ಹಾರ್ಟ್ ಇಮೋಜಿ ಕಳುಹಿಸಿದ್ರೆ 20 ಲಕ್ಷ ದಂಡ..! ಯಾವ ದೇಶ ನಿಷೇಧ ಹೇಗಿದು ಗೊತ್ತಾ ..!

ದೇಶ (ರಿಯಾದ್): ಇಂದು ಹೆಚ್ಚಿನ ಸಂವಹನ ಇಮೋಜಿಗಳಲ್ಲಿಯೇ ಮುಗಿದು ಹೋಗುತ್ತದೆ.  ಕುಟುಂಬಸ್ಥರು ಕುಳಿತು ಹರಟೆ ಹೊಡೆಯುವ ಕಾಲ ಬದಲಾಗಿದೆ. ಸೋಶಿಯಲ್ ಮೀಡಿಯಾ ಮೂಲಕವಾಗಿಯೇ ಇಂದು ಹೆಚ್ಚಿನ ಸಂವಹನ ನಡೆಯುತ್ತದೆ. ವಾಟ್ಸಪ್‌, ಮೆಸೆಂಜರ್ ಆ್ಯಪ್‍ನಲ್ಲಿ ಹಾರ್ಟ್ ಇಮೋಜಿಗಳನ್ನು ಕಳುಹಿಸಿದರೆ ಜೈಲು ಶಿಕ್ಷೆ, 20 ಲಕ್ಷ ದಂಡವನ್ನು ಹಾಕಿರುವುದು ಸೌದಿ ಅರೇಬಿಯಾದಲ್ಲಿ ಸುದ್ದಿಯಾಗಿದೆ.

ಇಂಥಹದ್ದೊಂದು ವಿಚಿತ್ರ ಕಾನೂನು ಜಾರಿ ಮಾಡಿರುವುದು ಸೌದಿ ಅರೇಬಿಯಾದಲ್ಲಿ. ಯಾರಿಗಾದರೂ ಕೆಂಪು ಬಣ್ಣದ ಹೃದಯದ ಇಮೋಜಿ ಕಳುಹಿಸಿ ತಪ್ಪಿತಸ್ಥರೆಂದು ಸಾಬೀತಾದರೆ 2ರಿಂದ 5 ವರ್ಷಗಳ ಕಾಲ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ಇದಲ್ಲದೆ, ಕಳುಹಿಸುವವರಿಗೆ 20 ಲಕ್ಷ ದಂಡವನ್ನು ವಿಧಿಸಬಹುದಾಗಿದೆ. ಸೌದಿ ಅರೇಬಿಯಾದ ಆ್ಯಂಟಿ ಫ್ರಾಡ್ ಅಸೋಸಿಯೇಶನ್ ಈ ಕುರಿತು ಆದೇಶ ಹೊರಡಿಸಿದೆ.

ಕೆಂಪು ಹೃದಯದ ಇಮೋಜಿಯನ್ನು ಕಳುಹಿಸುವುದು ಅಪರಾಧವಾಗಿದೆ. ಆನ್‍ಲೈನ್ ಚಾಟಿಂಗ್ ಸಮಯದಲ್ಲಿ ಸ್ವೀಕರಿಸುವವರು ಪ್ರಕರಣ ದಾಖಲಿಸಿದರೆ, ಈ ಕಿರುಕುಳವು ಅಪರಾಧದ ವರ್ಗಕ್ಕೆ ಬರುತ್ತದೆ. ಸಂದೇಶವನ್ನು ಸ್ವೀಕರಿಸಿದವರು ದೂರು ಸಲ್ಲಿಸಿದರೆ ನ್ಯಾಯಾಲಯದಲ್ಲಿ ಅಪರಾಧ ಸಾಬೀತಾದರೆ, ಶಿಕ್ಷೆ, ದಂಡ ವಿಧಿಸಲಾಗುತ್ತದೆ. 

WhatsApp
Facebook
Telegram
error: Content is protected !!
Scroll to Top