ಶಿವಮೊಗ್ಗ ಕೊಲೆ ಪ್ರಕರಣ – ಹತ್ಯೆ ಮಾಡಿಸಿದ ಆರೋಪಿಗಳು ಪಕ್ಷದ ನಾಯಕರ ಜೊತೆ ಓಡಾಡಿಕೊಂಡು ಇದ್ದಾರೆ: ಎಚ್‍ಡಿಕೆ

ಬೆಂಗಳೂರು: ಬಜರಂಗದಳ ಕಾರ್ಯಕರ್ತ ಹರ್ಷನ ಕೊಲೆ ಪ್ರಕರಣ ಮತ ಬ್ಯಾಂಕ್ ಸೃಷ್ಟಿ ಮಾಡಲು ಹೀಗೆ ಮಾಡ್ತಾ ಇದ್ದಾರೆ. ಮತ ಬ್ಯಾಂಕ್‍ಗಾಗಿ ಹೀಗೆ ಬಡವರನ್ನು ಬಳಸಿಕೊಳ್ಳುತ್ತಿದ್ದಾರೆ. ಅದನ್ನು ಜನ ಅರ್ಥಮಾಡಿಕೊಳ್ಳಬೇಕು. ಹತ್ಯೆ ಮಾಡಿಸಿದ ಆರೋಪಿಗಳು ಪಕ್ಷದ ನಾಯಕರ ಜೊತೆ ಓಡಾಡಿಕೊಂಡು ಇದ್ದಾರೆ ಎಂದು ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಗುಡುಗಿದ್ದಾರೆ.

ಜೆಪಿ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹತ್ಯೆ ಮಾಡಿಸಿದ ಆರೋಪಿಗಳು ಪಕ್ಷದ ನಾಯಕರ ಜೊತೆ ಓಡಾಡಿಕೊಂಡು ಇದ್ದಾರೆ. ಗೊತ್ತಿಲ್ಲದೇ ಇರುವ ಅಮಾಯಕರು ಜೈಲು ಸೇರಿದ್ದಾರೆ. ಇದು ಕಾಂಗ್ರೆಸ್ ನಾಯಕರ ಕೊಡುಗೆಯಾಗಿದೆ. ಸರ್ಕಾರಕ್ಕೆ ಕೇಳ್ತೀನಿ. ಅಲ್ಲಿಯೇ ಗೃಹ ಸಚಿವರು ಇದ್ದಾರೆ. ಸರ್ಕಾರ ನಿದ್ದೆ ಮಾಡ್ತಾ ಇದ್ಯಾ?. ನಿಮ್ಮ ಬಳಿ ಎಲ್ಲಾ ಮಾಹಿತಿ ಇದೆ. ಆತ ನಿಮ್ಮ ಪಕ್ಷಕ್ಕೆ ಬೇಕಾದ ಯುವಕ ಅನ್ನೋ ಮಾಹಿತಿ ಇದೆ. ಆತನ ಚಲನ ವಲನ ಎಲ್ಲಾ ನಿಮಗೆ ಗೊತ್ತಿದೆ. ಆದರೂ ರಕ್ಷಣೆ ನೀಡಲಿಲ್ಲ. ಇಷ್ಟೆಲ್ಲ ಸಮಸ್ಯೆಗಳು ಇದ್ದರೂ ಚರ್ಚೆಗೆ ಅವಕಾಶ ಕೊಡಲಿಲ್ಲ. ಈಗೇನೋ ರಾಜ್ಯಪಾಲರ ಬಳಿ ವಾಕಿಂಗ್ ಮಾಡ್ತಾರಂತೆ ಕಾಂಗ್ರೆಸ್‍ನವರು ಯಾವ ಪುರುಷಾರ್ಥಕ್ಕೆ ಹೋಗ್ತೀರಾ? ಯಾವ ಮುಖ ಹೊತ್ತುಕೊಂಡು ಹೋಗ್ತೀರಾ?. ಇದೊಂದು ಡ್ರಾಮಾ ರಾಜ್ಯದ ಜನ ನೋಡಬೇಕು. ಬಿಜೆಪಿಯ ಲೋಕಸಭಾ ಸದಸ್ಯರು ಹೇಳ್ತಾರೆ ಅಸಮರ್ಥ ಸರ್ಕಾರ ಅಂತ. ಇಂಥ ವಾತಾವರಣ ನಿರ್ಮಾಣ ಆಗಲು ಸರ್ಕಾರವೇ ಕಾರಣ ಎಂದು ವಾಗ್ದಾಳಿ ನಡೆಸಿದರು. 

