಲ . ಅತಿ ಹತ್ತಿರದಲ್ಲಿ ಹೋಟೆಲ್ ಇರುವುದರಿಂದ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಬಾಡಿಗೆ ಕೊಡುವ ಹೋಟೇಲ್‌ ಮಾಲಕರಿಗೆ  ಇದರಿಂದ ತೊಂದರೆಯಾಗುತ್ತಿದೆ .

ಹೊಸ ನಂದಿನಿ ಪಾರ್ಲರ್ ಅಂಗಡಿಯನ್ನು ಕೂಡಲೇ ಸಾರ್ವಜನಿಕರಿಗೆ ಮತ್ತು ಅಂಗಡಿಕಾರರಿಗೆ ತೊಂದರೆಯಾಗದ ಸ್ಥಳಕ್ಕೆ ಸ್ಥಳಾಂತರ ಮಾಡಿಕೊಡಬೇಕಾಗಿ ಎಂದು ಬಸ್ಸ ಸ್ಟಾಂಡ್‌ ಅಂಗಡಿಕಾರರು ಹಾಗೂ ಸಾರ್ವಜನಿಕರು ಅಗ್ರಹಿಸಿದ್ದರು.

ಈ ಸಂರ್ಭದಲ್ಲಿ ದಲಿತ ಮುಖಂಡ ಮಾರುತಿ ಪವಾಸ್ಕರ, ಅಂಗಡಿಕಾರರಾದ ಮೋಹನ ನಾಯ್ಕ, ನಾಗೇಶ ಸಾಲಿಗ್ರಾಮ , ರಾಘವೇಂದ್ರ ನಾಯ್ಕ. ಶ್ರೀನಿವಾಸ ನಾಯ್ಕ  ಮುಂತಾದವರಿದ್ದರು.

WhatsApp
Facebook
Telegram
error: Content is protected !!
Scroll to Top