ಭಟ್ಕಳ ಪೌರಕಾರ್ಮಿಕರ ಒಕ್ಕಲಿಬಿಸಲು ಮುಂದಾದ ಪುರಸಭೆ; ಜಿಲ್ಲಾಧಿಕಾರಿಗಳ ಮೊರೆ ಹೋದ ಕೊರಗ ಹಿತರಕ್ಷಣೆ ವೇದಿಕೆ ..!

ಭಟ್ಕಳ : ತಾಲೂಕಿನ ಕೋಟೇಶ್ವರ ಕ್ರಾಸ್ ರಸ್ತೆಯ ಕೊರಗರ ಕೇರಿಯಲ್ಲಿ ವಾಸವಿರುವ ಕೊರಗ / ಕೊರಾರ ಜಾತಿಯ ಪೌರಕಾರ್ಮಿಕ ಕುಟುಂಬಗಳಿಗೆ ಸ್ವಂತ ಮನೆ ನಿವೇಶನವನ್ನು ನೀಡಬೇಕೆಂದು ಆಗ್ರಹಿಸಿ ಜಿಲ್ಲಾ ಕೊರಗ ಕೊರಾರ ಹಿತರಕ್ಷಣಾ ವೇದಿಕೆಯಿಂದ ಬುಧವಾರದಂದು ಉಪವಿಭಾಗಾಧಿಕಾರಿ ಮೂಲಕ ಜಿಲ್ಲಾಧಿಕಾರಿಗೆ ಪ್ರತಿಭಟನಾ ಮೆರವಣಿಗೆ ಮೂಲಕ ಮನವಿ ಸಲ್ಲಿಸಿದರು.

ತಾಲೂಕು ಕೋಟೇಶ್ವರ ಕ್ರಾಸ್ ರಸ್ತೆ ಕೊರಗರಕೇರಿಯಲ್ಲಿ ವಾಸವಿರುವ ಕೊರಗ / ಕೊರಾರ ಜಾತಿಯ ಪೌರ ಕಾರ್ಮಿಕ ಕುಟುಂಬಗಳು ಸರಿಸುಮಾರು 100 ವರ್ಷಗಳಿಂದ ಸೂಸಗಡಿ ಗ್ರಾಮದ ಸರ್ವೇ ನಂ : 350ಅ | ಅ | ರಲ್ಲಿ ವಾಸವಿದ್ದು , ಕೆಲವರು ಸ್ವಂತ ಮನೆಗಳನ್ನು ಕಟ್ಟಿ ಕೊಂಡಿದ್ದರೆ ಇನ್ನು ಕೆಲವರು ತಮ್ಮ ಸ್ವಂತ ಕ್ವಾಟ್ರಸ್‌ನಲ್ಲಿ ವಾಸವಿದ್ದಾರೆ.

ಈಗ ರಾಷ್ಟ್ರೀಯ ಹೆದ್ದಾರಿ ಅಗಲೀಕರಣದಲ್ಲಿ ಇಲ್ಲಿನ ಪೌರಕಾರ್ಮಿಕರ ಮತ್ತು ಅವರ ಅವಲಂಬಿತ ಮನೆಗಳು ಅಗಲೀಕರಣಕ್ಕೆ ಹೋಗುತ್ತಿದ್ದು , ಅವ್ರಿಗ್ ಎದ್ ಪರಿಹಾರವಾಗಲಿ ಅಥವಾ ಅವರಿಗೆ ಬದಲಿ ವ್ಯವಸ್ಥೆಯನ್ನು ಮಾಡದೆ.

ಇಲ್ಲಿನ ಪುರಸಭೆ ಅಧಿಕಾರಿಗಳು ಅವರನ್ನು ಅಲ್ಲಿಂದ ಒಕ್ಕಲೆಬ್ಬಿಸುವ ಪ್ರಯತ್ನ ನಡೆಸುತ್ತಿರುವುದು ಕಾನೂನು ಬಾಹಿರವಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ .

ಎಲ್ಲ ಕುಟುಂಬಗಳಿಗೆ ತಲಾ 1 ಗುಂಟೆಯಂತೆ ನಿವೇಶನಗಳನ್ನು ಹ ೦ ಚಿ ಪರಿಶಿಷ್ಟ ಜಾತಿ / ಪ ೦ ಗಡದವರಿಗೆ ಸರ್ಕಾರದ ಯೋಜನೆಯಲ್ಲಿ ಬರುವ ಮನೆಗಳ ಇವರಿಗೆ ಮಂಜೂರಿ ಮಾಡಿ ಇಲ್ಲಿನ ಕೊರಗ / ಕೊರಾರ ಕುಟುಂಬಗಳಿಗೆ ಶಾಶ್ವತ ಮತ್ತು ವ್ಯವಸ್ಥಿತವಾದ ಮನೆಗಳನ್ನು ನಿರ್ಮಾಣ ಕಲ್ಪಿಸ ಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ .

 ಈ ಸ೦ದರ್ಭ ದಲ್ಲಿ ವೇದಿಕೆಯ ರವೀಂದ್ರ ಮಂಗಳ , ರಾಜ್ಯ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಗಳ ಮೀಸಲಾತಿ ರಕ್ಷಣಾ ವೇದಿಕೆ ಜಿಲ್ಲಾ ಸಂಘ ಅಧ್ಯಕ್ಷ ತುಳಸಿದಾಸ ಪಾವಸ್ಕರ ಸೇರಿದಂತೆ ಇಲ್ಲಿನ ಸ್ಥಳೀಯ ನೂರಾರು ಕೊರಗ / ಕೊರಾರ ಸಮಾಜದ ಪೌರ ಕಾರ್ಮಿಕರು ಇದ್ದರು .

WhatsApp
Facebook
Telegram
error: Content is protected !!
Scroll to Top