ಶಿಕ್ಷಣ ಕ್ಷೇತ್ರ ಬಂದ್ ಮಾಡಿಕೂತಿದ್ದಾರೆ. ಕೇಂದ್ರ ಸರ್ಕಾರ ಈ ಸರ್ಕಾರವನ್ನು ವಜಾ ಮಾಡಬೇಕಾದ ಪರಿಸ್ಥಿತಿ ಇದೆ. ರಾಜ್ಯಪಾಲರು ಮಧ್ಯಸ್ಥಿಕೆ ವಹಿಸಬೇಕಾಗಿದೆ. ಈ ಸರ್ಕಾರಕ್ಕೆ ಗಾಂಭೀರ್ಯತೆ ಇದ್ಯಾ. ನೊಂದು ಈ ಮಾತು ಹೇಳ್ತಾ ಇದ್ದೀನಿ. ಹೈಕೋರ್ಟ್ ಗುಂಡಿ ವಿಚಾರಕ್ಕೆ ಬಿಬಿಎಂಪಿಗೆ ನಿತ್ಯ ಛೀಮಾರಿ ಹಾಗ್ತಾನೇ ಇದೆ. ನಿಮ್ಮನ್ನು ಜೈಲಿಗೆ ಹಾಕಬೇಕಿತ್ತು ಔದಾರ್ಯ ತೋರಿಸಿದ್ದೇವೆ ಅಂತಾರೆ ನ್ಯಾಯಾಧೀಶರು ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು

ಶಿವಮೊಗ್ಗ ದಲ್ಲಿ ಕೊಲೆ ಘಟನೆ ನೋಡಿದ್ದೇವೆ. ಇದಕ್ಕೆಲ್ಲಾ ಕಾರಣ ಯಾರು ಅಂತ ವಿರೋಧ ಪಕ್ಷ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಬೇಕಿತ್ತು. ಇದು ನೈತಿಕತೆಯ ಅದಃಪತನ ಕಂಡಿದ್ದಾರೆ ವಿರೋಧ ಪಕ್ಷ. ಬಿಜೆಪಿ ನಾಯಕರಿಗೂ ಕೇಳ್ತಿನಿ. ಈ ಘರ್ಷಣೆಯಲ್ಲಿ ಹಲವಾರು ಕುಟುಂಬ ಬೀದಿ ಪಾಲಾಗಿವೆ. ಯಾರೇ ಆಗಿರಲಿ ಆದರೆ ಕುಟುಂಬ ಬೀದಿಪಾಲಾಗುತ್ತಿವೆ. ಆ ಕುಟುಂಬದ ಪರಿಸ್ಥಿತಿ ಯೋಚನೆ ಮಾಡಿದ್ದೀರಾ ಎರಡು ರಾಷ್ಟ್ರೀಯ ಪಕ್ಷಗಳು. ಸತ್ತಿರುವ ಆ ಯುವಕರ ಕುಟುಂಬ ಶ್ರೀಮಂತರ ಕುಟುಂಬ ಅಲ್ಲ. ಶ್ರಮಿಕ ವರ್ಗದ ಕುಟುಂಬಗಳು. ಎರಡು ರಾಷ್ಟ್ರೀಯ ಪಕ್ಷಗಳ ಚೆಲ್ಲಾಟವನ್ನು ಜನ ಅರ್ಥ ಮಾಡಿಕೊಳ್ಳಬೇಕು. ಆಗ ಬೆಸ್ತ ಸಮಾಜದ ಯುವಕ ಕೊಲೆಯಾಗ್ತಾನೆ. ಈಗ ಸಣ್ಣ ಸಮಾಜದ ಯುವಕ ಕೊಲೆಯಾಗ್ತಾನೆ. ಒಬ್ಬೊಬ್ಬರು ಒಂದೊಂದು ಕಥೆ ಹೇಳ್ತಾರೆ. ಒಬ್ಬರು, 12 ಜನ ಅರೆಸ್ಟ್ ಅಂತಾರೆ. ಇದನ್ನು ಎಷ್ಟು ದಿನ ಪ್ರಚಾರಕ್ಕೆ ಇಡ್ತೀರಾ. ಸತ್ಯಾ ಸತ್ಯತೆ ಯಾವಾಗ ಹೊರ ಬರೋದು. ಮರಣ ದೊಳ್ಳುರಿಯನ್ನು ಪ್ರಚಾರ ಮಾಡ್ತೀರಾ?. ಸಿಎಎ ಘಟನೆಯಲ್ಲಿ ಮಂಗಳೂರಲ್ಲಿ ಇಬ್ಬರು ಮುಸ್ಲಿಂ ಯುವಕರ ಮೇಲೆ ಗುಂಡು ಹಾರಿಸಿದ್ರು. ನಂತರ 10 ಲಕ್ಷ ಹಣ ನೀಡಿ ಮತ್ತೆ ಗೂಂಡಾಗಳು ಅಂತ ಹೇಳಿದ್ರಿ. ಯಾವ ಸರಿಯಾದ ತನಿಖೆ ಜನರ ಮುಂದೆ ಇಟ್ಟಿದ್ದೀರಾ. ಡಿಜೆ ಹಳ್ಳಿಯಲ್ಲಿ ನಡೆದ ಘಟನೆಗೆ ಯಾರು ಕಾರಣ? ಅನೇಕ ಯುವಕರನ್ನು ಈಗಲೂ ಜೈಲಿನಲ್ಲಿ ಇಟ್ಟಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು

WhatsApp
Facebook
Telegram
error: Content is protected !!
Scroll to Top