ಭಟ್ಕಳ:ರಂಜನ್ ಇಂಡೇನ್ ಗ್ಯಾಸ್ ವತಿಯಿಂದ  ಪತ್ರಿಕಾಗೋಷ್ಠಿ. ಶಿವರಾತ್ರಿಯ 12ನೇ ವರ್ಷದ ಪಾದಯಾತ್ರೆಗೆ ಆಹ್ವಾನಿಸಿದ ಶಿವಾನಿ ಶಾಂತಾರಾಮ…!

ಭಟ್ಕಳ : ರಂಜನ್ ಇಂಡೇನ್ ಗ್ಯಾಸ್ ಏಜೆನ್ಸಿಯ ಆಶ್ರಯದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಲೋಕಕಲ್ಯಾಣಾರ್ಥವಾಗಿ ವಿಶ್ವ ಪ್ರಸಿದ್ಧ ಮಹಾಶಿವನ ತಾಣ ಮುರ್ಡೇಶ್ವರಕ್ಕೆ 12 ನೇ ವರ್ಷದ ಬೃಹತ್ ಪಾದಯಾತ್ರೆಯನ್ನು ಮಾ .1 ರಂದು ಹಮ್ಮಿಕೊಳ್ಳಲಾಗಿದೆ ಎಂದು ರಂಜನ್ ಇಂಡೇನ್ ಏಜೆನ್ಸಿಯ ಮಾಲೀಕರಾದ ಶಿವಾನಿ ಶಾಂತಾರಾಮ ಹೇಳಿದರು .

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು , ಅ೦ದು ನಸುಕಿನ ವೇಳೆ 3:45 ಕ್ಕೆ ಇಲ್ಲಿನ ಮೂಡ  ಭಟ್ಕಳ ಚೋಳೇಶ್ವರ ದೇವಸ್ಥಾನದಿಂದ ಪಾ ದಂ ‘ ತಾ ತ್ರಂ ಆರಂಭಿಸಲಾಗುತ್ತದೆ . 7 : 30 ಕ್ಕೆ ಮುರ್ಡೇಶ್ವರ ತಲುಪಲಿದೆ . ಪಾದಯಾತ್ರೆಯು ಸರಿಸುಮಾರು 17 ಕಿ.ಮೀ. ಕ್ರಮಿಸಲಿದ್ದು , ತಾಲೂಕಿನ ವಿವಿಧ ಭಾಗಗಳ ಸಾವಿರಾರು ಭಕ್ತರು ಯಾತ್ರೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು .

ಈ ವರ್ಷ ವಿಶೇಷವಾಗಿ 40 ಮಂದಿ ಪೊಲೀಸರು ಪಾದ ‘ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ . ಯಾತ್ರೆಯುದ್ಧಕ್ಕೂ ಭಕ್ತರಿಗೆ ಹಣ್ಣು , ಪಾನೀಯವನ್ನು ಒದಗಿಸಲಾಗುತ್ತದೆ . ಮುಂಜಾಗೃತಾ ಕ್ರಮವಾಗಿ ಅ೦ಬುಲೆನ್ಸ್ ವ್ಯವಸ್ಥೆಯನ್ನೂ ಮಾಡಲಾಗಿದೆ . ಪಾದಯಾತ್ರೆಯಲ್ಲಿ ಪಾಲ್ಗೊಂಡ ಎಲ್ಲ ಭಕ್ತರಿಗೂ ಮುರ್ಡೇಶ್ವರದಲ್ಲಿ ನೇರವಾಗಿ ಶಿವನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ .

ಅಲ್ಲಿಯೇ ಎಲ್ಲರಿಗೂ ಲಘು ಉಪಹಾರವನ್ನು ನೀಡಲಾಗುತ್ತದೆ . ಭಕ್ತರು ಭಟ್ಕಳಕ್ಕೆ ವಾಪಸ್ಸಾಗಲು 15 ಬಸ್‌ಗಳ ವ್ಯವಸ್ಥೆಯನ್ನೂ ಕಲ್ಪಿಸ ಲಾಗುತ್ತದೆ . ಈ ಪಾದಯಾತ್ರೆಯನ್ನು ಧಾರ್ಮಿಕ ಹಾಗೂ ಆಧ್ಯಾತ್ಮಿಕ ಚಿಂತನೆಯ ಅಡಿಯಲ್ಲಿ ಹಮ್ಮಿಕೊಂಡು ಬರಲಾಗಿದ್ದು , ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ತಿಳಿಸಿದ್ದರು.

.

WhatsApp
Facebook
Telegram
error: Content is protected !!
Scroll to Top