ದಿ ಕಾಶ್ಮೀರ್ ಫೈಲ್ಸ್’ ಟ್ರೈಲರ್ ಬಿಡುಗಡೆ: ಪಂಡಿತರ ಬಲವಂತದ ವಲಸೆ, ಸಮುದಾಯ ಎದುರಿಸಿದ ಅನ್ಯಾಯ ಬಿಂಬಿತ ಚಿತ್ರ ಬಿಡುಗಡೆಗೆ ಸಿದ್ದವಾಗುತ್ತಿದೆ..

ದೇಶ (ತೆಲಂಗಾಣ): ವಿವೇಕ್ ರಂಜನ್ ಅಗ್ನಿಹೋತ್ರಿ ಅವರ ನಿರ್ದೇಶನದ ಚಿತ್ರ ‘ದಿ ಕಾಶ್ಮೀರ್ ಫೈಲ್ಸ್’ ಟ್ರೈಲರ್ ಇಂದು ಬಿಡುಗಡೆಯಾಗಿದೆ. ಈ ಸಿನೆಮಾದ ಚಿತ್ರಕಥೆ ಕಣಿವೆಯಿಂದ ಕಾಶ್ಮೀರಿ ಪಂಡಿತರ ಬಲವಂತದ ವಲಸೆ ಮತ್ತು ಸಮುದಾಯ ಎದುರಿಸಿದ ಅನ್ಯಾಯವನ್ನು ಬಿಂಬಿಸುತ್ತಿದೆ.

ಕಾಶ್ಮೀರ ಫೈಲ್ಸ್ ಟ್ರೇಲರ್ ಮೂರು ದಶಕಗಳಿಗೂ ಹೆಚ್ಚು ಕಾಲ ನಡೆದಿವೆ ಎನ್ನಲಾದ ಘಟನೆಗಳ ಕುತೂಹಲಕಾರಿ ಮತ್ತು ಕರುಳು ಹಿಂಡುವ ಕಥೆಯ ಸುಳಿವು ನೀಡುತ್ತದೆ. ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ಪಲ್ಲವಿ ಜೋಶಿ ಮತ್ತು ಪುನೀತ್ ಇಸ್ಸಾರ್ ಇತರರ ತಾರಾಬಳಗ ಇರುವ ಈ ಚಿತ್ರವು US ನಲ್ಲಿ ಕೆಲವು ಆಯ್ದ ಪ್ರದರ್ಶನಗಳನ್ನು ಕಂಡಿದೆ. ಇದರಲ್ಲಿ ಪಂಡಿತ್ ಡಯಾಸ್ಪೋರಾದ ಅನೇಕ ಸದಸ್ಯರು ಭಾಗವಹಿಸಿದ್ದರು.

ಸಿನೆಮಾಕ್ಕೆ ವಿಷಯವನ್ನು ಆಯ್ಕೆ ಮಾಡಿಕೊಳ್ಳುವ ಮೊದಲು ಅವರು ಸುಮಾರು 700 ಕಥೆಗಳನ್ನು ನಿರ್ದೇಶಕರು ಸಂಗ್ರಹಿಸಿದ್ದಾರೆ. ಅಲ್ಲದೇ, ಅವರು ತಮ್ಮ ಚಿತ್ರ ತಂಡದೊಂದಿಗೆ ಹಗಲಿರುಳು ಪ್ರಯಾಣಿಸಿ ಮೊದಲ ತಲೆಮಾರಿನ ಸಂತ್ರಸ್ತರನ್ನು ಭೇಟಿಯಾಗಿದ್ದಾರೆ.

ಝೀ ಸ್ಟುಡಿಯೋಸ್ ಮತ್ತು ತೇಜ್ ನಾರಾಯಣ್ ಅಗರ್ವಾಲ್, ಅಭಿಷೇಕ್ ಅಗರ್ವಾಲ್, ಪಲ್ಲವಿ ಜೋಷಿ ಮತ್ತು ವಿವೇಕ್ ಅವರು ನಿರ್ಮಿಸಿರುವ ಎಕ್ಸೋಡಸ್ ಡ್ರಾಮಾ ಮಾರ್ಚ್ 11, 2022 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.

WhatsApp
Facebook
Telegram
error: Content is protected !!
Scroll to Top